ಬಸವತತ್ವ ಲೇಖಕರಿಗೆ ‘ಬಸವಗುರು ಕಾರುಣ್ಯ ಪ್ರಶಸ್ತಿ’ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಗೌರವ ಸಲ್ಲಿಕೆ: ವಿಜಯಕುಮಾರ ಕಮ್ಮಾರ, ಸರ್ವಮಂಗಳ ಸಕ್ರಿ ಪುಷ್ಪಾವತಿ ಶಲವಡಿಮಠ, ಅನುಪಮಾ ಪಾಟೀಲ, ಮೊರಬದ ಮಲ್ಲಿಕಾರ್ಜುನ

ಇಳಕಲ್ಲ:

ಶ್ರೀ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠದಲ್ಲಿ ಈಚೆಗೆ ನಡೆದ ಬಸವತತ್ವ ಸಮಾವೇಶದಲ್ಲಿ 2026 ರ ‘ಲಿಂಗವಂತ ಗ್ರಂಥ ಬಹುಮಾನ ಪುರಸ್ಕಾರ’ ಹಾಗೂ ಶರಣ ಸಾಹಿತ್ಯ ಸೇವೆಗಾಗಿ ‘ಬಸವಗುರು ಕಾರುಣ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.

ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು: ಡಾ. ವಿಜಯಕುಮಾರ ಕಮ್ಮಾರ ತುಮಕೂರು, ಬಯಲು ಭಿತ್ತಿಯಲ್ಲಿ ಶರಣರ ತತ್ವಶೋಧ: ಡಾ. ಸರ್ವಮಂಗಳ ಸಕ್ರಿ ರಾಯಚೂರು, ಅನುಭಾವ ದೀಪ್ತಿ: ಡಾ. ಪುಷ್ಪಾವತಿ ಶಲವಡಿಮಠ ಹಾವೇರಿ, ಬಸವಾದಿ ಶರಣರ ಜೀವನ ಮೌಲ್ಯಗಳು: ಅನುಪಮಾ ಪಾಟೀಲ ಹುಬ್ಬಳ್ಳಿ, ಬಸವ ಬೆರಗು: ಪ್ರೊ. ಮೊರಬದ ಮಲ್ಲಿಕಾರ್ಜುನ ಮೈಸೂರು ಇವರುಗಳು ತಮ್ಮ ಈ ಕೃತಿಗಳಿಗಾಗಿ ಪುರಸ್ಕಾರ, ಪ್ರಶಸ್ತಿ ಪಡೆದುಕೊಂಡರು.

ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ ಸಂಸ್ಕರಣೆಯ ಈ ಸಮಾರಂಭದ ಸಾನಿಧ್ಯವನ್ನು ಪೂಜ್ಯ ಡಾ. ಗುರುಮಹಾಂತ ಸ್ವಾಮಿಗಳು, ಪೂಜ್ಯ ಬೆಲ್ದಾಳ ಶರಣರು ವಹಿಸಿಕೊಂಡು ಆಶೀರ್ವಾದ ನುಡಿಗಳನ್ನು ಆಡಿದರು.

ಸಿದ್ದಣ್ಣ ಲಂಗೋಟಿ ಶರಣರು ಕಾರ್ಯಕ್ರಮವನ್ನು ರೂಪಿಸಿ ಪ್ರಸ್ತುತ ಪಡಿಸಿದರು.

ಇದೇ ಸಂದರ್ಭದಲ್ಲಿ ಚೆನ್ನಬಸವಣ್ಣ ಲಂಗೋಟಿ, ಪೊಲೀಸ್ ವರಿಷ್ಠಾಧಿಕಾರಿಗಳು, ಮೈಸೂರು ಮತ್ತು ರಾಮು ಅರಸಿದ್ಧಿ, ಪೊಲೀಸ್ ವರಿಷ್ಠಾಧಿಕಾರಿಗಳು ಕೊಪ್ಪಳ ಇವರಿಗೆ ಗೌರವ ಸನ್ಮಾನ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಶಿವಭಲ್ಲ, ಬಸವರಾಜ ಕರಿಬಸಪ್ಪನವರ, ಅಶೋಕ ಬಿಜ್ಜಳ, ಮಲ್ಲು ಮಡಿವಾಳರ ಅವರುಗಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *