ಕೊಲ್ಹಾಪುರದಲ್ಲಿ ಲಿಂಗಾಯತ ಸಮಾಜದ ಬೃಹತ್ ಪ್ರತಿಭಟನೆ

ಸರಕಾರದಿಂದ ಬೇಡಿಕೆ ಈಡೇರಿಸುವ ಭರವಸೆ

ಸೊಲ್ಲಾಪುರ:

ಪ್ರಾಂತ್ಯದ ಲಿಂಗಾಯತ ಸಮಾಜದ ಸದಸ್ಯರು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ.

ಈಚೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಜಗದ್ಗುರು ಮಹಾತ್ಮ ಬಸವೇಶ್ವರ ಆರ್ಥಿಕ ವಿಕಾಸ ಮಹಾಮಂಡಳಿಗೆ ಸ್ವಾಯತ್ತತೆಯ ಸ್ಥಾನ ಕೊಡಬೇಕು, ಮಹಾಮಂಡಳಿಗೆ ೧ ಸಾವಿರ ಕೋಟಿ ರೂ.ಗಳ ನಿಧಿ ಒದಗಿಸುವದು, ಯವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ಯೊಜನೆ ರೂಪಿಸುವುದಂತಹ ಪ್ರಮುಖ ಬೇಡಿಕೆಗಳಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಹಿನ್ನಲೆಯಲ್ಲಿ ಲಿಂಗಾಯತ ಸಮುದಾಯದ ನಿಯೋಗವೊಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಕೂಡ ಭೇಟಿ ಮಾಡಿ ಮನವಿ ನೀಡಿದೆ.

ಲಿಂಗಾಯತ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಅಗತ್ಯವಾದ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯವರ ಗಮನ ಸೆಳೆಯಲಾಯಿತು.

ವಿಶೇಷವಾಗಿ, ಮಹಾತ್ಮ ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮದ ಕಠಿಣ ನಿಯಮಗಳನ್ನು ಸಡಿಲಿಸುವುದು, ಸಮುದಾಯದ ಕೊನೆಯ ವರ್ಗಕ್ಕೂ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು, ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು ಮತ್ತು ಸಮುದಾಯದ ಇತರ ಬಾಕಿ ಇರುವ ಸಮಸ್ಯೆಗಳ ಕುರಿತು ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಯಿತು.

ಸರ್ಕಾರವು ಸಮುದಾಯದ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಫಡ್ನವೀಸ್ ಭರವಸೆ ನೀಡಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಶಿವಾಜಿ ಪಾಟೀಲ, ಶಾಸಕ ಗೋಪಿಚಂದ ಪಡಳಕರ, ಶಾಸಕ ರಾಜೇಂದ್ರ ಪಾಟೀಲ, ಮಂಗೇಶ ದಾದಾ ಚಿವ್ಟೆ, ಕುಸ್ತಿಪಟು ನಿತಿನ ಪಾಟೀಲ, ಸಂಜಯ ತೇಲ್ನಾಡೆ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments
  • ಜಯ ಮೃತ್ಯುಂಜಯ ರನ್ನು ನಂಬಿ ಏನಾದರೂ ಮಾಡುವುದು ತಪ್ಪೇ. ಇವರು ಒಮ್ಮೊಮ್ಮೆ ಲಿಂಗಾಯತ ಧರ್ಮ ವಿರೋಧವಾಗಿ ಹಿಂದೂ ಧರ್ಮ ಅಂತ ಹೇಳುತ್ತಾರೆ.
    ಒಬ್ಬ ವ್ಯಕ್ತಿ ಮತ್ತು ಒಂದು ಪಕ್ಷದ ಹಿತಾಸಕ್ತಿ ಕಾಪಾಡುವ ಕೆಲಸವಾಮಾಡುತ್ತಾರೆ. ಅವರ ನಿರ್ಣಯ ,ಕೆಲಸಗಳು ಪ್ರಬುದ್ಧತೆ ಯಿಂದ ಕೂಡಿರುವುದಿಲ್ಲ

  • ಮುರುತ್ಯಂಜಯ ಸ್ವಾಮಿ ಬಗ್ಗೆ ಎಚ್ಚರವಿರಲಿ.ಅವರು ರಾಜ ಕಾರಣಿ ತರಹ ಇದ್ದಾರೆ.ನಿಮ್ಮಬೇಡಿಕೆ ಮುಕ್ತವಾಗಿದೆ. ಜೈ ಬಸವ

Leave a Reply

Your email address will not be published. Required fields are marked *