ಹಾವೇರಿ ಮುರುಘರಾಜೇಂದ್ರ ಮಠದಲ್ಲಿ ಚೆನ್ನಬಸವಣ್ಣನವರ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ :

ವಚನ ಸಾಹಿತ್ಯ, ವಿಭಿನ್ನ ಆಲೋಚನೆಗಳು ಹಾಗೂ ಅವಿರಳ ಜ್ಞಾನದ ಮೂಲಕ ಶ್ರೀ ಚೆನ್ನಬಸವಣ್ಣನವರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಹೇಳಿದರು.

ಇಲ್ಲಿನ ಕಾಗಿನೆಲೆ ರಸ್ತೆಯ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿದ್ದ ಶ್ರೀ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಆರ್ಶಿವಚನ ನೀಡಿದರು.

ಚೆನ್ನಬಸವಣ್ಣನವರು ಮಹಾನ್ ಜ್ಞಾನಿಗಳಾಗಿದ್ದರು. ಅತ್ಯಂತ ಶ್ರೇಷ್ಠ, ಅವಿರಳ ದಿವ್ಯ ಜ್ಞಾನಿಯಾಗಿ ಅನುಭವ ಮಂಟಪಕ್ಕೆ ಮುಕುಟಮಣಿಯಾಗಿದ್ದರು.ಉತ್ತಮ ಸಂಸ್ಕಾರಯುತರಾಗಿ ಜ್ಞಾನದ ನಕ್ಷತ್ರ ಆಗಿದ್ದರು.

ಅನುಭವ ಮಂಟಪದಲ್ಲಿ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಜವಾಬ್ದಾರಿ ಹೊಂದಿ ಬಸವಣ್ಣನವರ ಶಿಷ್ಯರಾಗಿ ಆಧ್ಯಾತ್ಮಿಕ ಚಕ್ರವರ್ತಿಯಾಗಿ ವಿಶ್ವಪಥದಲ್ಲಿ ದಿವ್ಯಪಥವಾಗಿ ಶ್ರೀ ಚೆನ್ನಬಸವಣ್ಣನವರು ಮಹಾನ್ ಜ್ಞಾನಿಯಾಗಿದ್ದರು. ಅವರ ವಚನಗಳಲ್ಲಿ ಅಡಗಿರುವ  ಜೀವನದ ಸಂದೇಶಗಳನ್ನು ನಾವೆಲ್ಲರೂ ಪಾಲಿಸುವಂತೆ ಆಗಬೇಕಿದೆ.

ವಚನಗಳ ಸಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದು ಶ್ರೀ ಚೆನ್ನಬಸವಣ್ಣನವರ ಜೀವನ ಹಾಗೂ ಅವರ ಜೀವನ ಸಂದೇಶಗಳ ಕುರಿತು ಶ್ರೀಗಳು ತಿಳಿಸಿದರು.

ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ ತೆವರಿ ಮಾತನಾಡಿ, ಸಾಮಾಜಿಕ ಒಳಿತಿಗಾಗಿ ಶ್ರಮಿಸಿದವರು ಶ್ರೀ ಚೆನ್ನಬಸವಣ್ಣನವರು. ಅವರ ವಚನಗಳು ಹರಿತವಾಗಿವೆ. ಬಸವಣ್ಣನವರ ಕಾಯಕ ಆಶಯಗಳನ್ನು ಪಾಲಿಸೋಣ. ವಚನಗಳನ್ನು ಅರ್ಥಮಾಡಿಕೊಂಡು ಮನುಷ್ಯರಾಗಿ ಬದುಕಬೇಕು. ನಾವೆಲ್ಲರೂ ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ವಚನಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರು, ಶ್ರೀಮಠದ ಭಕ್ತರಾದ ಪರಶುರಾಮ ಹರ್ಲಾಪುರ, ವಕೀಲರಾದ ಜಯದೇವ ಕೆರೂಡಿ, ಶಿವಯೋಗೆಪ್ಪ ಅಂಗಡಿ, ರುದ್ರಪ್ಪ ಜಾಬೀನ, ರುದ್ರೇಶ ಚಿನ್ನಣ್ಣನವರ, ನಿಂಗಪ್ಪ ಆರೇರ, ಅಮೀರಜಾನ ಬೇಪಾರಿ, ಶಾಹೀದ ದೇವಿಹೂಸೂರ, ನಿಶಾರ ಪಟೇಲ, ಮಂಜನಗೌಡ ಗಾಜೀಗೌಡ್ರ, ಮುತ್ತಿರಾಜ ಹಿರೇಮಠ, ನವೀದ ಅಮ್ಮಿನಬಾವಿ ಸೇರಿದಂತೆ ಅನೇಕರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *