ಬೆಳಗಾವಿ:
ವಚನ ಪಿತಾಮಹ ಡಾ. ಫ ಗು ಹಳಕಟ್ಟಿಯವರ ಜಯಂತಿ ನಿಮಿತ್ತ ರವಿವಾರ ಗುರು ಬಸವ ಬಳಗದಿಂದ ಬೆಳಗಾವಿ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಜರುಗಿತು.
12 ನೆಯ ಶತಮಾನದ 15 ವಚನಕಾರರ ಪ್ರತಿ ಶರಣರ ಕನಿಷ್ಠ 5 ವಚನ ಹೇಳುವುದು ಕಡ್ಡಾಯ. ಅದರಂತೆ ಪ್ರತಿ ಶರಣರ ಗರಿಷ್ಠ 25 ವಚನ ಮೀರುವಂತಿಲ್ಲ ಎಂಬ ನೇಮದಡಿ ಸ್ಪರ್ಧೆ ಜರುಗಿತು.

ಪೂಜ್ಯ ವಾಗ್ದೇವಿ ತಾಯಿ ಮತ್ತು ಪೂಜ್ಯ ಕುಮುದಿನಿ ತಾಯಿಯವರ ಆಶಯ ಹಾಗೂ ಪ್ರೇರಣೆಯಿಂದ ಜರುಗಿದ ಈ ಸ್ಪರ್ಧೆಯಲ್ಲಿ ಜಿಲ್ಲೆಯ 20 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಚೆನ್ನಪ್ಪ ನರಸನ್ನವರ 236 ವಚನಗಳನ್ನು ಕಂಠಪಾಠದಿಂದ ಹೇಳಿ ಪ್ರಥಮ ಸ್ಥಾನ ಪಡೆದರು. 208 ವಚನ ಹೇಳಿದ ಸರಸ್ವತಿ ಯಡಾಲ ದ್ವಿತೀಯ ಸ್ಥಾನ ಹಾಗೂ 184 ವಚನ ಹೇಳಿದ ಸಂಕೇತ ಮೇಟಿ ತೃತಿಯ ಸ್ಥಾನ ಪಡೆದುಕೊಂಡರು. 131 ವಚನ ಹೇಳಿದ ಶಕುಂತಲಾ ನರಸನ್ನವರ ಅವರು ಸಮಾಧಾನಕರ ಬಹುಮಾನ ಪಡೆದುಕೊಂಡರು.

ನಂತರ ನಡೆದ ಪ್ರಮಾಣಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯಣ್ಣವರ ವಹಿಸಿಕೊಂಡು ಮಾತನಾಡಿದರು. ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಪದಾಧಿಕಾರಿ ಸಿ.ಎಂ. ಬೂದಿಹಾಳ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.

ನ್ಯಾಯವಾದಿ ಜೇವನಿ ಪ್ರಾರ್ಥಿಸಿದರು. ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು. ನಾಗಪ್ಪ ಉಪ್ಪಿನ ಶರಣು ಸಮರ್ಪಣೆ ಮಾಡಿದರು.

ಇದೇ ಸಂದರ್ಭದದಲ್ಲಿ ಪ್ರಸಾದ ದಾಸೋಹಿಗಳಾದ ಸುರೇಶ ನರಗುಂದ ದಂಪತಿಯನ್ನು ಗೌರವಿಸಲಾಯಿತು.
ಸ್ಪರ್ಧೆಯ 20 ಜನ ನಿರ್ಣಾಯಕರು, ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಬಂದ ಬಳಗದ ಸದಸ್ಯರು, ಲಿಂಗಾಯತ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
