ಬಸವತತ್ವದ ಪರವಾಗಿ ರಾಜಕಾರಣಿಗಳು ಧ್ವನಿಯೆತ್ತಬೇಕು: ದ್ರಾಕ್ಷಾಯಣಿ ಕೋಳಿವಾಡ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹುಬ್ಬಳ್ಳಿ ಮಹಿಳಾ ಘಟಕದ ಕಾರ್ಯದರ್ಶಿ ದ್ರಾಕ್ಷಾಯಣಿ ಕೋಳಿವಾಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  1. ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೆ? ಯಾಕೆ?

ಬಸವ ಸಂಘಟನೆಗಳಿಗೆ ರಾಜಕೀಯ ಮುಖ್ಯವಲ್ಲ. ಆದರೂ ಯಾವುದೇ ಸಂಘಟನೆ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಸದೃಢವಾಗಬೇಕಾದರೆ ರಾಜಕೀಯ ಬೆಂಬಲ ಅವಶ್ಯ.

ಸಧ್ಯದ ಪರಿಸ್ಥಿತಿಯಲ್ಲಿ ಬಸವತತ್ವಕ್ಕೆ ರಾಜಕೀಯ ಬೆಂಬಲ ಸಂಪೂರ್ಣವಾಗಿ ಇಲ್ಲ ಎನ್ನಲು ಆಗುವುದಿಲ್ಲ. ಆದರೆ ನಮಗೆ ಕಳಂಕ ತರುವಂತ ಘಟನೆಗಳು ನಡೆದಾಗ ರಾಜಕಾರಣಿಗಳು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಯುತ್ತಿಲ್ಲ.

ಕೆಲವು ರಾಜಕಾರಣಿಗಳು ತಮಗೆ ಅಗತ್ಯವಿದ್ದಾಗ ಬಸವಣ್ಣನವರನ್ನ ಬೇಕಾದ ರೀತಿಯಲ್ಲಿ ಬಳಿಸಿಕೊಳ್ಳುತ್ತಾರೆ. ಇಂತವರೂ ಬಸವ ತತ್ವಕ್ಕೆ ಕಪ್ಪು ಮಸಿ ಬಳಿಯುವರ ವಿರುದ್ಧ ದ್ವನಿ ಎತ್ತದೇ ಇರುವುದು ಬೇಸರದ ಸಂಗತಿ.

ಇವರಿಗೆಲ್ಲಾ ಬಸವ ತತ್ವದ ಪರವಾಗಿ ಧ್ವನಿ ಎತ್ತಲು ಏನೋ ಹಿಂಜರಿಕೆಯಿರುವಂತೆ ಕಾಣಿಸುತ್ತದೆ. ಬಸವ ಶಕ್ತಿ ಶಿಬಿರ, ಸಮಾವೇಶ ಮಾಡುವುದರಿಂದ ಇದಕ್ಕೊಂದು ಪರಿಹಾರ ಸಿಗಬಹುದು.

  1. ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಖಂಡಿತ ಬೇಕು. ಐವತ್ತು ನೂರು ವರ್ಷಗಳಿಂದ ಬೇರೆ ಬೇರೆ ವಿಚಾರಗಳು ಜನರಲ್ಲಿ ತುಂಬಿ ಬಿಟ್ಟಿದೆ. ಬಹುದೇವೋಪಸನೆ, ವೈದಿಕ ಧರ್ಮ, ಜ್ಯೋತಿಷಿಗಳ ಪ್ರಭಾವದಿಂದ ಮುಕ್ತರಾಗಿ ಲಿಂಗಾಯತ ಧರ್ಮ ಅಂದರೆ ಏನು ಅನ್ನುವುದನ್ನು ಜನರಲ್ಲಿ ಮೊದಲು ತಿಳಿಸಬೇಕು. ಬಸವ ತತ್ವಗಳ ತಿಳಿಸುವ ತರಬೇತಿ ಅಗತ್ಯವಿದೆ.

ಜೊತೆಗೆ ರಾಜಕೀಯ ಪ್ರಜ್ಞೆ ಮೂಡಿಸುವ ಪ್ರಯತ್ನವೂ ನಡೆಯಬೇಕು.

3.ನಿಮ್ಮ ಸಂಘಟನೆಯಿಂದ ಎಷ್ಟು ಜನ ಬಸವ ಶಕ್ತಿ ಶಿಬಿರ, ಸಮಾವೇಶಗಳಲ್ಲಿ ಭಾಗವಹಿಸಬಹುದು?

ನಮ್ಮಲ್ಲಿ ಅನೇಕರು ಬಸವತತ್ವದ ಪ್ರಚಾರ ಅತ್ಯುತ್ತಮವಾಗಿ ಮಾಡುತ್ತಿದ್ದಾರೆ. 250 “ಮನೆಯಲ್ಲಿ ಮಹಮನೆ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಬರುವ ದಿನಗಳಲ್ಲಿ ಇನ್ನೂ ವಿಭಿನ್ನ ಪ್ರಯತ್ನಗಳನ್ನು ಬಸವಪರ ಸಂಘಟನೆಗಳ ಮೂಲಕ ಮಾಡುತ್ತೇವೆ.

ಬಸವ ಶಕ್ತಿ ಶಿಬಿರ, ಸಮಾವೇಶಗಳಲ್ಲಿ ಭಾಗವಹಿಸಲು ನಮಗೆ ಆಸಕ್ತಿಯಿದೆ.

4.ಸಮಾವೇಶ ಸಂಘಟಿಸಲು ನೆರೆವಾಗಲು ನಿಮಗೆ ಆಸಕ್ತಿ ಇದೆಯೇ?

ಇಂತಹ ಕೆಲಸಗಳನ್ನು ಬಸವಪರ ಸಂಘಟನೆಗಳು ಈ ಮೊದಲೇ ಮಾಡಲು ಶುರುಮಾಡಬೇಕಿತ್ತು. ಆದರೆ ಈಗ ಆಗುತ್ತಿದೆ ಸಂತೋಷವಾಗಿ ನೆರವಾಗುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
1 Comment
  • ಸತ್ಯ ಮಾತುಗಳು ಜನಕ್ಕೆ ಮುಟ್ಟೀಸುವ ಕಾರ್ಯಕ್ರಮ ಹೆಚ್ಚಿಸಿ ಜಾಗೃತಿ ಮೂಡಿಸುವ ಜಾತಾ ಮಾಡಬೇಕು ಲಿಂಗಾಯತ ಎದ್ದರೆ ಬಸವ ವಿರೋಧಿ ಮುಸುಕುಧಾರಿಗಳ ಬಾಲಕತ್ತರಿಸಿ ಹಾಕಿ ಜೈ ಬಸವ ಜೈ ಲಿಂಗಾಯತ 💐👏🏻ಶರಣು 🙏🏻🙏🏻

Leave a Reply

Your email address will not be published. Required fields are marked *