ಕೊಪ್ಪಳದಲ್ಲಿ ನುಲಿಯ ಚಂದಯ್ಯ, ನಾರಾಯಣ ಗುರು ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ :

ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶರಣ ನುಲಿಯ ಚಂದಯ್ಯ ಅವರ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿಗಳ ಆಪ್ತ ಸಹಾಯಕಿ ವಿಜಯಲಕ್ಷ್ಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಸಮಾಜದ ಮುಖಂಡರೊಂದಿಗೆ ಸೇರಿ ನುಲಿಯ ಚಂದಯ್ಯನವರ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಶರಣ ನುಲಿಯ ಚಂದಯ್ಯ ಜಯಂತಿ:

12ನೇ ಶತಮಾನದ ಮಹಾನ್ ಶರಣ, ವಚನಕಾರ ಹಾಗೂ ಕಾಯಕಯೋಗಿ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಕೊರಮ ಸಮಾಜ ರಾಜ್ಯ ಉಪಾಧ್ಯಕ್ಷರಾದ ಕಂಬಣ್ಣ ಭಜಂತ್ರಿ, ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ ಓಜನಹಳ್ಳಿ, ತಾಲೂಕ ಅಧ್ಯಕ್ಷರಾದ ಲಕ್ಷ್ಮಣ ಇಂದ್ರಪ್ಪ ಭಜಂತ್ರಿ, ತಾಲೂಕು ಉಪಾಧ್ಯಕ್ಷರಾದ ನಾಗರಾಜ ಭಜಂತ್ರಿ, ಸಮಾಜದ ಮುಖಂಡರಾದ ಹನುಮಂತ ಭಜಂತ್ರಿ, ಯಮನೂರು ಭಜಂತ್ರಿ, ಲಕ್ಷ್ಮಣ ಮಾಳಗಿ, ಹನುಮಂತ ಭಜಂತ್ರಿ, ಶರಣಪ್ಪ ಭಜಂತ್ರಿ, ಕರಿಯಪ್ಪ ಭಜಂತ್ರಿ, ನಾಗಪ್ಪ ಹೇರೂರು, ಶಿವು ಭಜಂತ್ರಿ, ಹನುಮಂತ ಬಜಂತ್ರಿ, ಹುಲಿಗೇಶ ಹಾಗೂ ಮತ್ತಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ:

ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಕಾರ್ಯಕ್ರಮದಲ್ಲಿ ಈಡಿಗ ಸಮಾಜದ ಜಿಲ್ಲಾ ಅಧ್ಯಕ್ಷರಾದ ಈರಣ್ಣ ಹುಲಿಗಿ, ಉಪಾಧ್ಯಕ್ಷರಾದ ಎ.ವಿ. ರವಿ, ಸಮಾಜದ ಮುಖಂಡರಾದ ವೆಂಕಟೇಶ ಹೆಚ್. ಗಂಗಾವತಿ, ಅನಿಲ ಹುಲಿಗಿ, ಕಿರಣಕುಮಾರ ಗಂಗಾವತಿ, ಮಂಜುನಾಥ, ರಾಘವೇಂದ್ರ, ಮರಿಯಪ್ಪ, ಬಸವರಾಜ, ಶರಣಪ್ಪ, ರಮೇಶ, ನೀರುಪಾದಿ, ರಾಘವೇಂದ, ಮುನಿರಾಜ ಮತ್ತು ಅನೇಕರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *