ವಿಶ್ವ ಬಸವಧರ್ಮ ಸಮಾವೇಶದ ಸಮಾರೋಪ
ಲಿಂಗಸುಗೂರು :
ಲಿಂಗೈಕ್ಯ ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 115ನೇ ಸಂಸ್ಮರಣೋತ್ಸವ, ಶರಣ ಸಂಸ್ಕೃತಿ ಮಹೋತ್ಸವ ಹಾಗೂ ವಿಶ್ವ ಬಸವಧರ್ಮ ಸಮಾವೇಶದ ಸಮಾರೋಪದ ಪ್ರಯುಕ್ತ ಪಟ್ಟಣದಲ್ಲಿ ಈಚೆಗೆ ವಚನ ಗ್ರಂಥಗಳ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.

ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಪಟದಿಂದ ಆರಂಭವಾದ ವಚನ ಗ್ರಂಥ ತಾಡೋಲೆ ಕಟ್ಟಿನ ಅಡ್ಡಪಲ್ಲಕ್ಕಿ ಜೊತೆ ವಿಶ್ವಗುರು ಬಸವಣ್ಣನವರ, ಲಿಂಗೈಕ್ಯ ವಿಜಯಮಹಾಂತ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಸಾಗಿ ಬಂದಿತು.

ಮೆರವಣಿಗೆಯು ಬಸವಸಾಗರ ವೃತ್ತ, ಬಸ್ ನಿಲ್ದಾಣ ವೃತ್ತ, ಗಡಿಯಾರ ವೃತ್ತ ಸೇರಿ ಪ್ರಮುಖ ಬೀದಿಗಳ ಮುಖಾಂತರ ಮರಳಿ ಶಾಖಾ ಅನುಭವ ಮಂಟಪಕ್ಕೆ ಬಂದು ಸೇರಿತು.
ಇಲಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಗುರುಮಹಾಂತ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಮನಗೂಳಿಯ ವಿರತೀಶಾನಂದ ಸ್ವಾಮೀಜಿ, ಗಿರಿಮಲ್ಲನಗೌಡ ಕರಡಕಲ್, ದೊಡ್ಡಪ್ಪ ಹೆಸರೂರು, ವೀರಣ್ಣ ಹುರಕಡ್ಡಿ, ಶರಣಪ್ಪ ಸಕ್ರಿ, ಬಸವರಾಜ ಐದನಾಳ, ಶಿವಾನಂದ ಐದನಾಳ, ಸೋಮಶೇಖರ ಬಳಗಾನೂರು, ಸುರೇಶ ಗಟ್ಟೂರು, ವಿಶ್ವನಾಥ ಸಕ್ರಿ, ಶರಣಗೌಡ ಕರಡಕಲ್, ನಾಗಭೂಷಣ, ಗಂಗಮ್ಮ ಸತ್ಯಂಪೇಟೆ, ಚೆನ್ನಮ್ಮ ಸಕ್ರಿ ಜಯಶ್ರೀ ಸಕ್ರಿ, ಜ್ಯೋತಿ ಐದನಾಳ, ದೀಪಾ ಇಜೇರಿ, ಅಮರವಾಣಿ ಐದನಾಳ, ನಾಗಪ್ಪ ಸಕ್ರಿ, ಅನ್ನಪೂರ್ಣ ಹುರಕಡ್ಡಿ, ಸರಿತಾ ನರಕಲದಿನ್ನಿ, ಸೋಮು ಐದನಾಳ, ಶಿವಪ್ಪ ಸಕ್ರಿ, ಅಶ್ವಿನಿ ಮಿಟ್ಟಿಮನಿ ಸೇರಿದಂತೆ ಬಸವಪರ ಸಂಘಟನೆಗಳ ನೂರಾರು ಜನ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
