ರಾಯಬಾಗ ಗ್ರಾಮದಲ್ಲಿ ವಚನ ವಿಜಯೋತ್ಸವ, ವಚನ ಮೆರವಣಿಗೆ

ಹುತಾತ್ಮ ಶರಣರ ಸ್ಮರಣೆ, ಲಿಂಗಾಯತ ಧರ್ಮ ಹೋರಾಟಕ್ಕೆ ಕರೆ

ರಾಯಬಾಗ

ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗದ ಸಂಯುಕ್ತ ಆಶ್ರಯದಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.

ಬಸವಾದಿ ಶರಣರು ತಮ್ಮ ಜೀವನ ಬಲಿದಾನ ಮಾಡಿ ವಚನ ಸಾಹಿತ್ಯವನ್ನು ಸಂರಕ್ಷಿಸಿ, ಲೋಕಕ್ಕೆ ಜ್ಞಾನದ ಜ್ಯೋತಿ ಬೆಳಗಿಸಿದರು. ಆ ಹುತಾತ್ಮರ ನೆನಪಿನಲ್ಲಿ ವಿಜಯೋತ್ಸವ ಆಚರಿಸುವುದು ಇಂದಿನ ಅಗತ್ಯವೆಂದು
ಎಂದು ಚೆನ್ನಮ್ಮ ವಿಶ್ವವಿದ್ಯಾಲಯದ ಬಸವ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಬಿ ಎಮ್ ಪಾಟೀಲ ಹೇಳಿದರು.

ಪ್ರತಿಯೊಂದು ಮನೆಯನ್ನು ಮಹಾಮನೆಯನ್ನಾಗಿ ಅರಿವಿನ ಮನೆಯನ್ನಾಗಿ ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ, ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲೆ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಗುಡಸಿ ಸಂಸ್ಕೃತಿಕ ನಾಯಕ ಬಸವಣ್ಣನವರು ಸ್ಥಾಪಿಸಿದ ಲಿಂಗಾಯಿತ ಧರ್ಮಕ್ಕೆ ಸಂವಿಧಾನಕ್ಕೆ ಮಾನ್ಯತೆ ಪಡೆಯುವುದಕ್ಕಾಗಿ ನಾವು ಹೋರಾಟ ಮಾಡಬೇಕಾಗಿದೆ ಎಂದ ಹೇಳಿದರು.

ಶರಣ ವಿಚಾರ ವಾಹಿನಿ ಅಧ್ಯಕ್ಷರಾದ ಆಯ್ ಆರ್ ಮಠಪತಿ ಗುರುಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ನಮ್ಮ ಜೀವನದಲ್ಲಿ ಶರಣರ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡರೆ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಯುತ್ತದೆ ಎಂದು ತಿಳಿಸಿದರು

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ರೇವಣಸಿದ್ದೇಶ್ವರ ವಿರಕ್ತ ಮಠದ ಪೀಠಾಧಿಪತಿಗಳಾದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಈ ತತ್ವ ಸಿದ್ಧಾಂತ ಮನೆಮನೆಗೆ ಮುಟ್ಟಿಸುವ ಕೆಲಸ ಆಗಬೇಕು ಎಂದು ಆಶೀರ್ವಚನ ನೀಡಿದರು.

ಹಿರಿಯ ಸಾಹಿತಿ ಎಸ್ ವೈ ಹಂಜಿ ಲಿಂಗಾಯತ ಧರ್ಮದ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವಲ್ಲಿ ನಾವು ಹಿಂದುಳಿದಿದ್ದೇವೆ, ಈ ಕಾರ್ಯ ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದರು.

ಜಾಗತಿಕ ಲಿಂಗಾಯಿತ ಮಹಾಸಭಾ ರಾಯಭಾಗ್ ತಾಲೂಕ ಅಧ್ಯಕ್ಷ ರೇವಪ್ಪ ರಾಮಪ್ಪ ಶಿವಾಪುರೆಯವರು ಎಲ್ಲಾ ಗಣ್ಯ ಮಾನ್ಯರನ್ನು ಪೂಜ್ಯರನ್ನು ಸತ್ಕರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮಂಟೂರೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ದರೆಪ್ಪ ಅಂದಾನಿ, ಜಕ್ಕಪ್ಪ ಚನ್ನಪ್ಪ ಅಂದಾನಿ, ದುರದುಂಡೆಪ್ಪ ಪಾಟೀಲ, ಮಲಗೌಡ್ ಪಾಟೀಲ್, ಶಂಕರ್ ಕೋರೆ, ಶ್ರೀಶೈಲ್ ಪೂಜಾರಿ, ಪ್ರೊಫೆಸರ್ ವಿಠ್ಠಲ್ ಜೋಡಟ್ಟಿ, ಸಿದ್ದಾರೂಡ್ ಪಾತ್ರೂಟ, ಸಂಗಪ್ಪ ಬೆನ್ನಾಳಿ, ಅಶೋಕ್ ಪಾಟೀಲ್, ಬಸವರಾಜ ಬಸ್ತವಾಡೆ, ವಿನೋಬಾ ಬೆನ್ನಾಳಿ ಇತರರು ಇದ್ದರು.

ಸಂಗಮೇಶ್ ಮೇಲಸಕ್ರಿ, ಗಿರೀಶ್ ಮಾಳಿ ವಂದನಾರ್ಪಣೆಯನ್ನು ಮಾಡಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟರು.

ಗ್ರಾಮದಲ್ಲಿ ವಚನ ಮೆರವಣಿಗೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *