ಮಲ್ಲೂರ
ಲಿಂಗಾಯತ ಧರ್ಮ ನಿಜಾಚರಣೆಯ, “ಅಂತ್ಯ ಸಂಸ್ಕಾರ”ವನ್ನು ಬಸವತತ್ವ ಆಧಾರಿತವಾಗಿ ಹೇಗೆ ನೆರವೇರಿಸಬೇಕು ಎಂಬುದರ ಕುರಿತಾದ ಒಂದು ದಿನದ ಅನುಭಾವ, ಸಂವಾದ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ವಿಶ್ವಗುರು ಬಸವ ಸೋಶಿಯಲ್ ಫೌಂಡೇಶನ್ ಟ್ರಸ್ಟ್, ಮಲ್ಲೂರ, ತಾ. ಸವದತ್ತಿ ಇವರ ಆಶ್ರಯದಲ್ಲಿ, ಮಲ್ಲೂರ ಅನುಭವ ಮಂಟಪದಲ್ಲಿ ಇದೇ ರವಿವಾರ ಅ.27, 2024 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಆಯೋಜಿಸಲಾಗಿದೆ.
ವಚನಮೂರ್ತಿಗಳಾದ ಶಿವಾನಂದ ಅರಭಾವಿ, ಎಂ.ಎಂ. ಸಂಗೊಳ್ಳಿ ಹಾಗೂ ಮಂಜುನಾಥ ಮಡಿವಾಳರ ನಿಜಾಚರಣೆ ನಡೆಸಿಕೊಡಲಿದ್ದಾರೆ.
ಬೈಲಹೊಂಗಲ, ಸವದತ್ತಿ ತಾಲೂಕು ಗ್ರಾಮಗಳ ಹಾಗೂ ಬೆಳಗಾವಿ ಜಿಲ್ಲೆಯ ಸುಮಾರು 60 ಜನ ಶರಣರು ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ.
ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ. ಮಾಹಿತಿಗಾಗಿ ಶರಣರಾದ ಈರಣ್ಣ ಬಾನಿ (9743074620), ರಾಮಣ್ಣ ಸಣ್ಣಮನಿ (9972712798), ಕರವೀರಪ್ಪ ಯಡಾಲ (9380273655) ಇವರನ್ನು ಸಂಪರ್ಕಿಸಬಹುದು.

TAGGED:ನಿಜಾಚರಣೆ