ಬಸವನಬಾಗೇವಾಡಿ:
ವಚನ ಪಿತಾಮಹಾ ಡಾ. ಫ.ಗು ಹಳಕಟ್ಟಿ, ಪೂಜ್ಯ ಲಿಂಗಾನಂದ ಸ್ವಾಮೀಜಿ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನವನ್ನು ತಾಲೂಕಿನ ಮನಗೂಳಿಯ ವಿರಕ್ತಮಠದಲ್ಲಿ ಜೂನ್ 29 ಹಾಗೂ 30ರಂದು ಆಯೋಜಿಸಲಾಗಿದೆ ಎಂದು ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಜೂ 29ರಂದು ಸೋಮವಾರ ಸಂಜೆ ಡಾ. ಫ.ಗು ಹಳಕಟ್ಟಿಯವರ ಸ್ಮರಣೋತ್ಸವದ ಉದ್ಘಾಟನೆ,
ಷಟಸ್ಥಲ ಧ್ವಜಾರೋಹಣ, ಭಾವಚಿತ್ರಗಳಿಗೆ ಪುಷ್ಪವೃಷ್ಟಿ, ಪ್ರಾರ್ಥನೆ ಹಾಗೂ ಶಿವಾನುಭವ ಗೋಷ್ಟಿ ಜರುಗುವುದು.
30ರಂದು ಮಂಗಳವಾರ ಬೆಳಿಗ್ಗೆ ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನ ಸಾಮೂಹಿಕ ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಕೃತಿ ಬಿಡುಗಡೆ, ಸಾಮೂಹಿಕ ವಚನ ಪಠಣ, ಶಿವಾನುಭವ ಗೋಷ್ಠಿ ಕಾರ್ಯಕ್ರಮಗಳು ಜರುಗಲಿವೆ ಎಂದು ಸ್ವಾಮೀಜಿ ಹೇಳಿದ್ದಾರೆ.
