“ಬಸವ ಸಂಸ್ಕೃತಿಯ ಮೇಲೆ ದಾಳಿ ನಿಲ್ಲದಿದ್ದರೆ ಬೀದಿಗಿಳಿದು ಹೋರಾಟ”

ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಬಸವ ದ್ರೋಹಿಗಳಿಗೆ ಒಮ್ಮತದ ಎಚ್ಚರಿಕೆ

ಬೆಂಗಳೂರು

ಬಸವ ನಿಂದನೆ ಮಾಡಿರುವ ರವಿ ಹಂಜ್, ವಿಶ್ವೇಶ್ವರ ಭಟ್ಟ ಹೊರತಂದಿರುವ ವಿವಾದಾತ್ಮಕ ಕೃತಿಯ ವಿರುದ್ಧ ಬಸವ ಸಮಿತಿಯಲ್ಲಿ ನಡೆದ ‘ಇವ ನಮ್ಮವ’ ಚಿಂತನ-ಮಂಥನ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಕೃತಿಯನ್ನು ಸಂಪೂರ್ಣ ನಿಷೇಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.

ಲಿಂಗಾಯತ ಮಠಾಧೀಶರ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಸರ್ವಾನುಮತದಿಂದ ಒಂದೇ ನಿರ್ಣಯ ಕೈಗೊಳ್ಳಲಾಯಿತು:

“ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ, ಬಸವಾದಿ ಶರಣರ ಹಾಗೂ ಬಸವ ಸಂಸ್ಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯನ್ನು ಇಲ್ಲಿಗೇ ನಿಲ್ಲಿಸಬೇಕು. ಇದು ಮುಂದುವರೆದರೆ ಇಡೀ ಕನ್ನಡ ನಾಡಿನ ಜನತೆಯಾದ ನಾವೆಲ್ಲರೂ ಒಂದಾಗಿ ಬೀದಿಗಿಳಿದು ಹೋರಾಡುತ್ತೇವೆ ಎಂದು ಬಸವ ವಿರೋಧಿ, ಪಟ್ಟಭದ್ರ ಶಕ್ತಿಗಳಿಗೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ.”

ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತಮಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, “ವಿವಾದಿತ ಲೇಖಕನ ಹತ್ಯೆಗೆ ಬಹುಮಾನ ಘೋಷಿಸುವುದು ಸರಿಯಲ್ಲ. ವ್ಯಕ್ತಿಯನ್ನು ಕೊಲ್ಲುವ ಬದಲು ಅವರ ತಲೆಯಲ್ಲಿರುವ ಕಸವನ್ನು ತೆಗೆಯುವ ಕೆಲಸವಾಗಬೇಕು. ರಾಜ್ಯದ ಪ್ರತಿ ಗ್ರಾಮದಲ್ಲೂ ‘ಅನುಭವ ಮಂಟಪ ಅಭಿಯಾನ’ ಪುನರಾರಂಭಿಸಿ, ನುರಿತ ಸಂಶೋಧಕರಿಂದ ವಿವಾದಿತ ಕೃತಿಗೆ ತಕ್ಕ ಉತ್ತರ ನೀಡುವ ಯೋಗ್ಯ ಗ್ರಂಥವನ್ನು ಹೊರತರಬೇಕು.”

ಲಿಂಗಾಯತ ಮಠಾಧಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು “ಅಪಚಾರದ ಬರಹಗಳಿಗೆ ತಕ್ಷಣ ಸ್ಪಂದಿಸಲು 11 ಅಥವಾ 21 ವಿದ್ವಾಂಸರ ಸಮಿತಿ ರಚನೆಯಾಗಬೇಕು. ಗಣಾಚಾರ ಪಡೆಯಂತೆ ಸಜ್ಜಾಗಿ, ಮುಂದೆ ದಾಖಲೆಗಳಾಗಿ ಉಳಿಯುವಂತಹ ರಚನಾತ್ಮಕ ಉತ್ತರ ಗ್ರಂಥವನ್ನು ಹೊರತರುವ ಮೂಲಕ ದೊಡ್ಡ ಗೆರೆ ಎಳೆಯೋಣ ಎಂದರು.

ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ ಪುರಾಣ, ಕಾವ್ಯಗಳ ಅತಿಶಯೋಕ್ತಿಗಳನ್ನು ಆಧರಿಸಿ ಬಸವಣ್ಣನವರ ಚರಿತ್ರೆ ತಿರುಚುವುದು ಖಂಡನೀಯ. ಬಸವಣ್ಣನವರು ಲಿಂಗೈಕ್ಯರಾದ ಎರಡು ವರ್ಷಗಳ ನಂತರ ಬಿಜ್ಜಳನ ಹತ್ಯೆಯಾಯಿತು ಎಂಬುದಕ್ಕೆ ಶಾಸನಗಳ ಆಧಾರವಿದೆ. ಸಂವಿಧಾನದ ಬದಲು ಮನುಸ್ಮೃತಿ ತರಲು ಯತ್ನಿಸುವ ವಿಕೃತ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ಅಗತ್ಯ.”

ತುಮಕೂರು ಸಿದ್ಧಗಂಗೆಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ; “ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತರಲ್ಲ, ಇಡೀ ಮನುಕುಲಕ್ಕೆ ದಾರಿದೀಪ. ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ; ಆದರೆ ಅದು ಪ್ರಕಟವಾಗದಂತೆ ಸಂಪೂರ್ಣ ನಿಷೇಧ ಹೇರಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಕೂಡಲಸಂಗಮದ ಗಂಗಾ ಮಾತಾಜಿ ಮಾತನಾಡಿ “ಅಪ್ಪ ಬಸವಣ್ಣನವರ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಸಿಂಹಗಳಂತೆ ಒಂದಾಗಿ ಹೋರಾಡಬೇಕು. ಹೆಣ್ಣುಮಕ್ಕಳಿಗೆ ದೈವತ್ವ ಮತ್ತು ಆಚಾರ್ಯ ಸ್ಥಾನ ನೀಡಿದ ಶರಣ ಚಳವಳಿಯ ಬಗ್ಗೆ ಅವಹೇಳನ ಸಹಿಸಲು ಸಾಧ್ಯವಿಲ್ಲ ಎಂದರು.

ಶಿವಮೊಗ್ಗದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತಮಾಡಿ: “ಹೊರಗಿನ ಕೊಡಲಿಗಳಿಗಿಂತ ಅವುಗಳಿಗೆ ಕಾವಾಗಿ ನಿಲ್ಲುವ ನಮ್ಮವರ ಬಗ್ಗೆ ಎಚ್ಚರವಿರಬೇಕು. ಸರ್ಕಾರದ ಕ್ಷಿಪ್ರ ಕಾನೂನು ಕ್ರಮ ಸ್ವಾಗತಾರ್ಹ. ಸಮಾಜ ಒಗ್ಗಟ್ಟಿನಿಂದ ಎಚ್ಚರವಾಗಿರಬೇಕು.”

ಮೈಸೂರಿನ ಶರಶ್ಚಂದ್ರ ಸ್ವಾಮೀಜಿ, “ಕಾವ್ಯ-ಪುರಾಣಗಳ ಕಥನಗಳನ್ನೇ ಐತಿಹಾಸಿಕ ಸತ್ಯವೆಂದು ಬಿಂಬಿಸಬಾರದು. ಅನುಭವ ಮಂಟಪದ ಯೋಜನೆಯಡಿ ಶತಮಾನವಾರು ಗ್ರಂಥಗಳನ್ನು ಆಧರಿಸಿ ಸುಯೋಜಿತ ಇತಿಹಾಸ ಕಟ್ಟುವ ಕೆಲಸವಾಗಬೇಕು.”

ಚಿತ್ರದುರ್ಗ ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ; “ವಚನ ಚಳವಳಿಯನ್ನು ವೈದಿಕ ಚೌಕಟ್ಟಿಗೆ ಸಿಲುಕಿಸಿ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ನಾಶಪಡಿಸುವ ಯತ್ನ ಸಲ್ಲದು. ಪರಸ್ಪರ ನಿಂದನೆ ಬಿಟ್ಟು ಎಲ್ಲ ಸ್ವಾಮೀಜಿಗಳು ಒಟ್ಟಿಗೆ ಕುಳಿತು ಸೌಹಾರ್ದಯುತವಾಗಿ ಚರ್ಚಿಸಿ ಬಸವ ಸಂಸ್ಕೃತಿ ಅಭಿಯಾನ ಮುಂದುವರಿಸೋಣ ಎಂದರು.

ಚಿಂತಕ ಎಸ್.ಜಿ. ಸಿದ್ಧರಾಮಯ್ಯನವರು ಮಾತಮಾಡಿ; “ಅಂಬೇಡ್ಕರ್ ಅವರಿಗಿಂತ ಮೊದಲೇ 12ನೇ ಶತಮಾನದಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬಸವಣ್ಣನವರು. ಪ್ರಕ್ಷಿಪ್ತ ವಚನಗಳನ್ನು ನಿವಾರಿಸಿ, ಕೆಳವರ್ಗದ ಶರಣರ ಮಾತುಗಳ ಆಧಾರದ ಮೇಲೆ ಸತ್ಯವನ್ನು ಎತ್ತಿಹಿಡಿಯಬೇಕು ಎಂದರು.

ಎಲ್. ಹನುಮಂತಯ್ಯ ಮಾತಮಾಡಿ: “ಸಮಾಜ ಒಡೆಯುವ ಇಂತಹ ‘ಸಾಂಸ್ಕೃತಿಕ ವಿಕೋಪ’ಗಳ ವಿರುದ್ಧ ಎಚ್ಚೆತ್ತು ಬಸವ ತತ್ವವನ್ನು ಮನೆಮನೆಗೆ ತಲುಪಿಸಬೇಕು. ಬಸವ ನಿಂದಕರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಮತ್ತು ಅವರ ಬುದ್ಧಿಭ್ರಮಣೆ ಸರಿಪಡಿಸುವ ಕೆಲಸವನ್ನು ಚಿಂತಕರು ಮಾಡಬೇಕು.”

ಕೆಆರ್ ಎಸ್ ಪಕ್ಷದ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ ಮಾತನಾಡಿ: “ಮಠಾಧೀಶರು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸುವುದನ್ನು ಬಿಟ್ಟು ಅಂತರ್ಜಾತಿ ವಿವಾಹಗಳಂತಹ ರಚನಾತ್ಮಕ ಸುಧಾರಣೆಗಳಿಗೆ ಒತ್ತು ನೀಡಬೇಕು. ಆಚಾರ ಲಿಂಗಾಯತರು ವಿಚಾರ ಲಿಂಗಾಯತರಾಗಿ ಪರಿವರ್ತನೆಯಾಗಬೇಕು ಎಂದರು.

ವೀರಶೈವ ಮಹಾಸಭಾದ ನವೀನ್ ಬಿಡದಿ ಮಾತಮಾಡಿ; “ರವಿ ಹಂಜ್ ಕೇವಲ ಸೂತ್ರದ ಬೊಂಬೆ; ಪ್ರಕರಣದ ಪ್ರಮುಖ ವ್ಯಕ್ತಿಯಾದ ವಿಶ್ವೇಶ್ವರ ಭಟ್ ಅವರಿಗೆ ತಕ್ಷಣ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿ ಆಸ್ಟ್ರೇಲಿಯಾದಿಂದ ಬಂಧಿಸಿ ಕರೆತರಬೇಕು. ಜನವರಿಯಲ್ಲಿ ರಾಜ್ಯಮಟ್ಟದ ‘ಬಸವ ಪಡೆ’ ಅಸ್ತಿತ್ವಕ್ಕೆ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಬಸವರಾಜ ಸಾದರ, ಬಸವರಾಜ ಸಬರದ, ಜಾಣಗೆರೆ ವೆಂಕಟರಾಮಯ್ಯ, ಆರ್ ಜಿ ಹಳ್ಳಿ‌ ನಾಗರಾಜ್, ನಾಗರಾಜ ಮೂರ್ತಿ, ಅರವಿಂದ ಜತ್ತಿ, ರಾಜಸಾಬ್, ವಿಜಯಲಕ್ಷ್ಮಿ ಬಾಳೆಕುಂದ್ರಿ, ಮುಕ್ತಾ , ಸಿದ್ದು ಯಾಪಲಪರವಿ, ಅನಂತ ನಾಯಕ, ಟಿ.ಆರ್. ಚಂದ್ರಶೇಖರ, ಜೆ.ಎಸ್.ಪಾಟೀಲ ಹೋರಾಟಗಾರರು ಸೇರಿದಂತೆ ಅನೇಕ ಮಠಾಧೀಶರು, ಸಾಹಿತಿಗಳು ಹಾಗೂ ಬಸವಪರ ಚಿಂತಕರು ಉಪಸ್ಥಿತರಿದ್ಧರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
2 Comments
  • ವಿಶ್ವದರ್ಶನ · 36ನೇ ವಿಶೇಷ ಪುರವಣಿ

    NIRMAYA PRABHU 21–25 · ARAGINA BHUMI / MAYE

    ಪುಟ 1 · ಕನ್ನಡ
    Page 2 · English

    A

    THIRTY-SIXTH A4 MULTICOLOUR SPECIAL SUPPLEMENT

    Two pages. One rootless tree. One victory over Maya.
    Read the Kannada supplement first, then the English companion — same vachanas, same light, two languages.

