ಅಮೆರಿಕಾದಲ್ಲಿ ಇಷ್ಟಲಿಂಗ ಪೂಜೆ ವೈಜ್ಞಾನಿಕ ಅಧ್ಯಯನ: ಅರವಿಂದ ಜತ್ತಿ

ಶಿವಮೊಗ್ಗ

ಅಮೆರಿಕಾ ವಿಜ್ಞಾನಿಗಳ ತಂಡ ಇಷ್ಟಲಿಂಗ ಪೂಜೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ಜಗತ್ತೇ ಇತ್ತ ನೋಡುವಂತ ಫಲಿತಾಂಶ ದೊರಕುವ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿಂತನ ಕಾರ್ತಿಕ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ- ಬಸವ ತತ್ವ ವಿಶ್ವವ್ಯಾಪಿ ಆಗಬೇಕಿದೆ. ಈ ನಿಟ್ಟಿನಲ್ಲಿ ವಚನಗಳನ್ನು 60 ಭಾಷೆಗಳಿಗೆ ಅನುವಾದಿಸುವ ಕೆಲಸ ರಾಷ್ಟ್ರೀಯ ಬಸವ ಸಮಿತಿಯಿಂದ ನಡೆದಿದೆ ಎಂದು, 800 ವರ್ಷವಾದರೂ ಬಸವಣ್ಣ ಇನ್ನೂ ಕರ್ನಾಟಕ ಬಿಟ್ಟು ಹೊರಗೆ ಹೋಗಿಲ್ಲ. ಈ ನಿಟ್ಟಿನಲ್ಲಿ ವಚನಗಳನ್ನು 60 ಭಾಷೆಗಳಿಗೆ ಅನುವಾದಿಸುವ ಕೆಲಸ ರಾಷ್ಟ್ರೀಯ ಬಸವ ಸಮಿತಿಯಿಂದ ನಡೆದಿದೆ ಎಂದು ವಿವರಿಸಿದರು.

‘ಬಸವಣ್ಣನವರ ಸಮಾಜದಲ್ಲಿ ಹುಟ್ಟಿದ್ದೇವೆ ಎಂಬ ಕಾರಣಕ್ಕೆ ಅವರ ಬಗ್ಗೆ ತಿಳಿಯಬೇಕು ಎಂದೇನಿಲ್ಲ. ನಾವು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು. ಬಸವಪ್ರಜ್ಞೆ, ವಚನಪ್ರಜ್ಞೆ, ಲಿಂಗಪ್ರಜ್ಞೆ ಮೂರೂ ಸಮುಚ್ಛಯಗೊಂಡಾಗ ಮಾತ್ರ ಬಸವತತ್ವದ ಅರಿವು ನಮಗಾಗುತ್ತದೆ. ಲಿಂಗ ಎಂಬುದು ಜಾತಿಯತೆಯ ಸಂಕೇತವಲ್ಲ ಎಂದರು.

ಚಿಕ್ಕಮಗಳೂರು ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯವಹಿಸಿದ್ದರು‌.

ಹಿರಿಯ ಸಾಹಿತಿ ಜಯರಾಜಶೇಖರ್, ವಿದ್ಯುತ್ ನೌಕರರ ಸಂಘದ ಚಂದ್ರಕಲಾ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಸವಕೇಂದ್ರದ ಅಧ್ಯಕ್ಷರಾದ ಬೆನಕಪ್ಪ ಅಧ್ಯಕ್ಷತೆವಹಿಸಿದ್ದರು.

ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಪ್ರಸನ್ನ, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಎನ್. ಮಂಜುನಾಥ್, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ವಿ. ಹರಿಪ್ರಸಾದ್ ಅವರುಗಳನ್ನು ಅಭಿನಂದಿಸಲಾಯಿತು. ನ್ಯಾಮತಿ ಚನ್ನಬಸಪ್ಪ ನಿರೂಪಿಸಿದರು.

Share This Article
3 Comments
    • ಖಂಡಿತಾ ಇದು ಕೇವಲ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ನ್ಯೂನ್ಯತೆಗಳನ್ನು ತಿದ್ದುವ ಹಾಗೂ ಸಮಾಜವನ್ನು ಪರಿವರ್ತಿಸುವ ಮಾನವತೆಯ ತಳಹದಿಯ ಮೇಲೆ ಜಾತಿ ಧರ್ಮ ವರ್ಗ ವರ್ಣ ಸಂಘರ್ಷ ರಹಿತ ಸಮಾಜವನ್ನು ನಿರ್ಮಿಸುವ ಕೆಲಸ ಬಸವ ತತ್ವದ ಅನುಯಾಯಿಗಳಿಂದ ಬಸವ ಸಮಿತಿ ಹಾಗೂ ಮಠ ಮಾನ್ಯಗಳು ಒಟ್ಟಾಗಿ ಈ ನಿಟ್ಟಿನಲ್ಲಿ ದುಡಿಯಬೇಕಿದೆ ಇದು ನನ್ನ ಪ್ರಾರ್ಥನೆ

      • ಬಸವ ಪ್ರಜ್ಞೆ ಪ್ರಪಂಚದ ಎಲ್ಲರಿಗೂ ಸಿಗುವಂತಾಗಿ ಅದರ ಸುಖವನ್ನು ಅನುಭವಿಸುವಂತಾಗಲಿ …🙏🙏

Leave a Reply

Your email address will not be published. Required fields are marked *