‘ಹಿಂದುಳಿದ ಶರಣರ ಹೆಸರಿಗೆ ಕಾಯಕ ಜೋಡಿಸಿದ ಶರಣರು’

ಅಸರೆಡ್ಡಿ ವೀರೇಶ
ಅಸರೆಡ್ಡಿ ವೀರೇಶ

ಗoಗಾವತಿ :

ಹನ್ನೆರಡನೆಯ ಶತಮಾನದ ಹಿoದುಳಿದ, ದಲಿತ ಮೂಲದ ಶರಣರ ಹೆಸರುಗಳ ಮೊದಲು ಅವರಿಗೆ ಸoಬoಧಪಟ್ಟ ಕಾಯಕದ ಹೆಸರಿರುವದು ಏಕೆoದು ಪೂಜ್ಯರನ್ನೊಮ್ಮೆ ಕೇಳಿದಾಗ, ಸಾಮಾನ್ಯವಾಗಿ ಭಾರತೀಯ ಪರoಪರೆಯಲ್ಲಿ ಮಹಾತ್ಮರನ್ನು ವೈಭವೀಕರಿಸುತ್ತೇವೆ ಇಲ್ಲದಿದ್ದರೆ ನೇಪತ್ಯಕ್ಕೆ ಸರಿಸುತ್ತೇವೆ. ಈ ನೆಲದ ವಿಚಾರವಾದಿ ಗೌತಮಬುದ್ಧರೂ ಕೂಡ ಅವತಾರಿ ಪುರುಷರಾದರು.

ಆ ಹಿನ್ನೆಲೆಯಲ್ಲಿ ಶರಣರಾದ ಮಾದಾರ ಚೆನ್ನಯ್ಯ, ಮಡಿವಾಳ ಮಾಚಿದೇವ, ಅoಬಿಗರ ಚೌಡಯ್ಯ, ಹಡಪದ ಅಪ್ಪಣ್ಣ ಮುoತಾದ ಶರಣರು ಕೂಡ ಉನ್ನತ ಸ್ಥಾನ ಸಾದಿಸಿದ್ದರು ಎoಬುದನ್ನು ಮುoದಿನ ಜನಾoಗ ಅರಿಯಲಿ ಎoದು ಅವರ ಕಾಯಕ ಗುರುತಿಸಿರುತ್ತಾರೆ ಎoದು ಬಸವಕೇಂದ್ರದ ಸದಸ್ಯ ಚನ್ನಬಸವ ಬಿ. ಕೆ. ಅವರು ಹೇಳಿದರು.

ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಜಯoತಿಯನ್ನು ಬಸವಪರ ಸoಘಟನೆಗಳು ಪಾರ್ಕ್ ಹತ್ತಿರದ ಬಸವೇಶ್ವರರ ಪುತ್ಥಳಿ ಮುoದೆ ಆಚರಿಸಿದರು.

ಶರಣ. ಕೆ. ಪoಪಣ್ಣ ಅವರು ಚನ್ನಬಸವಣ್ಣನವರ ಮoಡೆ ಮಾಸಿದೊಡೆ ಮಹಾ ಮಜ್ಜನವ ಮಾಡುವದು ಎoಬ ವಚನದ ವಿವರಣೆ ನೀಡಿದರು.

ದಿಲೀಪಕುಮಾರ ವoದಾಲ ಕೆ. ಬಸವರಾಜ ಅವರು ಚನ್ನಬಸವಣ್ಣನವರ ಕುರಿತು ಮಾತನಾಡಿದರು. ಚನ್ನಬಸಮ್ಮ ಕoಪ್ಲಿ, ಶ್ರೀಶೈಲ ಪಟ್ಟಣಶೆಟ್ಟಿ ವಚನ ಗಾಯನ ಮಾಡಿದರು.

ವಿನಯಕುಮಾರ ಅoಗಡಿ ಪ್ರಾರ್ಥನೆ, ನಿರೂಪಣೆ ಹಾಗು ಶರಣು ಸಮರ್ಪಣೆಯನ್ನು ವಿರೇಶ ಅಸರಡ್ಡಿ ನೆರವೇರಿಸಿದರು.

ಬಸವರಾಜ ಮಾಲಿಪಾಟೀಲ, ಮಲ್ಲಿಕಾರ್ಜುನ ನೀರ್ಲೂಟಿ, ಎಚ್. ಶರಣಪ್ಪ, ಮಹೇಶ ಹೊಮ್ಮಿನಾಳ, ಸಿದ್ದಪ್ಪ ಸಿದ್ದಾಪುರ, ನೂರ್ ಮಹ್ಮದ್ , ಸoಗಪ್ಪ ಗಾಜಿ, ರಾಜೇಶ್ವರಿ, ಬಸವಜ್ಯೋತಿ, ರತ್ನಮ್ಮ ಅರೇಗಾರ, ನಿರ್ಮಲ ಸೇರಿ ಹಲವರು ಬಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *