‘ದುಶ್ಚಟ, ದುರ್ನಡತೆ ದೂರ ಮಾಡಿಕೊಳ್ಳಲು ವಚನ ಸಾಹಿತ್ಯವೆ ಮನೆ ಮದ್ದು’

ಬಸವರಾಜ ಎಸ್. ಹೂಗಾರ
ಬಸವರಾಜ ಎಸ್. ಹೂಗಾರ

ವಚನ ಜ್ಯೋತಿ ಕಾರ್ಯಕ್ರಮ ಸಮಾರೋಪ

ಯಲಬುರ್ಗಾ:

ಶರಣಗ್ರಾಮ ಗುಳೆ ಮತ್ತು ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳ, ರಾಷ್ಟ್ರೀಯ ಬಸವ ದಳ ಯುವ ಘಟಕ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶ್ರಾವಣ ಮಾಸದ ನಿಮಿತ್ತದ ಮನೆಯಿಂದ ಮನೆಗೆ ಮನದಿಂದ ಮನಕ್ಕೆ ವಚನ ಜ್ಯೋತಿ ಕಾರ್ಯಕ್ರಮದ ಸಮಾರೋಪ ಮತ್ತು ಕೊಪ್ಪಳದ ಲಿಂಗೈಕ್ಯ ಶರಣ ಕೊಟ್ರಪ್ಪ ಶೇಡದ್ ಅವರ ನೆನಹು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

30 ದಿನ ಸಾಗಿಬಂದ ವಚನ ಜ್ಯೋತಿ ಕಾರ್ಯಕ್ರಮ ಗಿರಿಮಲ್ಲಪ್ಪ ಪರಂಗಿ, ವನಜಭಾವಿ ಅವರ ಮನೆಯಿಂದ ವಿಶ್ವ ಗುರು ಬಸವ ಮಂಟಪಕ್ಕೆ ಕಳಸ, ಕನ್ನಡಿ, ತಾಳ, ಮೇಳದೊಂದಿಗೆ ವಿಶ್ವಗುರು ಬಸವ ಮಂಟಪಕ್ಕೆ ತೆರಳಿ, ಬಸವನಗೌಡ ಪೋಲಿಸಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.

ಪ್ರಥಮದಲ್ಲಿ ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಪೂಜೆ, ನಂತರ ವಚನ ಪಠಣದೊಂದಿಗೆ ಅನುಭಾವ ಕಾರ್ಯಕ್ರಮ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಹೂಗಾರ ಅವರು, ಈ ಮಾನವನ ಸಂಸಾರ ಜೀವನ ಎನ್ನುವಂತದ್ದು ಗಾಳಿಯಲ್ಲಿ ಹಚ್ಚಿಟ್ಟ ದೀಪದಂತೆ, ಅದು ಯಾವಾಗ ಹಾರಿ ಹೋಗುತ್ತದೊ ಏನೋ ಗೊತ್ತಿಲ್ಲ. ಆ ಗಾಳಿಯ ದೀಪದಂತೆ ನಮ್ಮ ಕಾಯದಲ್ಲಿ ಜ್ಯೋತಿಯಂತಿರುವ ಆತ್ಮವು ಕೂಡ ಯಾವ ಸಮಯದಲ್ಲಾದರು ಹಾರಿ ಹೋಗುತದೆ. ಸಿರಿತನ ಇರಲಿ, ಬಡತನ ಇರಲಿ ಈ ಎರಡನ್ನೂ ಶಾಸ್ವತ ಎಂದು ಭಾವಿಸದೆ, ಬಸವ ಭಾವನೆಗಳನ್ನು ಮನದಲ್ಲಿ ಅರಿತುಕೊಂಡು, ಬಸವ (ಶಿವ)ನಾಮ ಸ್ಮರಣೆಯ ಜೊತೆಗೆ ನಿರಂತರ ಕಾಯಕ ಮಾಡುತ್ತ ಸಾಗಿದಾಗ ಮಾತ್ರ ಸದ್ಗತಿ ಕಾಣಲು ಸಾಧ್ಯ.

ನಿರಂತರ ವಚನ ಶ್ರವಣ ಮಾಡುವುದು ಮತ್ತು ವಚನಗಳಂತೆ ನಾವು ಸಂಸ್ಕೃತಿ ಸಂಸ್ಕಾರ ಕಲಿಯುವದೇ ಈ ಕಾರ್ಯಕ್ರಮದ ಉದ್ದೇಶ ಆಗಿದೆ. ಪ್ರತಿ ದಿನ ಮನೆಯಿಂದ ಮನೆಗೆ ತೆರಳಿ ಬಸವಾದಿ ಶರಣರ ವಿಚಾರವನ್ನು ಮನವರಿಕೆ ಮಾಡಿ, ಅವರು ಬಾಳಿ ಬದುಕಿದಂತೆ ಬದುಕು ಕಟ್ಟಿಕೊಳ್ಳಲು ಕಲಿಸುವ ಪ್ರಯತ್ನ ಮಾಡಿದ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ.

ಬಸವ ಸಂಸ್ಕೃತಿ ಅತ್ಯಂತ ಅಮೂಲ್ಯವಾದದ್ದು. ನಮ್ಮ ಮನದ ಮೈಲಿಗೆ ಕಳೆದುಕೊಳ್ಳಬೇಕಾದರೆ ಗುರು ಬಸವಣ್ಣನವರು ಕೊಟ್ಟ ವಚನ ಸಾಹಿತ್ಯ ಮನವರಿಕೆ ಮಾಡಿಕೊಂಡು ಬದುಕಿದಾಗ ಮಾತ್ರ ಮನದ ಮೈಲಿಗೆ ಕಳೆದುಕೊಳ್ಳಲು ಸಾಧ್ಯ. ದುಶ್ಚಟಗಳನ್ನು ದೂರ ಮಾಡಿಕೊಳ್ಳಲು ವಚನ ಸಾಹಿತ್ಯವೆ ಮನೆ ಮದ್ದಾಗಿದೆ.

ಒಟ್ಟಾರೆಯಾಗಿ ನಾವು ದಿನನಿತ್ಯ ಸತ್ಯ ಶುದ್ಧ ಕಾಯಕ ಮಾಡುತ್ತ, ಮೌಢ್ಯಾಚರಣೆಗೆ ಒಳಗಾಗದೆ, ಮಹಾತ್ಮರ ವಿಚಾರವನ್ನು ಮೈಗೂಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಕುರಿತು ಬಸವನಗೌಡ ಪೋಲಿಸ್ ಪಾಟೀಲ ನಿವೃತ್ತ ಪಿ ಎಸ್ ಐ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ದಿನದ ಆರಂಭದಲ್ಲಿ ಸೂರ್ಯೋದಯವಾಗುತ್ತದೆ, ನಂತರ ಮಧ್ಯಾಹ್ನ ಬರುತ್ತದೆ ಮತ್ತು ಕೊನೆಗೆ ಸೂರ್ಯಾಸ್ತವಾಗುತ್ತದೆ. ಅಂದರೆ, ಕಾಲವು ನಿರಂತರವಾಗಿ ಉರುಳುತ್ತಾ ಇರುತ್ತದೆ. ಸೂರ್ಯೋದಯ, ಕಾಲ ಉರುಳಿದಂತೆಲ್ಲಾ ಮನುಷ್ಯನಿಗೆ ತಿಳಿಯದ ಹಾಗೆಯೇ ಅವನ ಜೀವಿತಾವಧಿ ಅಥವಾ ಆಯುಷ್ಯವು ದಿನೇ ದಿನೇ ಕಮ್ಮಿಯಾಗುತ್ತಾ ಸಾಗುತ್ತಿದೆ. ಹೀಗೆ ಕಾಲ ಮತ್ತು ಆಯುಷ್ಯವು ಮುಗಿದುಹೋಗುವ ಮುನ್ನವೇ, ಮನುಷ್ಯನು ಎಚ್ಚೆತ್ತುಕೊಂಡು ಸತ್ಯವನ್ನು ಅರಿತುಕೊಳ್ಳಬೇಕು.

ಕಾಲ ಯಾರಿಗಾಗಿಯೂ ಕಾಯುವುದಿಲ್ಲ. ದಿನ, ವಾರ, ವರ್ಷಗಳು ಕಳೆಯುತ್ತಾ ಹೋದಂತೆ ನಮ್ಮ ಆಯುಷ್ಯವೂ ಕರಗುತ್ತಾ ಹೋಗುತ್ತದೆ. ಆದ್ದರಿಂದ ಕಾಲ ಮಿಂಚುವ ಮುನ್ನವೇ ಸತ್ಕಾರ್ಯ ಮತ್ತು ಭಕ್ತಿಯ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಬಸವರಾಜಪ್ಪ ಇಂಗಳದಾಳ ಕೋಳಿಹಾಳ, ಅಮರೇಶಪ್ಪ ಗಡಿಹಳ್ಳಿ ಸೋಮಸಾಗರ, ಅಮರೇಶಪ್ಪ ಬಳ್ಳಾರಿ, ಶಿವಬಸಯ್ಯ ವೀರಾಪುರ ಇವರು ಉಪಸ್ಥಿತರಾಗಿ ವೇದಿಕೆ ಹಂಚಿಕೊಂಡು ಮಾತನಾಡಿದರು.

ಈ ಸಂದರ್ಭದಲ್ಲಿ ಲಿಂಗೈಕ್ಯ ಕೊಟ್ರಪ್ಪ ಶೇಡದ್ ಅವರ ಧರ್ಮಪತ್ನಿ ರಾಚಮ್ಮ ಶೇಡದ್ ಅವರಿಗೆ ಗೌರವ ಸತ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವನಜಭಾವಿ ಗ್ರಾಮದ ದೇವಪ್ಪ ಕೋಳೂರು, ಗಿರಿಮಲ್ಲಪ್ಪ ಪರಂಗಿ, ರೇವಣಪ್ಪ ಮಾತ್ರ, ಲಿಂಗನಗೌಡ ದಳಪತಿ, ಫಕೀರಪ್ಪ ಮಂತ್ರಿ, ಬಸವಣ್ಣ ಹೊಸಳ್ಳಿ, ಯಮನೂರಪ್ಪ ಕೋಳೂರು, ಪಂಪಾಪತಿ ಹೊಸಳ್ಳಿ, ಹನಮೇಶ್ ಹೊಸಳ್ಳಿ, ನಿಜಲಿಂಗಪ್ಪ  ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ಪದಾಧಿಕಾರಿಗಳಾದ ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಿಂಗಮ್ಮ ಕೋಳೂರು, ನಾಗಮ್ಮ ಜಾಲಿಹಾಳ, ರೇಣುಕಮ್ಮ ಮಂತ್ರಿ, ಶರಣಮ್ಮ ಹೊಸಳ್ಳಿ, ಶಿವಕಲ್ಲಮ್ಮ  ಮಂತ್ರಿ, ಗುರುಲಿಂಗಮ್ಮ  ವಿಶಾಲಾಕ್ಷಮ್ಮ, ಹನಮಮ್ಮ ಗಾಳಿ, ಚನ್ನಮ್ಮ  ಮಹಾದೇವಿ, ದ್ರಾಕ್ಷಾಯಣಮ್ಮ ಮತ್ತು ಶಿವುಕುಮಾರ ಹನಮಂತಪ್ಪಜ್ಜ, ಶರಣಪ್ಪ ಮಲ್ಲಿಕಾರ್ಜುನ, ಜಗದೀಶ ಮಂತ್ರಿ ಇತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಶರಣಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *