ಬೆಳಗಾವಿ :
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಲಿಂಗಾಯತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ
ಬಸವ ಮಂಟಪ ಕೃತಿಯ ವಿವಾದಿತ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ದೊಡ್ಡ ಕ್ರಿಮಿನಲ್ ಕೆಲಸ ಮಾಡಿರುವ ಲೇಖಕ ರವಿ ಹಂಜ್ ಅವರನ್ನು ಕರ್ನಾಟಕ ಸರ್ಕಾರ ಆತನ ಪಾಸ್ ಪೋರ್ಟ್ ಜಪ್ತಿ ಮಾಡಿ, ಅಮೆರಿಕಾದ ವಿದೇಶಾಂಗ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಅಲ್ಲಿನ ಪೌರತ್ವವನ್ನು ರದ್ದುಗೊಳಿಸಬೇಕು. ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ಸಹ ಮನವಿ ಸಲ್ಲಿಸಿ ಹಂಜ್ ಮತ್ತು ಭಟ್ಟರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ ಕಠಿಣ ಕ್ರಮಕ್ಕೆ ಒತ್ತಾಯಿಸಲಾಯಿತು.
ಡಾ. ಶಶಿಕಾಂತ ಪಟ್ಟಣ, ಈರಣ್ಣ ದೇಯಣ್ಣವರ, ಸುನೀಲ ಸಾಣಿಕೊಪ್ಪ, ಶಶಿಭೂಷಣ ಪಾಟೀಲ, ಸುಧಾ ಪಾಟೀಲ, ಆಶಾಲತಾ ಸೊಗಲದ, ರತ್ನಕ್ಕ ಸಾಣಿಕೊಪ್ಪ, ಸಂಗಮೇಶ ಅರಳಿ, ಸುರೇಶ ನರಗುಂದ, ರಮೇಶ ಕಳಸನ್ನವರ, ಸದಾಶಿವ ದೇವರಮನಿ, ಶಂಕರ ಗುಡಸ, ನಾಗನಗೌಡರು, ಶ್ರೀರಂಗ ಜೋಶಿ ಮುಂತಾದ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
