ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಹುಬ್ಬಳ್ಳಿ: ಶ್ರಾವಣ ಮಾಸದ ನಿಮಿತ್ಯ ಘಂಟಿಕೇರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗೆ ಇಷ್ಟಲಿಂಗ ಪೂಜೆಯ 3ನೆ ವಾರದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ರವಿವಾರ ಏರ್ಪಡಿಸಲಾಗಿತ್ತು. ಶ್ರೀ ಗುರುಬಸವ ಮಂಟಪದ ಶರಣೆಯರಾದ ಅನಿತಾ ಕುಬಸದ, ಶಾರದಾ ಪಾಟೀಲ ಹಾಗೂ ನಿರ್ಮಲಾ ಬುರ್ಲಬಡ್ಡಿ ಕಾರ್ಯಕ್ರಮ ನಡೆಸಿಕೊಟ್ಟರು. ಮಾಹಿತಿ/ಚಿತ್ರ: ಕುಮಾರಣ್ಣ ಪಾಟೀಲ್
ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣೆ ಮಂಗಲಕ್ಕ ನಾಲ್ವಾಡ ಅವರ ಮನೆಯಲ್ಲಿ ಶನಿವಾರ ನಡೆಯಿತು. ಧರ್ಮಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನ ಚಿಂತನೆಯನ್ನು ಶರಣ ಸಂತೋಷ ನರಗುಂದ ಮಾಡಿದರು. ಶರಣರಾದ ಎನ್.ಎಚ್. ಹಿರೇಸಕ್ರಗೌಡ್ರ, ಎಸ್.ಎ. ಮುಗದ ಅವರು ವಚನದ ಕುರಿತು ತಮ್ಮ ಅನುಭಾವವನ್ನು ಹಂಚಿಕೊಂಡರು. ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಪ್ರಕಾಶ ಅಸುಂಡಿ, ಎಂ.ಬಿ. ಲಿಂಗದಾಳ, ಶೇಖಣ್ಣ ಕವಳಿಕಾಯಿ, ಶೇಖಣ್ಣ ಕಳಸಾಪುರಶೆಟ್ರ, ಪ್ರಶಾಂತ ಲಿಂಗದಾಳ, ಸುರೇಶ ಹಳ್ಳಿಕೇರಿ, ಮಂಜುನಾಥ ಅಸುಂಡಿ, ಹನುಮಂತ ಪಾತ್ರೋಟ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಸರೋಜಾ ಮುಗದ, ಗಂಗಮ್ಮ ಹೂಗಾರ, ಲೀಲಾವತಿ ಬಳ್ಳೊಳ್ಳಿ, ಮಂಜುಳಾ ಹಾಸಲಿಕರ, ಕಸ್ತೂರಿ ಗೋಣಿ, ಸುಜಾತ ವಾರದ, ರೇಣಕ್ಕ ಹಾಸಲಿಕರ ಹಾಗೂ ನಾಲ್ವಾಡ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ:ಶರಣು ಅಂಗಡಿ

ರಾಷ್ಟ್ರೀಯ ಬಸವ ದಳದ ಬಸವ ಜ್ಯೋತಿ ಕಾರ್ಯಕ್ರಮ ಬೆಂಗಳೂರು, ಕುಂಬಳಗೋಡು, ಬಸವ ಗಂಗೋತ್ರಿ ಬಡಾವಣೆಯ ವಿಜಯ ಪ್ರಕಾಶ ಅವರ ಮನೆಯಲ್ಲಿ ನಡೆಯಿತು.

ಬಸವಭಾರತ ಪ್ರತಿಷ್ಠಾನ ಮತ್ತು ಚಿಕ್ಕವೀರ ದೇಶಿಕೇಂದ್ರ ಸ್ವಾಮಿ ಉಚಿತ ವಿದ್ಯಾರ್ಥಿ ನಿಲಯ, ಮೈಸೂರು ಸಹಭಾಗಿತ್ವದಲ್ಲಿ ಲಿಂಗಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಶರಣ ಚೌಹಳ್ಳಿ ನಿಂಗರಾಜಪ್ಪನವರು ಶನಿವಾರ 35 ಕಾಲೇಜು ವಿದ್ಯಾರ್ಥಿಗಳಿಗೆ ಲಿಂಗಧಾರಣೆ ಮಾಡಿ ಶಿವಯೋಗವನ್ನು ಹೇಗೆ ವೈಜ್ಞಾನಿಕವಾಗಿ ಮಾಡಬೇಕೆಂದು ತೋರಿಸಿದರು. ಮಾಹಿತಿ/ಚಿತ್ರ ಪ್ರಸನ್ನ ಎಸ್ ಎಂ

ಕೊಪ್ಪಳ ಸಂಚಾರಿ ಅರಿವಿನ ಮನೆ ರವಿವಾರದ ಕಾರ್ಯಕ್ರಮ ಗುರುಬಸವ ಮಹಾಮನೆಯಲ್ಲಿ ಬೀದರ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು. ವಚನಗಳಲ್ಲಿ ನಿಜಕೈವಲ್ಯ ಮತ್ತು ನಿಜಲಿಂಗೈಕ್ಯ ಕುರಿತು ಶರಣ ಬಸವರಾಜಪ್ಪ ಇಂಗಳದಾಳ ಉಪನ್ಯಾಸ ಗೈದರು. ರುದ್ರಪ್ಪ ಹಳ್ಳಿ ಮತ್ತೀತರ ಶರಣ, ಶರಣೆಯರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ

ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ (ರಿ) 12 ನೇ ವಷ೯ದ 20 ನೇ ದಿನದ ವಚನ ಶ್ರಾವಣ ಸಂಚಾರಿ ಅರಿವಿನ ಮನೆ ಕಾಯ೯ಕ್ರಮ ಶರಣ ಚನ್ನಬಸಪ್ಪ ಬಳ್ಳಾರಿ ಇವರ ಮನೆಯಲ್ಲಿ ನಡೆಯಿತು. ಪಂಚಾಚಾರಗಳಲ್ಲಿ ಒಂದಾದ ಗಣಾಚಾರ ವಿಷಯವಾಗಿ ಶರಣ ಶರಣಬಸನಗೌಡ ಪಾಟೀಲ, ಅಮರೇಶಪ್ಪ ಬಳ್ಳಾರಿ ಅನುಭಾವಗೈದರು. ಮರಕಟ್ಟ ಗ್ರಾಮದ ಬಸವ ಬಳಗ ಹಾಗೂ ಕೊಪ್ಪಳದ ಶರಣೆಯರಿಂದ ವಚನ ಗಾಯನ ನೆರವೇರಿತು. ಮಾಹಿತಿ/ಚಿತ್ರ: ಶರಣಬಸನಗೌಡ ಪಾಟೀಲ
ಕಲಬುರಗಿ ಬಸವಪರ ಸಂಘಟನೆ 'ವಚನ ವೈಭವ' ೨೦ನೇ ದಿನದ ಕಾರ್ಯಕ್ರಮ ಶರಣರಾದ ಡಾ. ಶಶಿಕಲಾ ಕುಮಾರಗೌಡ ಪಾಟೀಲ ಅವರ ಮನೆಯಲ್ಲಿ ನಡೆಯಿತು. ಶರಣ ನೂಲಿ ಚಂದಯ್ಯಾ, ಶರಣೆ ಅಕ್ಕನಾಗಮ್ಮ, ಡಾ ಎಂ.ಎಂ.ಕಲಬುರ್ಗಿಯವರ ಕುರಿತು ಅನುಭಾವಿ ಶರಣ ಡಾ. ಟಿ. ಗುರುಬಸಪ್ಪ ಮಾತನಾಡಿದರು. ಅಧ್ಯಕ್ಷತೆ ಶರಣ ಪ್ರಕಾಶ ಚಿಂಚೋಳಿ ವಹಿಸಿದ್ಧರು. ಮುರುಘೇಂದ್ರ ಚಿಂಚೋಳಿಮಠ, ಆರ್.ಜೆ. ಶೆಟಗಾರ, ಧನರಾಜ ತಾಬೋಳಿ. ರವಿ ಸಜ್ಜನ, ಶಶಿಕಾಂತ ಪಸಾರ, ನಳಿನಿ ಮಹಾಗಾಂವಕರ, ಸಾವಿತ್ರಿ ಪಾಲಕಿ, ಬಸಮ್ಮ ರಾಜಾಪೂರ, ಶಾರದಾ ಓಗಿ ಮುಂತಾದವರು ಭಾಗವಹಿಸಿದ್ದರು. ಮಾಹಿತಿ/ಚಿತ್ರ: ಮಹಾಂತೇಶ ಕಲಬುರ್ಗಿ

ಕಲಬುರ್ಗಿ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ೨೩ನೇ ದಿನದ ವಚನ ವೈಭವ ಕಾರ್ಯಕ್ರಮ ಶರಣ ದತ್ತರಾಜ ಜಿ.ಹೂಗಾರ ಇವರ ಮನೆಯಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಶರಣ ಜಗದೀಶ್ ಡಿ. ಪಾಟೀಲ ವಹಿಸಿದ್ದರು. ಅನುಭಾವ ಶರಣ ಸಂತೋಷ ಹೂಗಾರ ಗೈದರು. ಶರಣ/ಶರಣೆಯರಾದ ಪ್ರಭುಲಿಂಗ ಮಹಾಗಾಂವಕರ, ಸಿದ್ಧರಾಮ ಯಳವಂತಗಿ, ರವೀಂದ್ರ ಶಾಬಾದಿ, ಆರ್.ಜೆ. ಶೆಟಗಾರ, ಚಿಂಚೋಳಿಮಠ, ಶಶಿಕಾಂತ ಪಸಾರ, ನಳಿನಿ ಮಹಾಂಗಾವಕರ, ಸಾವಿತ್ರಿ ಪಾಲ್ಕಿ, ಶಾರದಾ ಓಗಿ, ಬಸಮ್ಮ ರಾಜಾಪುರ ಮತ್ತೀತರು ಭಾಗವಹಿಸಿದ್ಧರು. (ಮಾಹಿತಿ/ಚಿತ್ರ: ಮಹಾಂತೇಶ ಕಲಬುರ್ಗಿ)
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಚಂದ್ರಶೇಖರ್ ಬಿ. ಗೊಲ್ಲರ ಅವರ ಮನೆಯಲ್ಲಿ ಸೋಮವಾರ ನಡೆಯಿತು. ಧರ್ಮಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನ ಚಿಂತನೆಯನ್ನು ಶರಣ ಎನ್. ಎನ್.ಎಚ್. ಹಿರೇಸಕ್ರಗೌಡ್ರ ಮಾಡಿದರು. ಶರಣ/ ಶರಣೆಯರಾದ ಪ್ರಕಾಶ ಅಸುಂಡಿ, ಎಂ.ಬಿ. ಲಿಂಗದಾಳ, ಪ್ರಶಾಂತ ಲಿಂಗದಾಳ, ಸುರೇಶ ಹಳ್ಳಿಕೇರಿ, ರಾಮಣ್ಣ ಕಳ್ಳಿಮನಿ, ಗೌರಕ್ಕ ಬಡಿಗಣ್ಣವರ, ನಾಗರತ್ನ ಅಸುಂಡಿ, ಸರೋಜಾ ಮುಗದ, ಮಂಜುಳಾ ಹಾಸಲಿಕರ ಹಾಗೂ ಅಮರೇಶ್ವರ ನಗರದ ಜನ ಭಾಗಿಯಾಗಿದ್ದರು. (ಮಾಹಿತಿ/ಚಿತ್ರ: ಶರಣು ಅಂಗಡಿ)

List of Images
1/16

Leave a comment