ಬೀದರ
ಬಸವ ಸೇವಾ ಪ್ರತಿಷ್ಠಾನ ಬಸವಗಿರಿ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಬುಧವಾರ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತ್ಯೋತ್ಸವ ನಡೆಯಿತು.
ಬಸವಗಿರಿಯ ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕನವರು ದಿವ್ಯ ಸಾನಿಧ್ಯವಹಿಸಿ, ಕಿತ್ತೂರುರಾಣಿ ಚೆನ್ನಮ್ಮನವರ ಸಾಹಸ, ಧೈರ್ಯದ ಜೀವನ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿದೆ. ಕಿತ್ತೂರ ರಾಣಿ ಚೆನ್ನಮ್ಮ ಇಷ್ಟ ಲಿಂಗಯೋಗದ ನಿಷ್ಠರಾಗಿದ್ದರು ಎಂದರು.
ಶರಣೆ ಪ್ರತಿಭಾ ಚಾಮ ಅವರು ಜ್ಯೋತಿ ಬೆಳಗಿ, ಉದ್ಘಾಟಿಸಿ ಮಾತನಾಡುತ್ತ, ರಾಣಿ ಚೆನ್ನಮ್ಮನವರ ದೇಶಭಕ್ತಿ, ಧೈರ್ಯ, ಸಾಹಸ ನಮ್ಮ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ. ಎಂದರು. ಚೆನ್ನಮ್ಮನವರ ಜೀವನ ಚರಿತ್ರೆಯ ಸಾಧನೆಗಳನ್ನು ಹೇಳಿದರು.
ಶರಣೆ ಸುವರ್ಣ ಚಿಮಕೋಡೆ ಕಾರ್ಯಕ್ರಮದ ಅತಿಥಿಯಾಗಿ ಕಿತ್ತೂರು ರಾಣಿ ಚೆನ್ನಮ್ಮನಿಂದ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ಮತ್ತು ಸತ್ಯ ನಿಷ್ಠತೆಯನ್ನು ಕಲಿಯಬೇಕು ಎಂದು ಹೇಳಿದರು.
ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತರಾದ ಶರಣ ಪ್ರಭುಲಿಂಗ ಸಾರಂಗಮಠ ಹಾಗೂ ಶಿಕ್ಷಕ ಶ್ರೀಕಾಂತ ಬಿರಾದಾರ ದಂಪತಿಗಳಿಗೆ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಶರಣೆ ಡಾ. ದೇವಕಿ ನಾಗುರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶರಣ ಸತೀಶ ಮಸೂದೆ ವಚನ ಪಠಣ ನಡೆಸಿಕೊಟ್ಟರು. ಕೆ.ಎಚ್.ಬಿ. ಕಾಲೋನಿಯ ನೀಲಮ್ಮನ ಬಳಗದ ಶರಣೆಯರು ಪ್ರಾರ್ಥನೆ ನಡೆಸಿಕೊಟ್ಟರು.
ಶರಣೆ ರಾಜಶ್ರೀ ಶೀಲವಂತ ಸ್ವಾಗತಿಸಿದರು. ಶರಣೆ ಶೋಭಾ ಜೀರೋಬೆ ನಿರೂಪಣೆ ಮಾಡಿದರು. ಶರಣ, ಶರಣೆಯರು ಉಪಸ್ಥಿತರಿದ್ದರು.