    ಓಂ ಶ್ರೀ ಗುರು ಬಸವಲಿಂಗಾಯ ನಮಃ

    36ನೇ ಸಂಚಿಕೆ
    ವಿಶೇಷ ಪುರವಣಿ
    A4 ಬಹುವರ್ಣ
    ವಿಶ್ವದರ್ಶನ
    ವಿಶ್ವಬಸವಧರ್ಮ | ವಿಶ್ವಕಾಯಕ ಸತ್ಯ ಶುದ್ಧ ಪ್ರಮಾಣಿಕ ಮಾರ್ಗದರ್ಶನ | ವಿಶ್ವವಚನ ವಿಶ್ವವಿದ್ಯಾಲಯ | ಕನ್ನಡ ದಿನ ಪತ್ರಿಕೆ — ಹುಬ್ಬಳ್ಳಿ

    ✦
    VISHWADARSHANA · HUBBALLI
    ✦
    ವಿಶ್ವದರ್ಶನ ವಿಶ್ವವಚನ ವಿಶ್ವವಿದ್ಯಾಲಯ
    ವಿಶ್ವದರ್ಶನ ವಿಶ್ವವಚನ ವಿಶ್ವವಿದ್ಯಾಲಯ
    ನಿರ್ಮಾಯಪ್ರಭು ವಚನಗಳು 21–25

    ಅರಗಿನ ಭೂಮಿಯಲ್ಲಿ ಬೇರಿಲ್ಲದ ವೃಕ್ಷ — ಮಾಯೆಯನ್ನು ಗೆದ್ದ ಶರಣ
    ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭು ವಚನಗಳು 21–25 | ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ಅನುಭವಮಂಟಪ ಸಂಸತ್ತಿನ ಶೂನ್ಯ ಪೀಠ ಪರಂಪರೆ

    ತಪೋಭೂಮಿ

    ತಪೋಭೂಮಿ ಹೊಸಕೇರಿ ಬಸವನಗರ, ಅಂಚೆ ಮು. ತಿಮ್ಮಾಪೂರ, ತಾ. ರಾಮದುರ್ಗ, ಜಿ. ಬೆಳಗಾವಿ | ಅಸೂಟಿ ಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ

    ಸತ್ಯ
    ಶುದ್ಧ
    ಕಾಯಕ
    ಅಕ್ಷರ ಅರಿವು
    ಗೌರವ ಸಂಪಾದಕರು ಶ್ರೀ ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಮತ್ತು ಪ್ರಧಾನ ಸಂಪಾದಕರು ಡಾ. ಎಸ್. ಎಸ್. ಪಾಟೀಲ
    ಗೌರವ ಸಂಪಾದಕರು ಶ್ರೀ ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು | ಪ್ರಧಾನ ಸಂಪಾದಕರು ಡಾ. ಎಸ್. ಎಸ್. ಪಾಟೀಲ
    ✦
    ಸಂಪಾದಕೀಯ · EDITORIAL
    ✦
    ವಿಶ್ವಬಸವಧರ್ಮ ವಿಶ್ವಕಾಯಕ — ಸತ್ಯ, ಶುದ್ಧ, ಪ್ರಮಾಣಿಕ ಮಾರ್ಗದರ್ಶನ. ಈ ಪುರವಣಿಯು ಅಕ್ಷರವನ್ನು ಕೇವಲ ಓದುವ ವಸ್ತುವಾಗಿ ಅಲ್ಲ, ಬದುಕುವ ಬೆಳಕಾಗಿ ನೋಡುತ್ತದೆ. ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ಅನುಭವಮಂಟಪ ಸಂಸತ್ತಿನ ಶೂನ್ಯ ಪೀಠ ಪರಂಪರೆ ಇಲ್ಲಿ ನೆನಪಾಗುತ್ತದೆ: ಪೀಠ ಖಾಲಿ ಇರಬಹುದು, ಆದರೆ ಪ್ರಶ್ನೆ, ವಿವೇಚನೆ ಮತ್ತು ಅನುಭವಕ್ಕೆ ಅಲ್ಲಿ ಸದಾ ಸ್ಥಾನವಿದೆ.

    ವಿಶ್ವವಚನ ವಿಶ್ವವಿದ್ಯಾಲಯವು ಜಗತ್ತಿನ ಮೌಲ್ಯಪೂರ್ಣ ವಚನಗಳನ್ನು ಪಾಠಿಯಾಗಿ ನೀಡುತ್ತದೆ. ಪಾಠಿ — ಪಾಠ ಮಾಡುವುದು; ಕಾಯಕ ಮಾಡುವುದು; ಅಕ್ಷರ ಅರಿವಿನ ಮಹಾಮನೆಯ ಬೆಳಗು ಹಚ್ಚುವುದು. ಅನೇಕ ಭಾಷೆಗಳ ಸತ್ಯ ಶುದ್ಧ ಕಾಯಕ ಮಾಡುವವರ ಹೃದಯಪುಷ್ಪವೇ ಈ ವಿಶ್ವವಿದ್ಯಾಲಯದ ನಿಜವಾದ ಪಠ್ಯ. ಓದು, ಬರಹ ಕಲಿತು, ಕಲಿಸಿದ ಕಲಿಕೆ ಅಂದಿನ ವಿಶ್ವಬಸವಧರ್ಮ ವಿಶ್ವಕಾಯಕದ ಜೀವಂತ ಸಾಕ್ಷಿ.

    ಜೀವಿಗಳ ಹೃದಯ ಭಾಷೆಯೇ ದೇವಭಾಷೆ. ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ ಬೇರಿಲ್ಲದ ವೃಕ್ಷ ಚಿಗುರಿದಾಗ, ನಮ್ಮ ಒಳಗಿನ ಒಣಗಿದ ನಂಬಿಕೆಗಳೂ ಮತ್ತೆ ಹಸಿರಾಗುತ್ತವೆ. ಶಾಖೆಯಿಲ್ಲದೆ, ತಳಿರಿಲ್ಲದೆ, ಮೊಗ್ಗೆಯಿಲ್ಲದೆ ಅರಳುವ ಈ ವೃಕ್ಷವು ಹೇಳುವುದು ಒಂದೇ: ಬೆಳಕು ಬೇರಿನಿಂದಲ್ಲ, ಅನುಭವದಿಂದ ಬರುತ್ತದೆ.

    ✦
    ವಚನಗಳು 21–25 · VACHANAS
    ✦
    21
    ವಚನ 21

    ಬೇರಿಲ್ಲದ ವೃಕ್ಷ · ನಿಜಲಿಂಗೈಕ್ಯ

    ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ ಬೇರಿಲ್ಲದ ವೃಕ್ಷಪುಟ್ಟಿ, ಶಾಖೆಯಿಲ್ಲದೆ ಪಲ್ಲವಿಸಿ, ತಳಿರಿಲ್ಲದೆ ಕೊನರಾಗಿ, ಮೊಗ್ಗೆಯಿಲ್ಲದೆ ಹೂವಾಗಿ, ಹೂವಿಲ್ಲದೆ ಕಾಯಾಗಿ, ಕಾಯಿಲ್ಲದೆ ಹಣ್ಣಾಗಿ, ಹಣ್ಣಿಲ್ಲದೆ ರಸತುಂಬಿ ತೊಟ್ಟು ಬಿಟ್ಟಿತ್ತು. ಆ ಹಣ್ಣಿಗೆ ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ತೃಪ್ತಿಯಿಲ್ಲದೆ ಪರಿಣಾಮಿಸಿ, ಸಂತೋಷವಿಲ್ಲದೆ ನಿಶ್ಚಿಂತನಾದ ಈ ಭೇದವ ಬಲ್ಲರೆ ಘನಲಿಂಗಿಯಾಗಿ ನಿಜಲಿಂಗೈಕ್ಯ ಅನಾದಿ ಶರಣನೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.

    22
    ವಚನ 22

    ನೀರಲ್ಲಿ ಅಗ್ನಿ · ಬಯಲು

    ಅರಗಿನ ಭೂಮಿ ನೀರಹೊಳೆಯಲ್ಲಿ ಅಗ್ನಿ ಪುಟ್ಟಿ ನೀರಲ್ಲಿ ನೊಂದದೆ ನೀರು ಸುಟ್ಟು. ಆ ಅರಗಿನ ಭೂಮಿಯನುರುಹದೆ, ಆ ಭೂಮಿಯಲ್ಲಿರುವ ತೃಣ ಪತ್ರಿ ಮೊದಲಾದ ಎಲ್ಲ ವೃಕ್ಷವನು ದಹಿಸಿ, ಆ ಅರಗಿನ ಭೂಮಿಯಲ್ಲಿ ಬಯಲಾದುದ ಕಂಡು ಸೋಜಿಗ ಸೋಜಿಗ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.

    23
    ವಚನ 23

    ಗುರಿಯಿಲ್ಲದ ಬಾಣ · ಮಹಾಪ್ರಸಾದ

    ಅರಣ್ಯದ ಅಡ್ಡಗುಡ್ಡದ ಸರೋವರದಲ್ಲಿರುವ ಹಂದಿಯ ಉಕ್ಕಿನ ಬಿಲ್ಲತಂತಿಯ ನಾರಿಗೆ, ಗುರಿಯಿಲ್ಲದ ಸರಳ ಹೂಡಿ ಹೊಡೆಯಲು ಬಿಲ್ಲು ಮುರಿದು, ನಾರಿ ಹರಿದು, ಬಾಣ ತಾಗಿ, ಹಂದಿ ಸತ್ತು ಬಾಣ ಉಳಿಯಿತು. ಆ ಬಾಣದಿಂದ ಸತ್ತ ಹಂದಿಯ ಕಾಲು, ಕೊಳಗ, ಹಲ್ಲು, ಕೋರಿ, ಕಣ್ಣು, ತಲೆ, ಕರಳು, ಮಿದಡು, ಚರ್ಮ, ಕೂದಲ ಮೊದಲಾದವನು ತೆಗೆದು ಉಳಿದುದನು ನೀರಿಲ್ಲದೆ ಹೆಸರಿಟ್ಟು, ಬೆಂಕಿಯಿಲ್ಲದೆ ಸುಟ್ಟು, ಪಾಕವ ಮಾಡಿ, ಎನ್ನ ನಿರ್ಮಾಯಪ್ರಭುವಿಂಗೆ ಅರ್ಪಿಸಿ, ಆ ಪ್ರಭುವಿನ ಮಹಾಪ್ರಸಾದವ ಕೊಂಡು ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.

    24
    ವಚನ 24

    ಮೂವರು ಕಳ್ಳರು · ಪ್ರಾಣಲಿಂಗೈಕ್ಯ

    ಅರಣ್ಯದ ಬೆಟ್ಟದಲ್ಲಿ ಮೂವರು ಕಳ್ಳರು ಮನೆಮಾಡಿ ಲೆಕ್ಕವಿಲ್ಲದೆ ನರರ ಕೊಲ್ಲುತ್ತಿರ್ಪರು, ಅರಣ್ಯದ ಬೆಟ್ಟವ ಸುಟ್ಟು ಮನೆಯ ಸುಡದೆ ಕಳ್ಳರಕೊಂದಾತನೆ ಪ್ರಾಣಲಿಂಗೈಕ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.

    25
    ವಚನ 25

    ಮಾಯೆಯ ಪರೀಕ್ಷೆ · ಶಿವಜ್ಞಾನ

    ಅರಣ್ಯದೊಳಗಿರುವಣ್ಣಗಳ ಅಂಗನೆಯರ ಅಂಗಳದಲ್ಲಿರಿಸಿತ್ತು ಮಾಯೆ. ಅರಮನೆಯೊಳಗೆ ಅಂಗನೆಯರ ಸಂಗಸುಖದಲ್ಲಿರುವಣ್ಣಗಳ ಅರಣ್ಯದ ಗುಡ್ಡಗಂಹಾರ ಗುಹ್ಯದಲ್ಲಿರಿಸಿತ್ತು ಮಾಯೆ. ಹೆಣ್ಣುಬಿಟ್ಟೆವೆಂಬಣ್ಣಗಳ ಸ್ತ್ರೀಯರ ಕಣ್ಣ ಮುಂದೆ ಕಾಲಕಟ್ಟಿ ಕೆಡವಿತ್ತು ಮಾಯೆ. ಹೊನ್ನು ಬಿಟ್ಟೆವೆಂಬಣ್ಣಗಳ ಕಳವಳದಿಂದ ಪರದ್ರವ್ಯವ ಅಪಹರಿಸಿತ್ತು ಮಾಯೆ. ಮಣ್ಣಬಿಟ್ಟೆವೆಂಬಣ್ಣಗಳ ಮಠಮಾನ್ಯಕ್ಕೆ ಹೋರಾಡಿಸಿ ದೇಶಭ್ರಷ್ಟನಾಗಿ ತಿರುಗಿಸಿತ್ತು ಮಾಯೆ. ಬುದ್ಧಿವಂತರೆಂಬಣ್ಣಗಳ ಮುದ್ದಿ ನರಕವ ತಿನಿಸಿತ್ತು ಮಾಯೆ. ಸಕಲವಿದ್ಯೆ ಬಲ್ಲೆವೆಂಬಣ್ಣಗಳ ಬಲ್ಲತನ ನೋಡಾ ! ಬಾಲೆಯರ ಬಾಯ ಲೋಳೆಯ ನೆಕ್ಕಿಸಿತ್ತು ಮಾಯೆ. ಸ್ತ್ರೀಯರ ಮುಖ ನೋಡಲಾಗದೆಂದು ಮುಖದಮೇಲೊಂದು ವಸ್ತ್ರವ ಹಾಕಿಕೊಂಡು ತಿರುಗುವಣ್ಣಗಳ ಬಾಲೆಯರ ಬಾಗಿಲ ಮೋರೆಯಲ್ಲಿರಿಸಿತ್ತು ಮಾಯೆ. ಸ್ತ್ರೀಯರ ಕಂಡು ನಾಚಿ ಮಾತಾಡದಣ್ಣಗಳ ನಾಚಿಕೆಯ ಬಿಡಿಸಿ ಮಾತಾಡಿಸಿತ್ತು ಮಾಯೆ. ವಿರಕ್ತರೆಂಬಣ್ಣಗಳ ಬಾಲೆಯರ ಬಾಯಿತೊಂಬಲ ತಿನಿಸಿತ್ತು ಮಾಯೆ. ಪಾದಪೂಜೆಯ ಮಾಡಿ ಪಾದೋದಕ ಪ್ರಸಾದ ಕೊಂಬ ಭಕ್ತಜನಂಗಳ ಪಾದಪೂಜೆಯ ಮಾಡಿಸಿಕೊಂಡು ಪಾದೋದಕ ಪ್ರಸಾದವ ಪಾಲಿಸುವ ಹಿರಿಯರ ಇಂತಪ್ಪ ದೇಶಭಕ್ತರೆಂಬುಭಯರ ಬಾಲೆಯರ ಪಾದಪೂಜೆ ಮಾಡಿಸಿತ್ತು ಮಾಯೆ. ಸರ್ವಾಂಗ ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ಬಾಲೆಯರ ಮನೆಯಲ್ಲಿ ಒಲಿಯ ಬೂದಿಯ ಬಳಿಸಿತ್ತು ಮಾಯೆ. ಮಂತ್ರವ ನೆನೆವಣ್ಣಗಳ ಬಾಲೆಯರ ನಾಮವ ನೆನಿಸಿ ಅವರ ಬಾಗಿಲ ಮುಂದೆ ಹೆಳವನಂತೆ ಹೊಗಳಿಸಿತ್ತು ಮಾಯೆ. ಕರಸ್ಥಲದಲ್ಲಿ ಲಿಂಗವ ಪಿಡಿವಣ್ಣಗಳ ಬಾಲೆಯ ಕುಚವ ಪಿಡಿಸಿ ಮುಖದ ಮೇಲೆ ಚುಂಬನವ ಕೊಡಿಸಿ ತೊಡೆಯ ಸಂದಿನಲ್ಲಿರಿಸಿತ್ತು ಮಾಯೆ. ಪಂಡಿತರೆಂಬಣ್ಣಗಳ ಬಾಲೆಯರ ಮಲವಸರುವ ಪೃಷ್ಠ ಹಿಡಿಸಿತ್ತು ಮಾಯೆ. ಇಂತಪ್ಪ ಮಾಯಾಶಕ್ತಿಯ ಗೆಲುವರೆ ನವಖಂಡಪೃಥ್ವಿಮಧ್ಯದಲ್ಲಿರುವ ದೇವ ದಾನವ ಮಾನವರು ಮೊದಲಾದವರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರಿಗಲ್ಲದೆ ಇಲ್ಲ ಅಲ್ಲ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.

    ಮಾಯೆಯ ಸೂತ್ರ
    ಸೂತ್ರ ನೋಡಿ
    ಮಾಯೆ = ಹೆಣ್ಣು + ಹೊನ್ನು + ಮಣ್ಣು ಬಿಟ್ಟೆನೆಂಬ ಅಹಂ | ಗೆಲುವು = ಶಿವಜ್ಞಾನಸಂಪನ್ನ ಶಿವಶರಣರಿಗಲ್ಲದೆ ಇಲ್ಲ

    ✦
    ✦ ✦ ✦
    ✦
    ಅಕ್ಷರ ಅರಿವಿನ ಮಹಾಮನೆಯ ಬೆಳಗು | ಜೀವಿಗಳ ಹೃದಯ ಭಾಷೆ ದೇವಭಾಷೆ | ಶರಣು ಶರಣಾರ್ಥಿಗಳು

    ಪುಟ 1 / 2 · ವಿಶ್ವದರ್ಶನ ಕನ್ನಡ ದಿನ ಪತ್ರಿಕೆ · ಹುಬ್ಬಳ್ಳಿ

    ಪುಟ 1
    English ಪುಟ 2 ಕ್ಕೆ
    OM SHRI GURU BASAVALINGAYA NAMAHA

    36TH ISSUE
    SPECIAL SUPPLEMENT
    A4 MULTICOLOUR
    Vishwadarshana
    Vishwa Basava Dharma | Vishwa Kayaka · True Pure Honest Guidance | Vishwa Vachana Vishwavidyalaya | Kannada Daily — Hubballi

    ✦
    IN ENGLISH · PAGE 2
    ✦
    Vishwadarshana Vishwa Vachana Vishwavidyalaya
    NIRMAYA PRABHU · VACHANAS 21–25

    Rootless Tree in Sawdust Land — Conquering Maya
    The vachanas of Kadanaolagada Shankarapriya Channakadambalinga Nirmaya Prabhu, in the lineage of the world’s first democratic Anubhava Mantapa parliament and its Shunya Peetha tradition.

    TAPOBHUMI

    Tapobhumi Hosakeri Basavanagar, Post: Mu. Timmapur, Taluk: Ramadurga, District: Belagavi · Life-vision of Asuti Shriphalara Shivayogis

    Honorary Editor Shri Murugharajendra Koraneshwara Mahaswamigalu | Chief Editor Dr. S. S. Patil
    ✦
    EDITORIAL · IN ENGLISH
    ✦
    Vishwa Basava Dharma Vishwa Kayaka means true, pure, honest guidance. This supplement treats the letter not only as something to read, but as a light to live by. It remembers the world’s first democratic Anubhava Mantapa parliament and the Shunya Peetha tradition: the seat may be empty, yet question, discernment and experience always have a place there.

    Vishwa Vachana Vishwavidyalaya offers the world’s valuable vachanas as a lesson — a paati, a patha. Doing true, pure Kayaka becomes the lesson itself, and the great house of letter-knowledge is lit from within. In many languages, the heart-flower of those who do true, pure Kayaka is the university’s truest text.

    Learning reading and writing, and teaching what is learned — that day’s Vishwa Basava Dharma Vishwa Kayaka — is a living testimony. The heart language of beings is divine language. When the rootless tree sprouts in sawdust land, even our dried-up certainties can turn green again.

    In sawdust land, in fire-pit water, a rootless tree sprouted, blossomed without branch, budded without leaf, flowered without bud, fruited without flower, filled with juice without fruit and dropped its stalk. That fruit walked without legs, saw without eyes, held without hands, tasted without mouth, relished without tongue, transformed without satisfaction, and became carefree without happiness. One who knows this mystery becomes Ghanalingi, true Lingaikya, eternal Sharana.

    ✦
    THE FIVE VACHANAS · THEMES
    ✦
    21
    VACHANA 21

    The rootless tree · True Lingaikya

    No root, no branch, no leaf — yet fruit, juice and release. The one who knows this secret becomes the eternal Sharana.

    22
    VACHANA 22

    Fire in water · The open expanse

    Fire is born in the stream, burns water without being hurt by water, and leaves only the open sky.

    Fire born in sawdust land in the water-stream burnt water without suffering in water.

    23
    VACHANA 23

    The aimless arrow · Mahaprasada

    Bow breaks, string snaps, arrow remains. What is cooked without water or fire is offered — and work itself becomes prasad.

    24
    VACHANA 24

    Three thieves · Prana-Lingaikya

    Burn the hill, spare the house, end the thieves within. That one is one with the living Linga.

    Three thieves in the forest hill killed countless men; burning the forest hill without burning the house, one who killed the thieves is Prana-Lingaikya.

    25
    VACHANA 25

    The test of Maya · Shiva-knowledge

    Maya tests the forest-dweller and the palace-dweller, the learned and the renounced — and is won only by Shiva-knowledge.

    Maya placed forest-dwellers in women’s courtyards and palace-dwellers in forest-hill caves. Those who said they had left woman, gold and land — Maya made them fall. Such Maya-power cannot be won by gods, demons and humans in the nine continents. Only for Shiva-knowledge-endowed Shiva-Sharanas, not otherwise.

    Maya = the “I have left it” ego
    Woman + gold + land — the claim of having left them can itself become a bond. Victory belongs only to Shiva-knowledge.

    ✦
    ✦ ✦ ✦
    ✦
    Vishwa Basava Dharma | Vishwa Vachana Vishwavidyalaya | Sharanu Sharanarthigalu

    Page 2 / 2 · Vishwadarshana Kannada Daily · Hubballi

    Back to top
    ಕನ್ನಡ ಪುಟ 1
    Page 2
    This is a reading supplement. The Kannada vachanas on Page 1 are the source text; the English page offers theme guidance for study and reflection.

  • ಒಳ್ಳೆಯ ಸಂದೇಶ ರವಾನಿಸಿದ್ದಿರಿ.ಈ ವಿಚಾರಗಳು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *