ದಾವಣಗೆರೆ:
ರಾಷ್ಟ್ರೀಯ ಬಸವದಳದಿಂದ ನಡೆಯುತ್ತಿರುವ 21 ನೇ ದಿನದ ಬಸವ ಜ್ಯೋತಿ ಚಿಂತನ ಕಾರ್ಯಕ್ರಮ ಗುರುವಾರ ನಿಟುವಳ್ಳಿಯ ಶಿವಮ್ಮ ಲಕ್ಷ್ಮಿಕಾಂತ ಅವರ ಮನೆಯಲ್ಲಿ ನಡೆಯಿತು.
ದೇವರನ್ನು ಶಿವ ಶಂಕರ ಪರವಸ್ತು ಪರಮಾತ್ಮ ಸತ್ ಚಿತ್ ಆನಂದ ಸ್ವರೂಪ ಎಂದು ಅನೇಕ ಹೆಸರುಗಳಿಂದ ಕರೆಯುತ್ತೇವೆ. ನಾವು ಯಾವ ಹೆಸರಿನಿಂದ ಕರೆದರು, ಸ್ಮರಣೆ ಮಾಡುವುದು ದೇವರನ್ನೇ ಆಗಿರುತ್ತದೆ. ದೇವನೊಬ್ಬ ನಾಮ ಹಲವು ಎಂಬ ವಚನದ ಕುರಿತು ಅವರಗೆರೆ ರುದ್ರಮುನಿ ಅವರು ಮಾತನಾಡಿದರು.
ಒಂದು ಒಡವೆ ನಮ್ಮ ಕೈ ಸೇರಬೇಕಾದರೆ, ಭೂಮಿಯನ್ನು ಅಗೆದು ಖನಿಜವನ್ನು ತೆಗೆದು, ಕಚ್ಚಾ ಖನಿಜ ಕಾರ್ಖಾನೆಯಲ್ಲಿ ಬೆರ್ಪಟ್ಟು, ಗಟ್ಟಿ ಬಂಗಾರವಾಗಿ, ಅಕ್ಕಸಾಲಿಗರ ಕೈಯಿಂದ ಆಭರಣಗಳಾಗುತ್ತವೆ. ಅನಂತರ ನಮ್ಮ ಕೈ ಸೇರುತ್ತವೆ. ಹಾಗೇ ದೇವರ ಒಲುಮೆ ಆಗಬೇಕಾದರೆ ಸುಲಭವಲ್ಲ, ಸಾಧನೆಯನ್ನು ಮಾಡಿದರೆ ಸಾಧ್ಯವಾಗುತ್ತದೆ.

ಬರುವ ಕಷ್ಟಗಳನ್ನೆಲ್ಲ ಸಹಿಸಿಕೊಂಡು, ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುತ್ತಾ, ಶ್ರಮಪಟ್ಟರೆ ಸುಖ ಸಿಕ್ಕೇ ಸಿಗುತ್ತದೆ ಎಂದು ಪಕ್ಕೀರಗೌಡ ಹಳೆಮನಿ ಹೇಳಿದರು.
ವಿ.ಟಿ. ಮಂಜುನಾಥ ಅವರು ಜೇಡರ ದಾಸಿಮಯ್ಯನವರ ಜೀವನ ಚರಿತ್ರೆ ಕುರಿತು ಮಾತನಾಡಿದರು.
ಶಿವಬಸಮ್ಮ ಕಲಕೋಟಿ, ಮಮತಾ ಶಾಂತ, ವೀಣಾ ಮಂಜುನಾಥ, ಶಾರದಮ್ಮ, ಮಂಗಳಮ್ಮ, ಗೀತಾ, ಲಕ್ಷ್ಮಿಕಾಂತ, ಶ್ರೀಧರ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
