‘ಕ್ಲಿಷ್ಟಕರ ಪ್ರಸಂಗಗಳನ್ನು ಜಾಣ್ಮೆಯಿಂದ ನಿರ್ವಹಿಸಿದ ಚೆನ್ನಬಸವಣ್ಣ’

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ :

12ನೇ ಶತಮಾನದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಹಿರಿದಾದ ಸಾಧನೆಯನ್ನು ಮಾಡಿದವರು ಬಸವಾದಿ ಶರಣ ಚೆನ್ನಬಸವಣ್ಣನವರು.

ಹಿರಿಯರಾದರೇನು ಕಿರಿಯರಾದರೇನು ಅರಿವಿಂಗೆ ಹಿರಿದು ಕಿರಿದು ಉಂಟೆ ಎಂಬ ಅಲ್ಲಮ್ಮಪ್ರಭುಗಳ ವಚನವನ್ನು ಸಾಕಾರಗೊಳಿಸಿದ ಮಹಾಮೂರ್ತಿ, ಅವಿರಳಜ್ಞಾನಿ ಚೆನ್ನಬಸವಣ್ಣ ಎಂದು ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಹೇಳಿದರು.

ಅವರು ಹಾವೇರಿ ಬಸವ ಭವನದಲ್ಲಿ ದೀಪಾವಳಿ ದಿನ ಆಚರಿಸಲಾದ ಷಟಸ್ಥಲ್ ಚಕ್ರವರ್ತಿ, ಅವಿರಳಜ್ಞಾನಿ ಉಳವಿ ಚನ್ನಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಪ್ರಥಮ ಸಂಸತ್ತು ಎನಿಸಿರುವ ಅನುಭವ ಮಂಟಪದ ಸಂಚಾಲಕರಾಗಿ ಅತ್ಯಂತ ಕ್ಲಿಷ್ಟಕರ ಪ್ರಸಂಗಗಳನ್ನು ಜಾಣ್ಮೆಯಿಂದ ನಿರ್ವಹಿಸಿದ ಚನ್ನಬಸವಣ್ಣನವರ ಕಾರ್ಯವೈಖರಿ ಅವರ್ಣೀಯ.

ವಚನ ಸಾಹಿತ್ಯದ ರಚನೆ, ಕಲ್ಯಾಣ ಕ್ರಾಂತಿಯ ನಂತರದಲ್ಲಿ ವಚನ ಸಾಹಿತ್ಯದ ಸಂರಕ್ಷಣೆಯಲ್ಲಿ ಚನ್ನಬಸವಣ್ಣನವರ ಪಾತ್ರ ಅತಿ ಮಹತ್ವದ್ದಾಗಿದೆ. ಈ ಕಾರಣದಿಂದಾಗಿ ಅವರು ಪ್ರಾತಃಸ್ಮರಣೀಯರಾಗಿರುತ್ತಾರೆ ಎಂದರು.

ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಮಾತನಾಡಿ, ಕತ್ತಲೆಯಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವ ಪಥ ಮತ್ತು ಪರಸ್ಪರ ಸಹಕಾರ ಜೀವನದ ಸಂದೇಶಗಳನ್ನು ಸಮಾಜಕ್ಕೆ ಸಾರುವುದೇ ದೀಪಗಳ ಹಬ್ಬ ದೀಪಾವಳಿ ಆಚರಣೆಯ ಉದ್ದೇಶವಾಗಿದೆ.

ಬಸವಾದಿ ಶಿವಶರಣರ ಸಂದೇಶಗಳು ಜ್ಞಾನ ಮತ್ತು ಸುಜ್ಞಾನದ ಆಗರಗಳಾಗಿದ್ದು ಅವುಗಳ ಅನುಷ್ಠಾನ ಇಂದಿನ ಅವಶ್ಯಕತೆ ಆಗಿದೆ ಎಂದರು.

ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಚನ್ನಬಸವಣ್ಣ ಅವರ ಜೀವನ ಮತ್ತು ಅವರ ವಚನಗಳ ವಿಶ್ಲೇಷಣೆ ಮಾಡಿದರು.

ಬಳಗದ ಹಿರಿಯ ಸದಸ್ಯ ಶಿವಸಪ್ಪ ಮುದ್ದಿ, ಶಿವಯೋಗಿ ಬೆನ್ನೂರ ಬಸವೇಶ್ವರ ಶರಣರ ಹಾಗೂ ದಾರ್ಶನಕರ ಕುರಿತಾಗಿ ಮಾತನಾಡಿದರು. ದೃವ ಕಾಯಕದ ವಚನ ಪ್ರಾರ್ಥನೆ ಮಾಡಿದರು. ಶಿವರಾಜ ಕಾಯಕದ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬಳಗದ ಗೌರವಾಧ್ಯಕ್ಷ ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣವರ, ಕೆ.ಎಂ. ಬಿಜಾಪುರ, ಮಠಪತಿ, ಬಸವರಾಜ ಕೋರಿ, ನಾಗೇಂದ್ರಪ್ಪ ಮಂಡಕ್ಕಿ, ಶಂಕ್ರಪ್ಪ ಜಾಯಗೊಂಡನವರ, ಬಸವರಾಜ ಅಕ್ಕಿ, ಪುಟ್ಟಪ್ಪ ಮಲಕಣ್ಣನವರ, ಶಿವಾನಂದ ಹೊಸಮನಿ, ಶಶಿಕಲಾ ಕಾಯಕದ ಅನೇಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *