‘ಲಿಂಗಾಯತರ ನೊಸಲಲಿ ವಿಭೂತಿ, ಕೊರಳಲಿ ಇಷ್ಟಲಿಂಗ ಮೊದಲಿರಲಿ‘
ಕೊಪ್ಪಳ:
ಲಿಂಗಾಯತರ ನೊಸಲಲಿ ವಿಭೂತಿ ಮತ್ತು ಕೊರಳಲಿ ಇಷ್ಠಲಿಂಗದೇವನನ್ನು ಸದಾಕಾಲ ಧರಿಸಿರಬೇಕೆಂದು ಲಿಂಗಾಯತ ಧರ್ಮ ಗಣಾಚಾರ ಶರಣ, ಹಂದ್ರಾಳದ ರಾಷ್ಟ್ರೀಯ ಬಸವದಳದ ಸಂಚಾಲಕ ಶಿವಕುಮಾರ ಹೇಳಿದರು.

ತಾಲೂಕಿನ ಬೇವಿನಹಳ್ಳಿ ಗ್ರಾಮದ ನಿವಾಸಿ ವೀರೇಶ ಇಸ್ಲಾಮಪುರ ಅವರ ಮನೆಯಲ್ಲಿ ಈಚೆಗೆ ಜರುಗಿದ ಇಷ್ಠಲಿಂಗ ದೀಕ್ಷೆ, ಗರ್ಭಲಿಂಗ ಧಾರಣೆಯ ಲಿಂಗಾಯತ ಧರ್ಮ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದರು.
ಲಿಂಗಾಯತ ಧರ್ಮ ಸಂಸ್ಕಾರದಲ್ಲಿ ಲಿಂಗ ಸಮಾನತೆ ಸಮ ಸಂಸ್ಕಾರ ಇದೆ. ಮಹಿಳೆ ಮತ್ತು ಪುರುಷರಲ್ಲಿ ಸಮಾನತೆಯಿದೆ. ಅಂತೆಯೇ ಇಷ್ಟಲಿಂಗ ಧಾರಣೆ, ಲಿಂಗಪೂಜೆ ಮಾಡಿಕೊಳ್ಳೋದು ಉಭಯರಿಗೂ ಸಮತೆ ಇದೆ. ಇಲ್ಲಿ ಮೇಲು ಕೀಳುತನ ಇಲ್ಲ, ನಮ್ಮ ಧರ್ಮದಲ್ಲಿ ಏಕ ದೇವೋಪಾಸನೆಯೇ ಪ್ರಾಮುಖ್ಯ.

ಶರಣ ಸಂಸ್ಕೃತಿಯ ಆಚಾರ ವಿಚಾರಗಳು ಇಡೀ ವಿಶ್ವಕ್ಕೇ ವಿಶ್ವಸ್ಥನೀಯ. ಇವನಾರವ..ಇವನಾರವ..ಎಂದೆನಿಸದೇ ಇವ ನಮ್ಮವ ಇವ ನಮ್ಮವನೆಂಬ ವಿಶ್ವ ಭ್ರಾತೃತ್ವ, ಹಾಗೂ ಕಳಬೇಡ… ಕೊಲಬೇಡ… ಎಂಬ ಸಪ್ತ ಸೂತ್ರದ ಗುರುಬಸವಣ್ಣನವರ ವಚನಗಳು ಜಾಗತಿಕ ನೀತಿ ಸಂಹಿತೆ ಒಳಗೊಂಡಿದೆ. ಗರ್ಭಸ್ಥ ಮಹಿಳೆಗೆ ಗರ್ಭಲಿಂಗಧಾರಣೆ ಸಂಸ್ಕಾರತೆಯಿಂದ ಜನಿಸುವ ಕೂಸಿಗೂ ತಾಯಿಯ ಉತ್ತಮ ಸಂಸ್ಕೃತಿ ಸಂಸ್ಕಾರವು ರಕ್ತಗತವಾಗಿ ಶರಣ ಸಜ್ಜನಿಕೆಯ ಗುಣವಂತಿಕೆ ಧಾರೆಗೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹೊಸಪೇಟೆ ರಾಷ್ಟ್ರೀಯ ಬಸವದಳದ ಶರಣರು, ಅಡವಿಬಾವಿ, ಮುದಗಲ್ಲು, ಬಂಧುಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.
ಆರಂಭದಲ್ಲಿ ಧರ್ಮಪಿತ ಗುರುಬಸವಣ್ಣನವರ ಭಾವಪೂಜೆ ನಡೆಯಿತು. ಇಷ್ಟಲಿಂಗ ಪೂಜೆ ಮಾಡಿಕೊಳ್ಳಲಾಯಿತು. ವಚನ ಪಠಣ ಜರುಗಿತು. ಹೊಸಪೇಟೆಯ ಬಸವಣ್ಣ ಜಿ. ಲಿಂಗಾಯತ ಸ್ವಾಗತ ಮಾಡಿದರು. ಸೋದಾ ವಿರೂಪಾಕ್ಷಗೌಡ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