ಬಸವಣ್ಣ ಲಿಂಗಾಯತ ಧರ್ಮದ ಗುರು ಎಂದು ರೇಣುಕ ಪರಂಪರೆಯವರು ಒಪ್ಪುವರೇ?
ಸಾಣೇಹಳ್ಳಿ
(ಬಸವ ಜಯಂತಿಯನ್ನು ರೇಣುಕಾ ಜಯಂತಿಯ ಜೊತೆ ಆಚರಿಸಬೇಕೆಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿರುವ ಸುತ್ತೋಲೆಗೆ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪ್ರತಿಕ್ರಿಯೆ.)
ಸಾಂಸ್ಕೃತಿಕ ನಾಯಕ, ವಿಶ್ವಗುರು, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರ ಆಶಯಗಳಿಗೆ ಮೆರಗು ಬರಬೇಕಾದಲ್ಲಿ ಬಸವಜಯಂತಿಯಂದು ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಅವರ ಸಂದೇಶಗಳ ಚಿಂತನ ಮಂಥನ ನಾಡಿನಲ್ಲೆಲ್ಲ ಏಪ್ರಿಲ್ 30 ರಂದು ನಡೆಯುವುದು ಸ್ವಾಗತಾರ್ಹ. ಆದರೆ ಅಂದು ಬೇರೆ ಯಾರ ಜಯಂತಿ ಆಚರಣೆ ಖಂಡಿತ ಬೇಡ ಎಂದು ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಬಸವ ಜಯಂತಿ ಮತ್ತು ರೇಣುಕ ಜಯಂತಿಯನ್ನು ಒಂದೇ ದಿನ ಮಾಡುವಂತೆ ‘ಅಖಿಲ ಭಾರತ ವೀರಶೈವ ಲಿಂಗಾಯತ ಸಂಸ್ಥೆ’ಯ ರಾಜ್ಯಾಧ್ಯಕ್ಷ ಶ್ರಿ ಶಂಕರ ಬಿದರಿ ಅವರು ಆದೇಶ ಹೊರಡಿಸಿದ್ದನ್ನು ಗಮನಿಸಿದೆವು.
ಬಸವ ಜಯಂತಿಯಂದು ರೇಣುಕ ಜಯಂತಿ ಮಾಡುವ ಉದ್ದೇಶವೇನು? ಬಸವಣ್ಣ ಲಿಂಗಾಯತ ಧರ್ಮದ ಗುರು ಎಂದು ರೇಣುಕ ಪರಂಪರೆಯವರು ಒಪ್ಪುವರೇ? ಬಸವಣ್ಣ ಐತಿಹಾಸಿಕ ವ್ಯಕ್ತಿ. ರೇಣುಕರು?
ಬಸವಜಯಂತಿಯಂದು ಬಸವಣ್ಣನವರ ವಿಚಾರಗಳು ಜನಮನಕ್ಕೆ ಮುಟ್ಟಬೇಕೇ ಹೊರತು ರೇಣುಕ ಮತ್ತಿತರ ವಿಚಾರಗಳಲ್ಲ. ಬಸವಣ್ಣನವರ ತತ್ವಸಿದ್ಧಾಂತಗಳು ಸಮಾಜಮುಖಿ, ಜೀವಪರ. ಅಲ್ಲಿ ಸಮಾನತೆ ಇದೆ. ಸಕಲ ಜೀವಾತ್ಮರ ಒಳಿತಿದೆ. ಆತ್ಮಕಲ್ಯಾಣದ ಜೊತೆ ಲೋಕಕಲ್ಯಾಣವೂ ಇದೆ.
ಬಿದರಿ ಸಾಹೇಬರು ಇದೂವರೆಗೂ ತಾಳಿದ್ದಮನೋಧರ್ಮ ಇದ್ದ ಇದ್ದಂತೆ ಬದಲಾವಣೆಯತ್ತ ಮುಖ ಹೊರಳಿಸಿದ್ದು ,ಬಸವ ಅನುಯಾಯಿಗಳಿಗೆ ದ್ವಂದ್ವಕ್ಕೆ ಕಾರಣವಲ್ಲದೆ ? ಪರಮಪೂಜ್ಯ ಪಂಡಿತಾರಾಧ್ಯ ಶ್ರೀಗಳ ಆಶೀರ್ವಾದಂತೆ ,ಇಲ್ಲದ್ದು ಈಗೇಕೆ ಎಂಬುದು ಕಾಲೋಚಿತವಾಗಿ ಶುಭಾರ್ಶೀವಾದವೆಂಬೋಣ.
Good
ಬಸವ ಜಯಂತಿ ದಿವಸ ಅವರು ಜಯಂತಿ ಮಾತ್ರ ಮಾಡಿದರೆ ಅದಕ್ಕೆ ಬೆಲೆ ಇರುತ್ತದೆ .
ಸಾಣೇಹಳ್ಳಿ ಶ್ರೀಗಳ ಅಭಿಪ್ರಾಯವನ್ನು ಶರಣ ಶಂಕರ್ ಬಿದರಿ ಹೃದಯಪೂರ್ತಿ ಒಪ್ಪಿ ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡದಂತೆ ಮತ್ತೊಂದು ಸುತ್ತೋಲೆ ಹೊರಡಿಸುವರು ಎಂದು ನಾವು ಭಾವಿಸುತ್ತೇವೆ.
ಅದು ನಿಮ್ಮ ಭ್ರಮೆ
ಗಾಂಧಿ ಜಯಂತಿ ಅಂದರ ಗಾಂಧೀಜಿಯವರ ಮಾತ್ರ ಜಯಂತಿ ಮಾಡಬೇಕು.ಅದರಲ್ಲಿ ಇಂದಿರಾ ಗಾಂಧಿಯವರನ್ನು ಕೂಡಿಸಿ ಜಯಂತಿ ಮಾಡಬಾರದು .ಅದು ಅವರವರ ಮಹತ್ವ ಇದೆ.ಅದಕ್ಕೆ ಅವರವರ ಸ್ವತಂತ್ರ ಜಯಂತಿ ಮಾಡಿದರೆ ಮಹತ್ವ ಬರುತ್ತದೆ. ಜೈ ಭಾರತ.
ಬಿದರಿಯವರು ದಕ್ಷ ಆಡಳಿತಗಾರರು. ನ್ಯಾಯ ಅನ್ಯಾಯ ಪರಿಗಣಿಸಿ ಎಲ್ಲರಿಗೂ ನ್ಯಾಯ ಒದಗಿಸಿ ಕೊಟ್ಟವರು. ಆತ್ಮಸಾಕ್ಷಿಯಂತೆ ನಡೆದವರು. ಈಗ ಏಕೆ ಅವರ ಆತ್ಮಸಾಕ್ಷಿಗೆ ವಿರುದ್ದ ಹೋಗುತ್ತಿರುವರೋ ಅರ್ಥವಾಗುತ್ತಿಲ್ಲ.
Today is Akkamahadevi Jayanti as shared by J S Patil in hsi X post. Is there no circular in this regard??
Also for Basava Jayanti, please share on the what’s app group few posters and vachanas with Basavanna’s photo for all os us to upload and circle among our Lingayat family.
Thank you 🙏
ಆತ್ಮಸಾಕ್ಷಿ ನಮಗೆ ಲಿಂಗಾಯತರಿಗೆ ಇದೆಯೇ …ಇದ್ದರೆ ನೀವು ಆತ್ಮಸಾಕ್ಷಿ ಕೇಳಿ
ಬಿದರಿ ಸಾಹೇಬರಿಗೆ ಸಂಘ ಪರಿವಾರದವರ …ಶ್ರೀ ಆಶಿರ್ವಾದ ಆಗಿದೆ ಕಾಣಿಸುತ್ತದೆ..,…ಈ ಮೊದಲು ಅಂದರೆ ಕೆಲವು ತಿಂಗಳುಗಳ ಹಿಂದೆ ಮನುಸ್ಮೃತಿಯದು ಆಯಿತು…. ನಂತರ ಸುರುವಾಗಿದ್ದು…..ವಚನ ದರ್ಶನ……. ಬಿದರಿಯವರ “ಪಂಚಾಚಾರ್ಯರನ್ನು ಸೇರಿಸುವ ದರ್ಶನ” ಹಾಗೂ ಸಮಾಜವನ್ನು,,, ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಬಗ್ಗೆ, ಬಸವಣ್ಣನವರ ಜೊತೆಗೆ,,,,ಕಲಬೇರಿಕೆ ಆಚರಣೆ ತರಲು ಮುಂದಾಗಿದ್ದಾರೆ…. ಬಸವಾದಿ ಶರಣರ ಅನುಯಾಯಿಗಳು ಇವರ ಕುತಂತ್ರ ಅರಿತು ಕೊಳ್ಳಿ…. ಜೈ ಬಸವಣ್ಣನವರು…ಜೈ ಕರ್ನಾಟಕ…
ಎಲ್ಲಾ ವಿಷಯಗಳಲ್ಲಿ
ಇವರಿಗೆ ಏನಾಗಿದೆ,ಇಂಥ ವಿಚಾರಗಳು ತಲೆಯಲ್ಲಿ ಹೇಗೆ ಬಂತು. ಮಹಾಸಭೆಯ ಅದ್ಯಕ್ಷನಾದ ಮಾತ್ರಕ್ಕೆ ಇಂಥ ತೋರಿಕೆ ಹೇಳಿಕೆಗಳು ತಪ್ಪು. ಈಗಲಾದರೂ ಬದಲಾವಣೆ ಹೊಂದಿ. ಇಲ್ಲವೇ ಜನರೇಪಾಠಕಲಿಸಬೇಕಾಗುತ್ತದೆ.
ಇವನಾರವ ಇವನಾರವಅನ್ನೋ ವಚನಕ್ಕೆ ಇಡೀ ವೀರಶೈವರೆ ಮಾಡಿತ್ತಿರುವ ಅವಮಾನ ನಿಮ್ಮಲೆಲ್ಲ ವಿಶಾಲವಾದ ಮನೋಭಾವ ಬರೋವರ್ಗು ನೀವೆಲ್ಲ ವೀರಶೈವರೆ ಅಲ್ಲ ಹಾಗಾದರೆ ರೇಣುಕಾಚಾರ್ಯರು ನಿಮ್ಮ ಲೆಕ್ಕದಲ್ಲಿ ಇಲ್ಲವೇ ಇಲ್ಲಾ ಚರಿತ್ರೆ ಪೂರ್ತಿ ತಿಳಿಯದ ಅವಿವೇಕಿಗಳು ನಾವಾಗಿದ್ದೇವೆ ಅಲ್ಪ ವಿದ್ಯೆ ಮಹಾ ಗರ್ವ ಮೊದಲು ತೊಲಗಿಸಿ ಶಿವ ಪಾರ್ವತಿ ಯಾವುದು ಕಣ್ಣಿಗೆ ಕಾಣುವುದಿಲ್ಲ ಅವೆಲ್ಲ ಕಾಲ್ಪನಿಕ ಆದರೂ ಪರವಾಗಿಲ್ಲ ಬೇಜಾರ್ ಮಾಡ್ಕೋಬೇಡಿ ಬಸವಣ್ಣನವರ ಹಾಗೆ ಬಸವಣ್ಣನವರ ಅನುಯಾಯಿಗಳು ಇಧುವರೆಗೂ ಲಿಂಗಯುತ ಧರ್ಮಕ್ಕೆ ಒಬ್ಬೊಬ್ಬರು ಎಷ್ಟು ಜನರನ್ನ ಓಲೈಸಿ ಲಿಂಗಯುತಾರನ್ನಾಗಿ ಮಾಡಿದ್ದೀರಾ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಿ ಅವಾಗ ಗೊತ್ತಾಗುತ್ತೆ ನಿಮ್ಮ ಧರ್ಮದ ಬಗ್ಗೆ ನಿಮಗೆ ಇರುವ ಅಭಿಮಾನ ಹಾಗೂ ಗೌರವ ನಮ್ಮ ಧರ್ಮವನ್ನು ಇಧುವರೆಗೂ ಪಾಲಿಸಿಕೊಂಡು ಬಂದಿರುವ ಏಕೈಕ ಸದ್ಗುರು ಶ್ರೀ ಶಿವಕುಮಾರಸ್ವಾಮಿಗಳು ಮಾತ್ರ ಎಲ್ಲ ಧರ್ಮದವರನ್ನು ಗೌರವಿಸಿ ವೀರಶೈವ ಧರ್ಮದ ಬಗ್ಗೆ ಗೌರವ ಜೀವಂತವಾಗಿ ಇರುವಂತೆ ಮಾಡಿರುವವರು ಸಿದ್ದಗಂಗಾ ಶ್ರೀಗಳು ಸನಾತನ ಧರ್ಮ ಎಲ್ಲ ಕಾಲಕ್ಕೂ ಎಲ್ಲ ಧರ್ಮಕ್ಕೂ ಅನ್ವಯಿಸುತ್ತದೆ ಇತಿಹಾಸಕಿಂತ ಚರಿತ್ರೆ ತುಂಬಾ ಮುಖ್ಯ
ಅಪ್ಪಂಗ್ ಹುಟ್ಟಿದ್ ಮಾತು
ಶಂಕರಬಿದರಿಯವರು ಸುಮ್ಮನೆ ಏನೇನೋ ಹೇಳಲು ಅವರು ಜವಾಬ್ದಾರಿಯುತ ವ್ಯಕ್ತಿ ಅವರ ಜೊತೆ ಕೂತು ನಿದಾನವಾಗಿ ಸನಾತನ ಧರ್ಮ ಅರ್ಥ ಮಾಡಿಕೊಳ್ಳಿ ನಿಮಗೆ ಚರಿತ್ರೆ ಪೂರಾ ತಿಳಿದುಕೊಳ್ಳುವ ತಾಳ್ಮೆ ಇಲ್ಲಾ ಎಲ್ಲ ಕುರಿಗಳು ಸಾರ್ ಕುರಿಗಳು ಅನ್ನೋ ಕೆಲಸ ಮಾಡ್ಬೇಡಿ ಯಾರೋ ಹೇಳಿದ ಮಾತೆ ವೇದವಾಕ್ಯ ಅನ್ನೋದನ್ನ ಮರೆತು ಸ್ವಂತಿಕೆ ಯೋಚನೆ ಬಹಳ ಮುಖ್ಯ ನಾವು ಇವಾಗ ಕೇವಲ ಬದುಕೋದು ಬರೀ ಎಪ್ಪತ್ತು ವರ್ಷ ಅಷ್ಟೇ ದ್ವಾಪರ ಯುಗ ಅಂತಹ ಕಾಲಗಟ್ಟದ್ದಲ್ಲಿ ಸುಮಾರು 700ವರ್ಷಗಳ ಆಯುಷ್ಯ ಇತ್ತು ಅನ್ನೋದು ನಿಮಗೆ ಗೊತ್ತಿದಿಯೋ ಇಲ್ಲವೋ 🙏🙏🙏