ನಾನು ಬೀದರಿಗೆ ಬರ್ತೀನಂತ ತಿಳಿದ ಕೂಡಲೇ ಬಸವ ಭಕ್ತರು ಬೆದರಿ “ಚಟಪಟ ಚಟಪಟ ಒದ್ದಾಡಕ ಶುರು ಮಾಡ್ತಾವು, “
ಬನಹಟ್ಟಿ
ಬಸವತತ್ವ ಪ್ರಚಾರಕರಿಂದಾಗಿ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚುಗಳಾಗಿವೆ ಎಂದು ಕನ್ನೇರಿ ಸ್ವಾಮಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡುತ್ತ ಬಸವ ಭಕ್ತರು ಹಿಂದೂ ಧರ್ಮ ಟೀಕಿಸುತ್ತಾ, ಗುಡಿ ಕಟ್ಟಬೇಡಿ ಅಂತಾರೆ. ಆದರೆ ಬೇರೆ ಧರ್ಮಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ, ಎಂದು ಹೇಳಿದರು.
“ಬೀದರ್ ಜಿಲ್ಲೆದಾಗ್ ಇರುವಷ್ಟು ಚರ್ಚುಗಳು ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಇಲ್ಲ. ಓಣಿ ಓಣಿಗೊಂದು ಚರ್ಚುಗಳಾಗಿವೆ. ಯಾಕಂದ್ರ ಬೀದರ್ ಜಿಲ್ಲೆಯೊಳಗೆ ಬಸವ ತತ್ವ ಪ್ರಚಾರಕರು ಅತೀ ಹೆಚ್ಚಿದ್ದಾರೆ,” ಎಂದು ಹೇಳಿದರು.
ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಸವಾದಿ ಶರಣರ ಹಿಂದೂ ಸಮಾವೇಶ”ಗಳು ಏಪ್ರಿಲ್ ತಿಂಗಳಲ್ಲಿ ಬೀದರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ನಾನು ಬೀದರಿಗೆ ಬರ್ತೀನಂತ ತಿಳಿದ ಕೂಡಲೇ ಬಸವ ಭಕ್ತರು ಬೆದರಿ “ಚಟಪಟ ಚಟಪಟ ಒದ್ದಾಡಕ ಶುರು ಮಾಡ್ತಾವು, ” ಎಂದು ಹೇಳಿದರು.
“ಬಿಲದೊಳಗೆ ನೀರು ಬಿದ್ರೆ ಯಾವ ರೀತಿ ಇರವಿ, ಹಾವು ಚಟಪಟ ಒದ್ದಾಡಿಕೊಂಡು ಹೊರಗೆ ಬರುತ್ತವೆ, ಹಾಂಗ ಬಸವ ಕಾರ್ಯಕರ್ತರು ಒದ್ದಾಡುತ್ತಿದ್ದಾರೆ,” ಎಂದು ಹೇಳಿದರು.
“ನಾನು ಅವಕ್ಕ ಉತ್ತರ ಕೊಡೋದಿಲ್ಲ ಝಾಡಿಸಿ ಒಂದು ಒಗದೀರ್ತೀನಿ, ಮುಂದೆ ಒಂದು ತಿಂಗಳು ಅವು ವದರಾಡ್ತವ. ನಾನು ಮತ್ತೆ ಝಾಡಿಸಿ ಒಂದು ಒಗದೀರ್ತೀನಿ, ಹಂದಿಗಳು ಜೋರು ಒದರಾಕ ಹತ್ಯಾವು ಅಂತಂದ್ರ ಅವಕ್ಕ ಹೊಡೆತ ಬೇಶ್ ಬಿದ್ದಾವು ಅಂತ ತಿಳ್ಕೊಬೇಕು,” ಎಂದು ಹೇಳಿದರು.

ನಮ್ಮ ಪಕ್ಕದ ಊರಲ್ಲಿ ಅಧಿಕೃತ ಕಟ್ಟಡದಲ್ಲಿ ಒಂದು ಚರ್ಚೆ ಇದೆ. ಅದರ ಸುತ್ತಮುತ್ತ ಎಂಟು ಮನೆಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ ಅಂತ ಸುದ್ದಿ. ಆ ಚರ್ಚ್ ಮತ್ತು ಎಂಟು ಮನೆಗಳು ಈ ಸ್ವಾಮೀಜಿಯ ಬೆಂಬಲಿಗರ ಮನೆಯೇ ಇವೆ. ಅವರು ಹಿಂದೂ ಧರ್ಮದ ರಕ್ಷಕರು , ಗೊರಕ್ಷಕರು, ರಾಮ್ ಸೇನೆ, ಬಜರಂಗಿ ಅಂತೆಲ್ಲಾ ಗುರುತಿಸಿ ಕೊಳ್ಳುತ್ತಾರೆ. ಇವರ ಪರವಾಗಿ ಬಿಜೆಪಿ ಜನರನ್ನು ಕರೆದುಕೊಂಡು ಇವರೆಲ್ಲಾ ಸೇರಿ ಪ್ರತಿಭಟನೆ ಮೆರವಣಿಗೆ ಮಾಡಿದ್ದರು.
ಆದರೆ ಅವರು ಯಾರು ತಮ್ಮ ಮನೆಯ ಅಕ್ಕ ಪಕ್ಕದ ಈ ಚರ್ಚುಗಳಿಗೆ ಹೋಗುವವರ ಗೋಜಿಗೆ ಹೋಗುವುದಿಲ್ಲ.
ಲಿಂಗಾಯತ ಜನರು ತಮ್ಮ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮ ಬೆಂಬಲಿಸಲಿ ಅನ್ನುವುದು ಈ ಜನರ ಆಶಯ ಆಗಿರಬೇಕು. ಅಲ್ಲಿಯ ಜನರಿಗೆ ಚರ್ಚೆ ಗೆ ಹೋಗಿ ಲಿಂಗಾಯತ ಪ್ರಾಬಲ್ಯ ಕಡಿಮೆ ಆಗಲಿ ಅನ್ನುವುದು ಇವರ ವಿಚಾರ ಆಗಿರಬೇಕು.
ಹಿಂದೂ ಧರ್ಮ ಅಂದುಕೊಳ್ಳಬೇಕು ಇಲ್ಲವೇ ಕ್ರಿಶ್ಚಿಯನ್ ಗೆ ಹೋಗಬೇಕು ಒಟ್ಟಿನಲ್ಲಿ ಲಿಂಗಾಯತ ಧರ್ಮ ಅಶಕ್ತ ಆಗಬೇಕು ಅನ್ನುವುದು ಇವರ ಗುರಿ.
ಈ ಕನೇರಿಗೆ ನಾಲಿಗೆಗೂ ಮೆದುಳಿಗೂ ಕಲೆಕ್ಷನ್ ಕಟ್ ಆಗಿದೆ ತಾನೆ ಹಂದಿ ನಾಯಿ ಹಾಗೆ ಬೊಗಳತಾ ಹೊಗತಾ ಇದೆ ನಾವು ಯಾವುದಕ್ಕೂ ತೆಲೆ ಕೆಡಿಸಿಕೊಳ್ಳಲ್ಲ ಯಾಕೆ ಅಂದರೆ ಇಂಥ ನೂರಾರು ಕನೇರಿ ಅಂಥವರೂ ಬಸವ ತತ್ವಕ್ಕೆ ಅಲ್ಲಾಡಿಸಲೂ ಸಾಧ್ಯವಿಲ್ಲ ಯಾಕೆ ಅಂದರೆ ಬಸವ ತತ್ವದಲ್ಲಿ ಸತ್ಯ ಇದೆ.
ಅಂತಹ್ದ ಕ್ಕೆ ಅಂಥ ಜನರಿದ್ದಾರೆ. ನಾವು ನಮ್ಮ ಅಂತೇ ಇರೋಣ ಅವರು ನೂರು ಸುಳ್ಳು ಹೇಳಿ ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ನಾವು ಲಿಂಗಾಯತ ಆಗಿಯೇ ಇದ್ದೇವೆ ಅವರು ಹಿಂದೂ ಲಿಂಗಾಯ್ತ್ ಆಗಿದ್ದಾರೆ. ನಮ್ಮ ಧರ್ಮ ನಮಗೆ ಅವರ ಧರ್ಮ ಅವ್ರಿಗೆ.