ಬಸವ ಶಕ್ತಿ ಸಮಾವೇಶ: ಕೇಡರ್ ಮಾದರಿ ತರಬೇತಿ ಅಗತ್ಯವಿದೆ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಶರಣತತ್ವ ಚಿಂತಕ ಡಾ. ಜೆ. ಎಸ್. ಪಾಟೀಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

ಬಸವ ಸಂಘಟನೆಗಳಿಗೆ ಮತ್ತು ಬಸವಾನುಯಾಯಿಗಳಿಗೆ ರಾಜಕೀಯ ಪ್ರಜ್ಞೆ ಇಂದಿನ ದಿನಮಾನದಲ್ಲಿ ಅತ್ಯಗತ್ಯ. ಶರಣ ಸಮಾಜಕ್ಕೆ ಮೂಲಭೂತ ಸೌಕರ್ಯಗಳನ್ನು ಪಡೆಯಲು, ಬಸವ ಸಿದ್ಧಾಂತದ ಪ್ರಚಾರ ಹಾಗೂ ರಕ್ಷಣೆಗೆ ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಲು ರಾಜಕೀಯ ಪ್ರಭಾವ ಹಾಗು ಪ್ರಜ್ಞೆ ಅವಶ್ಯವಿದೆ.

ನಮ್ಮ ಧರ್ಮಗುರು ಬಸವಣ್ಣನವರು ಸ್ವತಃ ರಾಜನೀತಿಯಲ್ಲಿ ಪಳಗಿದ್ದರು. ಬಿಜ್ಜಳ ಆಡಳಿತದಲ್ಲಿ ಬಸವಣ್ಣನವರು ತಮ್ಮ ರಾಜಕೀಯ ಜಾಣ್ಮೆ ಬಳಸಿಕೊಂಡು ಲೋಕೋದ್ಧಾರದ ಒಂದು ಹೊಸ ಚಳುವಳಿ ಮತ್ತು ಧರ್ಮವನ್ನು ಕಟ್ಟಿದರು.

ಈಗ ಜೈನರು ತಮ್ಮ ಧರ್ಮವನ್ನು ಕಾಪಾಡಿಕೊಂಡು ಅಲ್ಪಸಂಖ್ಯಾತರ ಸೌಲಭ್ಯವನ್ನು ಪಡೆಯುತ್ತಿರುವುದು ರಾಜಕೀಯ ಪ್ರಜ್ಞೆಯಿಂದ. ಜೈನರಿಗೆ ಲಿಂಗಾಯತರಷ್ಟು ದೊಡ್ಡ ಪ್ರಮಾಣದ ರಾಜಕೀಯ ಪ್ರಭಾವ ಇಲ್ಲದಿದ್ದರೂ ಲಿಂಗಾಯತರಿಗಿಂತ ಹೆಚ್ಚು ರಾಜಕೀಯ ಪ್ರಜ್ಞೆ ಇದೆ. ಈ ರೀತಿಯ ಪ್ರಜ್ಞೆ ಬಂದರೆ ಲಿಂಗಾಯತರು ತಮ್ಮ ಸೈದ್ದಾಂತಿಕ ವೈರಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಖಂಡಿತ. ಈ ಕಾರ್ಯಕ್ಕೆ ವ್ಯವಸ್ಥಿತ ಶಿಸ್ತುಬದ್ಧ ಅಧ್ಯಯನ ಹಾಗು ತರಬೇತಿಯ ಅಗತ್ಯವಿದೆ. ಲಿಂಗಾಯತ ಚಳುವಳಿಯ ಉಗಮ ಮತ್ತು ವಿಕಾಸದ ಉದ್ದಕ್ಕೂ ಇಂತಹ ತರಬೇತಿಗಳು ನಡೆದಿವೆ.

ಬಸಣ್ಣನವರು ಕಲ್ಯಾಣಕ್ಕೆ ಬರುವ ಶರಣರನ್ನು ಮೊದಲು ಬಂದವರ ಓಣಿಯಲ್ಲಿ ಪ್ರಾಥಮಿಕ ಪರಿಕ್ಷೆಗೆ ಒಳಪಡಿಸಿ, ಚಳುವಳಿಯ ಉದ್ದೇಶಗಳನ್ನು ಸ್ಪಷ್ಟಪಡಿಸಿ, ಸೂಕ್ತ ತರಬೇತಿ ನೀಡಿದ ನಂತರವಷ್ಟೆ ಅನುಭವ ಮಂಟಪದ ಸದಸ್ಯತ್ವ ನೀಡುತ್ತಿದ್ದರು.
ಇದನ್ನು ಬಸವಯೋಗಿ ಸಿದ್ಧರಾಮನು ಸೂಚ್ಯವಾಗಿ “ಭವಿಯನ್ನು ಭಕ್ತನಾಗಿಸಿದ ಬಸವಣ್ಣ” ಎಂದಿದ್ದಾರೆ.

ಈಗ ಲಿಂಗಾಯತ ಯುವಕರಿಗೆ ಹಾಗು ಸಂಘಟನೆಗಳಿಗೆ ಕೇಡರ್ ಮಾದರಿಯಲ್ಲಿ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಹಾಗು ರಾಜಕೀಯ ಪ್ರಜ್ಞೆ ಮೂಡಿಸುವ ತರಬೇತಿ ನೀಡಿ ಸಂಘಟಿಸಬೇಕಿದೆ. ಅದಕ್ಕಾಗಿ ಸೂಕ್ತ ಪಠ್ಯಕ್ರಮ ರೂಪಿಸಿ ತರಬೇತಿ ನೀಡಬೇಕಾಗುತ್ತದೆ. ಇಂತಹ ತರಬೇತಿ ಕೆಲವು ಮಠಾಧೀಶರಿಗೂ ಅಗತ್ಯವಿದೆ.

3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.

ಬಸವ ಶಕ್ತಿ ಸಮಾವೇಶ ಶರಣ ಸಮಾಜದಲ್ಲಿ ಸರಿಯಾದ ರಾಜಕೀಯ ಪ್ರಜ್ಞೆ ಮೂಡಿಸುವಂತೆ ರೂಪುಗೊಳ್ಳಬೇಕು. ಅದಕ್ಕಾಗಿ ತಜ್ಞರು ಒಂದೆಡೆ ಸೇರಿ ಮೊದಲು ಪೂರ್ವಭಾವಿ ಚಿಂತನ ಮಂಥನ ಮಾಡಿದರೆ ಒಳ್ಳೆಯದು.

ತರಬೇತಿ ನಂತರ ಬಸವ ಶಕ್ತಿ ಸಮಾವೇಶ ಮಾಡಬಹುದು. ಸೂಕ್ತವಾದ ಸಂಪನ್ಮೂಲ ವ್ಯಕ್ತಿಗಳನ್ನು ಸಜ್ಜುಗೊಳಿಸಿ ನಿರಂತರವಾಗಿ ಅಧ್ಯಯನ ಶಿಬಿರಗಳ ಆಯೋಜನೆಯ ಮೂಲಕ ಮಾತ್ರ ನಾವು ನಿರೀಕ್ಷಿತ ಬದಲಾವಣೆ ತರಲು ಸಾಧ್ಯ.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತೀರಾ?

ಸ್ವತಃ ನಾನು ಭಾಗವಹಿಸುವೆ. ಇತರ ಸಂಘಟನೆಗಳು ಭಾಗವಹಿಸುವಂತೆ ಮನವೊಲಿಸುವೆ.

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ

ಖಂಡಿತ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
4 Comments
  • RSS ಗೆ ಪರ್ಯಾಯ ಸಂಘಟನೆಯಾಗಿ ಬೆಳೆಯ ಬೇಕು ಮುಂದೊಂದು ದಿನ ಎಲ್ಲರೂ RSS ಗೆ ಬದಲು RBD ಎನ್ನ ಬೇಕು.

  • ರಾಷ್ಟ್ರೀಯ ಸ್ವಯಂ ಸೇವಕ ಸಂಘ ೧೨ ನೆಯ ಶತಮಾನದ ಶರಣರ ಗಣಾಚಾರ ಸಂಘಟನೆಯ ಉದ್ದೇಶಗಳನ್ನೇ ಅಳವಡಿಸಿಕೊಂಡು ರಚಿಸಿಕೊಂಡಿರುವುದು

  • RSS ತರ ಸಂಘಟನಾ ಸಾಮರ್ಥ್ಯ, ಶಿಸ್ತು ಇರಲಿ
    ಆದರೆ ಅವರಂಥಾ ಮೂಲಭೂತವಾದ ಬೇಡ.

Leave a Reply

Your email address will not be published. Required fields are marked *