ನವ ವಚನ ಚಿಂತನೆ ಕಾರ್ಯಕ್ರಮ
ಲಿಂಗಸುಗೂರು :
12ನೇ ಶತಮಾನದ ಪ್ರಮುಖ ಶರಣೆ ಸತ್ಯಕ್ಕ ತಾಯಿಯವರ ಜೀವನ ಚರಿತ್ರೆ ಮತ್ತು ಅವರ ವಚನ ವಿಶ್ಲೇಷಣೆಯು ಲಕ್ಷ್ಮೀ ಹುರಕಡ್ಲಿ ಅವರಿಂದ ನಡೆಯಿತು. ವಿಜಯ ಮಾಂತೇಶ್ವರ ಶಾಖೆ ಅನುಭವ ಮಂಟಪದಲ್ಲಿ ನಡೆದ ನವ ವಚನ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು ಕ್ರಿ.ಶ. 1160 ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹಿರೇಜಂಬೂರು ಗ್ರಾಮದಲ್ಲಿ ಸತ್ಯಕ್ಕ ಜನಿಸಿದವರು. ಶಿವಭಕ್ತರ ಅಂಗಳದ ಕಸಗುಡಿಸುವುದನ್ನು ತಮ್ಮ ಕಾಯಕವನ್ನಾಗಿ ಮಾಡಿಕೊಂಡರು. ಸಾಂಸಾರಿಕ
ಜೀವನದಿಂದ ದೂರ ಉಳಿದು ಅವಿವಾಹಿತೆಯಾಗಿಯೇ ಅಧ್ಯಾತ್ಮ ಸಾಧನೆಯಲ್ಲಿ ಅವರು ತೊಡಗಿಸಿಕೊಂಡರು.
ಅವರ ವಚನಗಳ ಅಂಕಿತನಾಮ “ಶಂಭುಜಕ್ಕೇಶ್ವರ” ಆಗಿದೆ. ಅವರ ಒಟ್ಟು 27 ವಚನಗಳು ಲಭ್ಯವಿವೆ ಎಂಬುದು ತಿಳಿದು ಬಂದಿದೆ.
ಅವರು ತಮ್ಮ ವಚನ ವಿಚಾರಗಳಲ್ಲಿ ಲಂಚ ಮತ್ತು ವಂಚನೆಯನ್ನು ತೀವ್ರವಾಗಿ ಖಂಡಿಸಿದರು. ದಾರಿಯಲ್ಲಿ ಬಿದ್ದ ಅನ್ಯರ ಒಡವೆ ವಸ್ತುಗಳನ್ನು ಮುಟ್ಟುವುದಿಲ್ಲ ಎಂದು ಕಠಿಣ ನಿಯಮವನ್ನು ಹಾಕಿಕೊಂಡರು. ಏಕದೇವೋಪಾಸನೆ, ಸ್ತ್ರೀ ಸಮಾನತೆ ಅವರು ಬಯಸುತ್ತಾರೆ. ಡಾಂಭಿಕ ಆಚರಣೆಗಳನ್ನು ಖಂಡಿಸಿದರು ಎಂದು ಉಪನ್ಯಾಸದಲ್ಲಿ ಲಕ್ಷ್ಮೀ ಹೇಳಿದರು.

ಸತ್ಯಕ್ಕ ಅವರ ಹಲವಾರು ವಿಚಾರಗಳು ಈ ವಿಚಾರಗೋಷ್ಠಿಯಲ್ಲಿ ನಡೆದವು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ಕಾರ್ಯಕ್ರಮ ನಿರೂಪಣೆ ಸುನಂದ ಮುಜ್ಜಿ ನಡೆಸಿದರು. ಅಕ್ಕನ ಬಳಗದ ವತಿಯಿಂದ
ಪ್ರಾರ್ಥನೆ ಮತ್ತು ವಚನ ಗಾಯನ ನಡೆಯಿತು.
ಕಾರ್ಯಕ್ರಮದ ಉಪಸಂವಾದದ ನುಡಿಗಳು ಬಸವರಾಜ ಬುದ್ದಿನ್ನಿ ಅವರಿಂದ ಜರುಗಿತು. ಪ್ರಸಾದ ಸೇವೆಯನ್ನು ಜ್ಯೋತಿ ಐದನಾಳ ಅವರಿಂದ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
