ರಾಯಚೂರು ಅಕ್ಕನ ಬಳಗದ ವತಿಯಿಂದ ಶರಣೆ ಕಾಳವ್ವೆ ಕುರಿತು ಚಿಂತನೆ

ರಾಯಚೂರು :

ನಗರದ ಬಸವಕೇಂದ್ರದ ಅಕ್ಕನ ಬಳಗದವರಿಂದ ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವಣ್ಣ ಇವರ ನೇತೃತ್ವದಲ್ಲಿ ಚಿನ್ಮಯಿ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ಎರಡನೇ ದಿನ ಶಿವಶರಣೆ ಪುಣ್ಯಸ್ತ್ರಿ ಕಾಳವ್ವೆ ಅವರ ಕುರಿತು ಅನುಭಾವ ಚಿಂತನೆ ನಡೆಯಿತು.

ಸದರಿ ಶರಣೆ ಬಗ್ಗೆ ತಾಯಿ ಸುಮಂಗಲ ಮಾತನಾಡಿ, ಕಾಳವ್ವೆ ಅವರ 12 ವಚನಗಳು ದೊರೆತಿವೆ. ಆಕೆಯ ವಚನಗಳಲ್ಲಿ ಭಕ್ತನ ಲಕ್ಷಣ, ವೃತ ಆಚರಣೆಗಳ ಮಹತ್ವ, ಪ್ರಸಾದದ ಮಹಿಮೆ ಮತ್ತು ಕಾಯಕ ನಿಷ್ಠೆ ಕಂಡು ಬರುತ್ತದೆ. ಸತ್ಯ ಶುದ್ಧ ಕಾಯಕದಿಂದ ಮಾತ್ರ ಭಕ್ತನಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಪಾರ್ವತಿ ಪಾಟೀಲ, ವಚನ ಪ್ರಾರ್ಥನೆಯನ್ನು ಪೂರ್ಣಿಮ, ಸ್ವಾಗತವನ್ನು ಚಿನ್ಮಯಿ ಮೃತ್ಯಂಜಯ, ನಿರೂಪಣೆ ಜಗದೇವಿ, ವಚನ ಸಂವಿಧಾನ ಪ್ರತಿಜ್ಞೆ ಅನ್ನಪೂರ್ಣ ಮೇಟಿ ಹೇಳಿಸಿದರು ಮತ್ತು ಕೊನೆಗೆ ತಾಯಮ್ಮ ವಂದಿಸಿದರು.

ಕಾರ್ಯಕ್ರಮದಲ್ಲಿ ಅನ್ನಪೂರ್ಣ ಹರವಿ, ನಿರ್ಮಲಾ, ವಿಜಯಲಕ್ಷ್ಮಿ ಸೇರಿದಂತೆ ಹಲವಾರು ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *