ಬಸವ ಕೇಂದ್ರ ವಚನ ಲೇಖನ ಸ್ಪರ್ಧೆಯಲ್ಲಿ ೮೦೦ಕ್ಕೂ ಹೆಚ್ಚು ಮಕ್ಕಳು ಭಾಗಿ

ರವಿಕುಮಾರ. ಸಿ.ಕೆ
ರವಿಕುಮಾರ. ಸಿ.ಕೆ

ಧಾರವಾಡ : ೮೦೦ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಮಕ್ಕಳು ನಗರದಲ್ಲಿ ಭಾನುವಾರ ನಡೆದ ವಚನ ಕಂಠಪಾಠ ಲೇಖನ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಆರ್.ಎಲ್.ಎಸ್ ಮಹಾವಿದ್ಯಾಲಯದಲ್ಲಿ ಬಸವ ಕೇಂದ್ರ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ ವಚನ ಕಂಠಪಾಠ ಲೇಖನ ಸ್ಪರ್ಧೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮಂಜುನಾಥ ಅಡವೇರ ಉದ್ಘಾಟಿಸಿ, ಜೀವನ ಮೌಲ್ಯ ಗೃಂಥ ಬಿಡುಗಡೆಗೊಳಿಸಿದರು.

ಹಿಂಸೆ, ಹುಸಿ, ನಿಂದೆ, ವ್ಯಭಿಚಾರ, ದೈಹಿಕ ದುರಾಚಾರದಲ್ಲಿ ಕೆಲವರು ತೊಡಗಿಕೊಂಡು ಹಾಳಾಗುತ್ತಿದ್ದಾರೆ ಇದರಿಂದ ದೂರ ಸರಿಯಬೇಕಾದರೆ ಬಸವಾದಿ ಶರಣ ಸಾಹಿತ್ಯ ಮನನ ಮಾಡಿಕೊಂಡು ಜೀವನ ಮೌಲ್ಯ ಹೆಚ್ಚಿಸಿಕೊಳ್ಳಲು ಸಾದ್ಯವೆಂದು ಎಂದು ಅಭಿಪ್ರಾಯಪಟ್ಟರು.

ಬಸವಾದಿ ಶರಣರು ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳನ್ನು ರಚಿಸಿದ್ದು ಅವು ನಮ್ಮ ಬದುಕಿನ ದಾರಿ ದೀಪವಾಗಿವೆ. ಹಾಲಿಗೆ ಉಪ್ಪು ಬೆರೆಸಿದಾಗ ಅದು ಮೊಸರಿನ ರೂಪ ಪಡೆಯುತ್ತದೆ ನಂತರ, ಮಜ್ಜಿಗೆಯಾಗಿ ಬೆಣ್ಣೆಯಾಗಿ ಕಾಣಿಸುತ್ತದೆ. ಬೆಣ್ಣೆ ಕಾಯಿಸಿದಾಗ ತುಪ್ಪವಾಗಿ ಪರಿಣಮಿಸುತ್ತದೆ. ಅದೇ ರೀತಿ ವಿದ್ಯಾರ್ಥಿಗೆ ಬಸವಾದಿ ಶರಣರ ವಚನ ಸಾಹಿತ್ಯ, ಧಾರ್ಮಿಕತೆ, ವೈಚಾರಿಕತೆ, ಅರಿವಿನ ಜ್ಞಾನ ಕೊಟ್ಟಾಗ ಸಂಸ್ಕಾರ ಪಡೆದು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ತನ್ನ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುತ್ತಾನೆ ಎಂದರು.

ಆರ್.ಎಲ್.ಎಸ್ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಆರ್.ಬಿ.ಬಾನಪ್ಪನವರ ಮಾತನಾಡಿ, ಶ್ರಾವಣ ಮಾಸವು ಪವಿತ್ರವಾದ ದಿನವಾಗಿದೆ ಈ ಸಮಯದಲ್ಲಿ ಮನೆ ಸದಸ್ಯರು ನಿತ್ಯ ಒಂದು ವಚನ ಓದಿ ಅದರ ಭಾವರ್ಥವನ್ನು ತಿಳಿಸಿದರೆ ಮನೆಯಲ್ಲಿ ಸಂತಸದ ಹೊನಲು ಹರಿಯುತ್ತದೆ. ಮಕ್ಕಳಿಗೆ ಬುದ್ದಿ ಹೇಳಿ ತಿಳುವಳಿಕೆ ನೀಡುವ ಬದಲಾಗಿ ವಚನ ಓದುವ ಬರೆಯುವ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಸಿದರೆ ಅವರಿಗೆ ಜೀವನ ಮೌಲ್ಯದ ಅರಿವು ಸಿಗುತ್ತದೆ ಎಂದರು.

ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಶ್ರೀಮತಿ ಕೆ.ಎನ್.ಕರಿಗಾರ, ಶಕುಂತಲಾ ಮನ್ನಂಗಿ ಉಪಸ್ಥಿತರಿದ್ದರು. ಎಫ್.ಬಿ.ಕಣವಿ ನಿರೂಪಿಸಿದರು. ಬಸವಂತ ತೋಟದ ಸ್ವಾಗತಿಸಿದರು. ಡಾ. ಗಿರೀಶ ದೇಸೂರ ವಂದಿಸಿದರು.

ಎಲ್ಲ ಮಕ್ಕಳಿಗೆ ಉಚಿತ ನೋಟಪುಸ್ತಕ ಹಾಗೂ ಜೀವನ ಮೌಲ್ಯ ಗೃಂಥವನ್ನು ವಿತರಣೆ ಮಾಡಲಾಯಿತು.

Share This Article
Leave a comment

Leave a Reply

Your email address will not be published. Required fields are marked *