ಲಿಂಗಾಯತ ಬಿಟ್ಟರೆ ಮಿಕ್ಕ ಧರ್ಮಗಳು ಹೆಣ್ಣನ್ನು ಸರಕಾಗಿ ಕಂಡವು

ರಾಯಚೂರು :

ನಗರದ ಬಸವಕೇಂದ್ರದ ಅಕ್ಕನ ಬಳಗದವರಿಂದ ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವಣ್ಣ ಅವರ ನೇತೃತ್ವದಲ್ಲಿ ಬಸವೇಶ್ವರ ಕಾಲೊನಿಯ ಅನಿತಾ ಪಾಟೀಲ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ಐದನೆ ದಿನ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ಕುರಿತು ಅನುಭಾವ ಚಿಂತನೆ ನಡೆಯಿತು.

ಲಕ್ಕಮ್ಮ ಶರಣೆ ಬಗ್ಗೆ ತಾಯಿ ಚಂದ್ರಕಲಾ ಪಾಟೀಲ ಮಾತನಾಡಿ, ಆಕೆ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ. ಜೊತೆಗೆ ಹನ್ನೆರಡನೆಯ ಶತಮಾನದ ಶಿವಶರಣರ ಧರ್ಮ ಬಿಟ್ಟರೆ ಉಳಿದ ಯಾವ ಕಾಲದ , ಧರ್ಮದಲ್ಲೂ ಹೆಣ್ಣಿಗೆ ಗೌರವ ನೀಡಿಲ್ಲ. ಎಲ್ಲ ಧರ್ಮಗಳು ಹೆಣ್ಣನ್ನು ಅಧೀನದ ಸರಕಾಗಿ ಕಂಡರು.

ಶರಣರ ಕಾಲದಲ್ಲಿ ಅದೂ ರಾಜಪ್ರಭುತ್ವದಲ್ಲಿ ಆಶೆ ಎಂಬುದು ಅರಸಿಂಗಲ್ಲದೆ ಶಿವಶರಣರಿಗೆ ಉಂಟೇ ಎಂದು ರಾಜಪ್ರಭುತ್ವದ ವಿರುದ್ಧ ದಿಟ್ಟತನವನ್ನು ತೋರಿಸಿದ್ದು ನೋಡಿದರೆ ಹೆಣ್ಣು ಬೌದ್ಧಿಕವಾಗಿ, ಮಾನಸಿಕವಾಗಿ, ವೈಚಾರಿಕವಾಗಿ ಪುರುಷನಿಗಿಂತ ಒಂದು ಹೆಜ್ಜೆ ಮುಂದೆ ಸಾಗಬಲ್ಲ ಶಕ್ತಿ ಸ್ತ್ರೀಯಲ್ಲಿ ಇತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಸುವರ್ಣ ಗೋಲಗೇರಿ, ವಚನ ಪ್ರಾರ್ಥನೆ ವಿಜಯಲಕ್ಷ್ಮಿ, ಸ್ವಾಗತ ಅನಿತಾ ಪಾಟೀಲ, ನಿರೂಪಣೆ ಪೂರ್ಣಿಮ, ವಚನ ಸಂವಿಧಾನ ಪ್ರತಿಜ್ಞೆ ಚನ್ನಮ್ಮ ಮತ್ತು ಶರಣೆ ನಿರ್ಮಲ ವಂದಿಸಿದರು.

ಕಾರ್ಯಕ್ರಮದಲ್ಲಿ ಸುಜಾತ, ವಿಜಯಲಕ್ಷ್ಮಿ, ಸರೋಜ ಸೇರಿದಂತೆ ಹಲವಾರು ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *