ನಿಜಾಚರಣೆ: ಐದನಾಳ ಮತ್ತು ಬರಗುಂಡಿ ಕಟುಂಬದ “ಬಸವೋತ್ಸವ” ಕಾರ್ಯಕ್ರಮ

ಗದಗ:

ಈ ಸೃಷ್ಠಿಯಲ್ಲಿ ಜೀವಿಗಳ ಹುಟ್ಟು ಸಹಜ ಆದರಂತೆ ಮನುಷ್ಯನ ಹುಟ್ಟು ಸಹಜ. ಆ ಹುಟ್ಟು ಸಹಜವಾದರೂ ಅದೊಂದು ಉತ್ಸವದಂತೆ ಆಚರಣೆ ಮಾಡುವುದೆ ಬಸವೋತ್ಸವ. ಇದನ್ನು ವೈದಿಕದ ಆಚರಣೆಯಲ್ಲಿ “ನಾಮಕರಣ” ಎಂದು ಕರೆದರೆ, ಬಸವತತ್ವದ ಆಚರಣೆಯಲ್ಲಿ ಇದನ್ನು ಬಸವೋತ್ಸವ ಎನ್ನುವುದು ಸೂಕ್ತ.

ಏನಿದು “ಬಸವೋತ್ಸವ”?. “ಆದಿ ಬಸವಣ್ಣ ಅನಾದಿ ಲಿಂಗವು ಹುಸಿ ಹುಸಿ ಆದಿ ಲಿಂಗ ಅನಾದಿ ಬಸವಣ್ಣ” ಎನ್ನುವ  ಅಲ್ಲಮರ ಈ ವಚನದಲ್ಲಿ ಬಸವಣ್ಣ ಬರೀ ವ್ಯಕ್ತಿಯಲ್ಲ , ಬಸವಣ್ಣ ಒಂದು ಸಿದ್ದಾಂತ.

ಬಸವಣ್ಣ ಅನಾದಿ ಎನಿಸಿದ ಮೇಲೆ ಈ ಸೃಷ್ಠಿ ಅನಾದಿಯ ಬಸವಣ್ಣನೆ ಆಗಿರುವುದರಿಂದ ಆ ತತ್ವದ ಆಚರಣೆಯಲ್ಲಿ ಬದುಕುವ ಜನರಲ್ಲಿ ಹುಟ್ಟುವ ಪ್ರತಿಯೊಂದು ಜೀವವು ಆ ಅನಾದಿ ಬಸವಣ್ಣನ ಅಂಶವೆ ಆಗಿರುವುದರಿಂದ ಇದನ್ನು ಬಸವೋತ್ಸವ ಎಂದು ಆಚರಿಸುವುದು ಸರಿ.

  “ಅಣುವೊಳಗೆ ಅಣುವಾಗಿಪ್ಪಿರಿ, ಎಲೆ ದೇವಾ, ನೀವು. ಮನದೊಳಗೆ ಘನವಾಗಿಪ್ಪಿರಿ ಎಲೆ ದೇವಾ ಜಗದೊಳಗೆಯೂ ನೀವಿಲ್ಲದಡೆಯುಂಟೆ ?” ಎನ್ನುವ  ಸಿದ್ದರಾಮೇಶ್ವರ ವಚನದಂತೆ ಅಣುವೊಳಗೆ ಅಣುವಾಗಿಪ್ಪ ಬಸವ ಅಂಶ ಇಂದು ಐದನಾಳ ಮತ್ತು ಬರಗುಂಡಿ ಕುಟುಂಬದಲ್ಲಿ ಬಸವಣ್ಣ ಚಿದಾಂಶವಾಗಿ ಹುಟ್ಟಿದ ಆ ಚೇತನಕ್ಕೆ ಒಂದು ಹೆಸರು ಕೊಟ್ಟು ಅದನ್ನು ಬಸವೋತ್ಸದಂತೆ ಆಚರಣೆ ಮಾಡಲಾಯಿತು.

ನವೆಂಬರ್ 23, 2025 ರಂದು ಗದಗ ಜಿಲ್ಲೆಯ ಬಸವಲಿಂಗ ಮಹಾಮನೆಯಲ್ಲಿ ಬಸವೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬರಗುಂಡಿ ಕುಟುಂಬದ ಪ್ರತಿಯೊಂದು ಮನೆಯ ಕಾರ್ಯಗಳು ಬಸವಣ್ಣನಿಲ್ಲದೆ ಜರುಗದು.

ಇಂದು ಬಸವೋತ್ಸವ ಈ ಕಾರ್ಯಕ್ರಮವನ್ನು ಷಟ್ಸ್ಥಲ ಧ್ವಜಾರೋಹಣದೊಂದಿಗೆ   ಪೂಜಾ ಮತ್ತು ದರ್ಶನ್ ಐದನಾಳ ಮತ್ತು ಶಿವಾನಂದ ಐದನಾಳ ದಂಪತಿಗಳು ನೆರವೇರಿಸಿದರು.

ಸರ್ವ ಶರಣರನ್ನು ನನೆಯುತ್ತಾ,  ಶರಣರ ನೆನೆದು ಭಜನೆ ಮಾಡೋಣ ಎನ್ನುವ ಪ್ರಾರ್ಥನೆಯೊಂದಿಗೆ, ಸಂವಿಧಾನ ವಚನ ಪೀಠಿಕೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಯಕ್ರಮದಲ್ಲಿ ವಿಭೂತಿ ಧಾರಣೆ, ಬಸವೋದಕದೊಂದಿಗೆ ವೇದಿಕೆಯ ಮೇಲಿನ ದಂಪತಿಗಗೆ ಧಾರಣೆ ಮಾಡಿಸಿದರು. 8 ನೇ ತಿಂಗಳಲ್ಲಿ ತಾಯಿಗೆ ಗರ್ಭದಲ್ಲಿ ಲಿಂಗಧಾರಣೆ ಮಾಡಿಸಿದ ಆ ಲಿಂಗವನ್ನು ಇಂದು ತಾಯಿ ಪೂಜ ಐದನಾಳ ಲಿಂಗ ನಿರೀಕ್ಷಣೆ ಮಾಡಿ ಆ ಮಗುವಿನ ಕೊರಳಿಗೆ ತೊಡಿಸಿದರು.

ನಂತರ ಶರಣರ  ವಚನಗಳ ಪಠಣದೊಂದಿಗೆ ಪ್ರತಿಯೊಂದು ಕಾರ್ಯಗಳು ನಡೆದವು.

ಶರಣರ ಜೋಗುಳ ಹಾಡಿನೊಂದಿಗೆ ಬಸವ ಹಾರೈಕೆಗಳೊಂದಿಗೆ  ಬಸವಣ್ಣನೆ ಚಿದಾಂಶವಾದ ಆ ಮಗುವಿಗೆ ಭೌತಿಕವಾಗಿ, ವ್ಯವಹಾರಿಕವಾಗಿ ಹೆಸರನ್ನು ಇಡಲಾಯಿತು.

ಬಸವ ತತ್ವವನ್ನು ಅಪ್ಪಿ ಒಪ್ಪುವಂತ ನಡೆ ನುಡಿ ಒಂದಾಗಿ ಬದುಕುವ ಬಸವಭಕ್ತರಿಗೆ ಈ ಬಸವೋತ್ಸವ ಎನ್ನುವ ಈ ನಿಜಾಚರಣೆಯ  ಕಾರ್ಯಕ್ರಮ ಒಂದು ಮಾದರಿಯ ಕಾರ್ಯಕ್ರಮ.

ಕಾರ್ಯಕ್ರಮವನ್ನು ಶಿಲ್ಪಾ ಉಮೇಶ ನಾರನಾಳ ನೆರವೇರಿಸಿಕೊಟ್ಟರು.  ಕಾರ್ಯಕ್ರಮದಲ್ಲಿ ಐದನಾಳ ಮತ್ತು ಬರಗುಂಡಿ ಬಂಧುಗಳು, ಸ್ನೇಹಿತರು, ಹಿತೈಷಿ ಬಳಗ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
4 Comments
  • ದರ್ಶನ, ಹಾಗೂ ಪೂಜಾ ಐದನಾಳ ರ ಬಸವ ಕುಡಿಯ ಬಸವೋತ್ಸವ ಕಾರ್ಯಕ್ರಮ ನೊಡಿ ಸಂತೋಷವಾಯಿತು.
    ಕುಟುಂಬದವರಿಗೆ ಒಳಿತಾಗಲಿ ಎಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುವೆ 🙏

Leave a Reply

Your email address will not be published. Required fields are marked *