ಲಿಂಗಾಯತರಾದವರು ಗುರು ಲಿಂಗ ಜಂಗಮರನ್ನು ಸದಾ ಸ್ಮರಿಸಬೇಕು. ಶರಣರ ವಚನಗಳಂತೆ ನಾವು ಬದುಕಬೇಕೆಂದು ಹುಕ್ಕೇರಿ ತಾಲ್ಲೂಕ, ಬಸವಬೆಳವಿಯ ಪೂಜ್ಯ ಶರಣಬಸವ ದೇವರು ಹೇಳಿದರು.
ಅವರು ಇತ್ತೀಚೆಗೆ ಹೊಸಪೇಟೆಯ ಸುರಭಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ತತ್ವದಂತೆ ಜರುಗಿದ ಚಿತ್ತವಾಡಗಿಯ ಲಿಂಗೈಕ್ಯ ಶರಣ ಅರಳಿ ಕೊಟ್ರೇಶಪ್ಪ ಅವರ 70ನೇ ವರ್ಧಂತಿ ಸಂಸ್ಮರಣೆ, ಅವರ ಮೊಮ್ಮಗನ ಲಿಂಗಧಾರಣೆ ಹಾಗೂ ನಾಮಕರಣ ಸಮಾರಂಭದಲ್ಲಿ ಅನುಭಾವ ನೀಡುತ್ತಿದ್ದರು.
ನಾವೆಲ್ಲ ಇದ್ದಾಗ ಉಳಿಯುವಂತ ಕಾರ್ಯ ಮಾಡಿ ಹೋಗಬೇಕು. ಲಿಂಗೈಕ್ಯ ಅರಳಿ ಕೊಟ್ರಪ್ಪನವರು ಅಂತಹ ಕಾರ್ಯ ಮಾಡಿ ಹೋಗಿದ್ದಾರೆ. ಅವರ ಕಾರ್ಯವನ್ನು ಅವರ ಧರ್ಮಪತ್ನಿ ಪಾರ್ವತಿ, ಮಗ ಪ್ರಭುದೇವ, ಸೊಸೆ ಪೂಜಾ ಹಾಗೂ ಬಂಧುಗಳು ಮುಂದುವರೆಸಿಕೊಂಡು ಹೊರಟಿದ್ದಾರೆ, ಎಂದು ಹೇಳಿದರು.
ಚಿತ್ತರಗಿ-ಇಲಕಲ್ಲ ವಿಜಯ ಮಹಾಂತೇಶ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿದ್ದರು. ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಪ್ರಾರ್ಥನೆ, ಪೂಜೆ ನೆರವೇರಿಸಿದರು.