ನವದಂಪತಿಗಳಿಗೆ ಇಷ್ಟಲಿಂಗಧಾರಣೆ; ಮಾದಾರ ಚೆನ್ನಯ್ಯ, ಬಸವಣ್ಣನವರ ಸ್ಮರಣೆ
ಹೊಸಪೇಟೆ:
ಹೊಸಪೇಟೆಯ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಸುಭಾಷ್ ಡಿ.ಹೆಚ್. ಮತ್ತು ಭಾವನ ಅವರುಗಳ ವಚನ ಕಲ್ಯಾಣ ಮಹೋತ್ಸವ ಆಗಸ್ಟ್ 23 ನಡೆಯಿತು.
ಇವರು ಕಲ್ಲಹಳ್ಳಿ ಗ್ರಾಮದ ದಲಿತವರ್ಗದ ಹುಲಿಗೆಮ್ಮ, ಧರ್ಮಪ್ಪ ಹೆಗಡೆ, ಮತ್ತು ಹೊಳಗುಂದಿ ಗ್ರಾಮದ ಹನುಮಕ್ಕ, ಮೈಲಪ್ಪ ಕಟ್ಟೋಜಿ ಅವರ ಮಕ್ಕಳು.
ಬಸವತತ್ವದ ಕಲ್ಯಾಣ ಮಹೋತ್ಸವವನ್ನು ಇಷ್ಟಲಿಂಗ ಅಧ್ಯಯನ ಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರುಗಳು ವಚನ ಕ್ರಿಯಾಮೂರ್ತಿಗಳಾಗಿ ನಡೆಸಿಕೊಟ್ಟರು.

ಬಸವ ಗುರುಪೂಜೆಯೊಂದಿಗೆ ಕಲ್ಯಾಣ ಮಹೋತ್ಸವವನ್ನು ಆರಂಭಿಸಿ, ನಂತರ ನವದಂಪತಿಗಳಿಗೆ ಇಷ್ಟಲಿಂಗಧಾರಣೆ ಮಾಡಿಸುವುದರ ಮೂಲಕ ಕಲ್ಯಾಣ ನೆರವೇರಿಸಲಾಯಿತು.
ಜೊತೆಗೆ ಲಿಂಗಾಯತ ನಿಜಾಚರಣೆಗಳ ಬಗ್ಗೆ ವಚನಮೂರ್ತಿ ಡಾ. ಟಿ. ಹೆಚ್. ಬಸವರಾಜ ಅವರು ಆಗಮಿಸಿದ ಸಾವಿರಾರು ಜನರಿಗೆ ಅನುಭಾವ ನೀಡಿದರು.

ಅವರು ಅನುಭಾವ ನೀಡುತ್ತ, ಮಾದಾರ ಚೆನ್ನಯ್ಯರ ವ್ಯಕ್ತಿತ್ವಕ್ಕೆ ಮಾರುಹೋಗಿ ಬಸವಣ್ಣನವರು ಅವರನ್ನು ಅಪ್ಪ ಎಂದು ಕರೆದರು. ಅಂತಹ ಶರಣ ಮಾರ್ಗದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ ಪರಂಪರೆಯ ನಿಜವಾದ ವಾರಸುದಾರ ಲಿಂಗಾಯತರು ನೀವಾಗಿದ್ದೀರಿ. ಲಿಂಗಾಯತ ಪರಂಪರೆ, ಶರಣ ಸಂಸ್ಕೃತಿ ನಿಮ್ಮೆಲ್ಲರ ಆಚರಣೆ ಆಗಬೇಕು.
ಇವತ್ತಿನ ಪರಿಸ್ಥಿತಿಯಲ್ಲಿ ಬಸವತತ್ವದ ಕಡೆ ತಾವೆಲ್ಲ ಮುಖ ಮಾಡಿರುವುದು, ತಮ್ಮ ಮೂಲವನ್ನು ಅರಿಸಿಕೊಂಡು ಮರಳಿ ಮನೆಗೆ ಅನ್ನುವ ಪ್ರಕ್ರಿಯೆಯಾಗಿದೆ. ಸ್ವಯಂಪ್ರೇರಣೆಯಿಂದ ತಾವೆಲ್ಲ ಇದಕ್ಕೆ ಒಳಗಾಗಿರುವುದು ಒಳ್ಳೆಯದು. ತಾವೆಲ್ಲ ಶರಣ ಸಂಸ್ಕೃತಿ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ, ಸಂತಸದಾಯಕ ವಿಷಯ ಎಂದರು.

ಕಲ್ಯಾಣ ಮಹೋತ್ಸವದಲ್ಲಿ ಹೆಗಡೆ ಮತ್ತು ಕಟ್ಟೋಜಿ ಕುಟುಂಬಸ್ಥರು, ಬಂಧು-ಮಿತ್ರರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಾವಿನಹಳ್ಳಿ ಬಸವರಾಜ ಹಾಗೂ ಪ್ರಮುಖರು, ಇಷ್ಟಲಿಂಗ ಅಧ್ಯಯನ ಕೇಂದ್ರ, ಬಸವ ಬಳಗದ ಸದಸ್ಯರು, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

ವಚನ ಮಾಂಗಲ್ಯ ನೆರವೇರಿಸಿದ ಎಲ್ಲಾ ಬಸವ ನಿಷ್ಠರಿಗೆ ಶರಣುಗಳು
ಒಳ್ಳೆಯ ಸಂದೇಶ ರವಾನಿಸಿದ್ದಿರಿ
ಉತ್ತಮ ಕಾರ್ಯ, ನವ ದಂಪತಿಗಳಿಗೆ ಶುಭಾಶಯಗಳು
ಅತ್ಯುತ್ತಮ ಕಾರ್ಯ. ಒಳ್ಳೆಯದಾಗಲಿ
ಒಳ್ಳೆಯ ಬೆಳವಣಿಗೆ. ಆದರೆ ಇಂದಿನ ಲಿಂಗಾಯತ ಸಮುದಾಯ ಮಾದಾರ ಚೆನ್ನಯ್ಯನ ಪರಂಪರೊಂದಿಗೆ ಕೊಡುಕೊಳ್ಳುವಿಕೆ ಮಾಡಬೇಕು . ಇಲ್ಲದಿದ್ದರೆ ಅವರವರ ಸಮುದಾಯಗಳಲ್ಲಿ ಕಲ್ಯಾಣ ಮಹೋತ್ಸವ ಆದರೆ ಮತ್ತೆ ಅದು ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿದಂತೆ ಆಗುತ್ತೆ. ಅದು ಲಿಂಗಾಯತ ತತ್ವಕ್ಕೆ ವಿರುದ್ದ
Namaste to all followers of basav sanskar. This is great message to all lingayat community
Let the all swamiji declare only two caste one is male (Gandu jati) and another is female Hennu Jati). If u realy want to remove caste system, then make it in mass , people will leason all swamiji . Make it again another revolution in 20-21 century, by following 11 century of Guru Basavanna. If this will come in force then real caste systwm will vanish in future, otherwise it is just a gimik.
ಒಳ್ಳೆಯ ಕಾರ್ಯ.. ಹೀಗೆ ಎಲ್ಲಾ ಬಸವ ಅನುಯಾಯಿಗಳು ಕೆಲಸ ಮಾಡೋಣ