ದಾಂಡೇಲಿಯಲ್ಲಿ ಲಿಂಗಾಯತ ಧರ್ಮ ಜಾಗೃತಿ ಸಭೆ

ಬಸವ ಮೀಡಿಯಾ
ಬಸವ ಮೀಡಿಯಾ

ದಾಂಡೇಲಿ:

ಲಿಂಗಾಯತ ಒಳ ಪಂಗಡಗಳ ಒಕ್ಕೂಟದಿಂದ ಸಮೀಪದ ವಿಟ್ನಾಳ ಗ್ರಾಮದ ನದಿ ಮನೆ ಕಾಟೇಜನಲ್ಲಿ ಲಿಂಗಾಯತ ಧರ್ಮದ ಜಾಗೃತಿ ಹಾಗೂ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ಮಾಡುವ ಬಗ್ಗೆ ಚಿಂತನ ಮಂಥನ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಪ್ರೊ. ಸಂಜಯ ಮಾಕಲ್‌ ಅವರು ಲಿಂಗಾಯತರು ಅಲ್ಪಸಂಖ್ಯಾತ ಸ್ಥಾನ ಪಡೆಯುವ ದಾರಿಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಚಿಂತಾಮಣಿ ವ್ಹಿ. ಸಿಂದಗಿ ಅವರು ವಹಿಸಿದ್ದರು.

ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಅವರಿಂದ ಹಲವಾರು ಶರಣ ಶರಣೆಯರು ಲಿಂಗದೀಕ್ಷೆ ಪಡೆದುಕೊಂಡರು.

ಮಹಾಂತೇಶ ಪಟ್ಟಣಶೆಟ್ಟಿ, ಜಗನ್ನಾಥ ಬನ್ಸಾಲಿ, ಸಿ.ಜಿ. ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಪ್ರಜ್ಞಾ ಶೆಟ್ಟರ, ಗವಿಸಿದ್ದಪ್ಪ ಗದಗ, ಮಾಲತೇಶ ಕಣವಿ, ನವೀನಕುಮಾರ ಸುರೇಬಾನ, ಸಂದೀಪ ಕುಂಬಿ, ನೀಲಮ್ಮ ಪಾಟೀಲ ಮತ್ತಿತರ ಮುಖಂಡರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *