ಹುಬ್ಬಳ್ಳಿ
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಕೇಂದ್ರದ ಸಹಯೋಗದಲ್ಲಿ JLM ಸಭಾಂಗಣದಲ್ಲಿ
ವಚನ ಶ್ರಾವಣ ಕಾರ್ಯಕ್ರಮದಲ್ಲಿ ಶರಣ ಶ್ರೀ ಶಶಿಧರ ಕರವೀರಶೆಟ್ಟರ ಅನುಭಾವವನ್ನು ನೀಡಿದರು.
ಶರಣರ ವಚನಗಳು ವಿಶ್ವ ಸಾಹಿತ್ಯಕ್ಕೆ ಕನ್ನಡಿಗರು ನೀಡಿದ ಕೊಡುಗೆ, ಎಂದರು.
ಲಿಂಗಾಯತ ಧರ್ಮವು ವೇದಾಂತ, ಉಪನಿಷತ್ತಗಳಂತೆ ಕೇವಲ ಕ್ರಿಯೆ ಹಾಗೂ ಜ್ಞಾನವನ್ನೆ ಕೇಂದ್ರವಾಗಿ ಇಟ್ಟುಕೊಂಡ ಧರ್ಮವಲ್ಲ. ಜ್ಞಾನ ಮತ್ತು ಕ್ರಿಯೆ ಮಧ್ಯದಲ್ಲಿ ಸಮತೆಯನ್ನು ಸಾಧಿಸಿದ ಧರ್ಮ ಎಂದರು.
ಲಿಂಗ ಪೂಜೆ ಪರಿಣಾಮವನ್ನು ಕೊಡಬೇಕಾದರೆ ಅನುಭಾವ ಅವಶ್ಯ. ಅರಿವು, ಆಚಾರಗಳ ಸಮನ್ವತೆಯಿಂದ ಬಂದದ್ದೇ ಅನುಭಾವ ಎಂದು ಹೇಳಿದರು.
ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು ಹಾಗೂ ವಿರೋಧ ಪಕ್ಷದ ಉಪನಾಯಕರಾದ ಶ್ರೀ ಅರವಿಂದ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗದಿದ್ದರೆ ಬಸವಣ್ಣ ಕೇವಲ ಬ್ರಾಹ್ಮಣರ ಗುರುವಾಗಿ ಇರುತ್ತಿದ್ದರು ಎಂದರು.
ದಿವ್ಯ ಸಾನಿಧ್ಯವನ್ನು ಮೂರು ಸಾವಿರ ಮಠದ ಪೂಜ್ಯ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು ವಹಿಸಿ ಲಿಂಗಾಯತರು ಇಷ್ಟಲಿಂಗ ಕಟ್ಟಿಕೊಳ್ಳಬೇಕು, ವಿಭೂತಿ, ರುದ್ರಾಕ್ಷಿ ಧರಿಸಬೇಕೆಂದು ಯುವಕರಿಗೆ ಕರೆಕೊಟ್ಟರು.
ಲಿಂಗಾಯತ ಧರ್ಮದ ತತ್ವ ಸಿದ್ದಾಂತಗಳನ್ನು ಪ್ರಾಮಾಣಿಕತೆಯಿಂದ ಪ್ರಚಾರ ಮಾಡಿ ಎಂದು ಸಂಘಟಕರಿಗೆ ಸೂಚನೆ ನೀಡಿದರು.
ಅಧ್ಯಕ್ಷತೆಯನ್ನು ಶ್ರೀ ಎಸ್. ವಿ. ಗೊಂಗಡಶೆಟ್ಟರ ವಹಿಸಿದ್ದರು. ಪ್ರಸ್ತಾವಿಕವಾಗಿ ಶ್ರೀ ಜಿ.ಬಿ. ಹಳಿಯಾಳ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ನಿರೂಪಣೆಯನ್ನು ಸುರೇಶ ಹೊರಕೇರಿ ಮಾಡಿದರು. ಯುವ ಬಸವ ಕೇಂದ್ರದ ಯುವಕರು ಸ್ವಯಂಸೇವಕರಾಗಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರುವಂತೆ ಮಾಡಿದರು.