ಯಾವುದೆ ಊರಲ್ಲಿ ಇರಲಿ ಬಸವತತ್ವದ ಕಾರ್ಯಕ್ರಮ ಇದೆ ಎಂದರೆ ಸಾಕು ಕಾರು ಹತ್ತಿ ಹೊರಟು ನಿಲ್ಲುವಂತ ಆ ವ್ಯೆಕ್ತಿತ್ವ ನಿಜಕ್ಕೂ ಒಂದು ಅದ್ಬುತ…
ಗಂಗಾವತಿ
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಕೈ ಹಿಡಿದು ಎತ್ತಿಕೊಂಡ.
ಬದುಕು ತುಂಬಾ ಅನಿಶ್ಚಿತ, ಯಾವಾಗ ಎನಾಗುತ್ತೆ ಎಂದು ತಿಳಿಯಲಾರದಷ್ಟು ಅನಿರಕ್ಷಿತ. ಹುಟ್ಟು ಆಕಸ್ಮೀಕ ಸಾವು ಖಚಿತ ಈ ವಾಸ್ತವ ಗೊತ್ತಿದ್ದರು ಆ ಆಕಸ್ಮೀಕ ಮತ್ತು ಖಚಿತಗಳ ನಡುವಿನ ನಮ್ಮ ಬದುಕು ನಮ್ಮನ್ನು ಈ ಜಗತ್ತಿನಲ್ಲಿ ಇರುವಂತೆ ಮಾಡುತ್ತದೆ , ಅಂತಹ ಯಾವಾಗಲೂ ಇರುವಿನ ಬದುಕು ಬದುಕಿದವರು ಸಿಂಧನೂರಿನ ಶರಣರಾದ ಕುರಕುಂದಿ ವೀರಭದ್ರಪ್ಪನವರು.
ಮೂಲವಾಗಿ ಆರೂಢ ಪರಂಪರೆಯ ಜೊತೆಗೆ ಅವರ ಬದುಕು ಬಸವ ಪಥದ ಕಡೆ ಬಂದಿದ್ದೆ ಒಂದು ವಿಸ್ಮಯ ಮತ್ತು ಆ ಬಸವ ಪಥದ ಬದುಕಿನ ಗಟ್ಟಿ ಕಾಳು ವೀರಭದ್ರಪ್ಪನರು. ಅವರ ಬದುಕು ಬಸವಮಯವಾಗಿತ್ತು ಅತ್ಯಂತ ಗಟ್ಟಿ ಗಣಾಚಾರಿ ಅಂದ್ರೆ ಅಪ್ಪ ವೀರಭದ್ರಪ್ಪನವರು. ಬಸವತತ್ವದ ಪ್ರಸಾರಕ್ಕಾಗಿ ಇಡಿ ತಮ್ಮ ಬದುಕನ್ನು ಸವೆಸಿಕೊಂಡ ಬಸವ ಹೆಬ್ಬಂಡೆ ಅವರು. ಇಂದು ಆ ಹೆಬ್ಬಂಡೆ ಬಸವಣ್ಣನಿಗಾಗಿ ಬದುಕು ಸವೆಸಿ, ಇಂದು ಸಮಾಜದಲ್ಲಿ ತನ್ನ ಅಸ್ಥಿತ್ವವನ್ನು ಬಿಟ್ಟು ಭೌತಿಕವಾಗಿ ಇಂದು ನಮ್ಮನ್ನು ಆಗಲಿದ್ದಾರೆ.
“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ ಎನ್ನುವಂತೆ ಸಮಾಜದಲ್ಲಿನ ಅಜ್ಞಾನವನ್ನು , ಜ್ಞಾನದ ಜ್ಯೋತಿಯಿಂದ ತೊಡೆದು ಹಾಕಿ ಆ ಬಸವ ಪ್ರಕಾಶವನ್ನು ಸುತ್ತಮುತ್ತೆಲ್ಲ ಹರಡುವಂತೆ ಮಾಡಿದರು. ಎಲ್ಲಿಯೇ ಇರಲಿ ಯಾವುದೆ ಊರಲ್ಲಿ ಇರಲಿ ಬಸವತತ್ವದ ಕಾರ್ಯಕ್ರಮ ಇದೆ ಎಂದರೆ ಸಾಕು ಕಾರು ಹತ್ತಿ ಹೊರಟು ನಿಲ್ಲುವಂತ ಆ ವ್ಯೆಕ್ತಿತ್ವ ನಿಜಕ್ಕೂ ಒಂದು ಅದ್ಬುತ, ಆದರೆ ಇಂದು ಆ ಕಾರು ಹತ್ತಿ ಬರುತ್ತಿದ್ದ ವೀರಭದ್ರಪ್ಪ ಮರಳಿ ಬಾರದ ಊರಿಗೆ ಪ್ರಯಾಣ ಬೆಳಸಿ ಮತ್ತೆ ಎಂದೂ ನಮಗೆ ಕಾಣದಂತೆ ಹೊರಟು ಹೋಗಿದ್ದು ಮಾತ್ರ ಬಸವ ಲೋಕಕ್ಕೆ ತುಂಬಲಾಗದ ನಷ್ಟ.
ಸುಮಾರು 35-40 ವರ್ಷಗಳ ಅವರ ಮತ್ತು ನಮ್ಮಪ್ಪನ ಒಡನಾಟವನ್ನು ನೋಡಿಕೊಂಡು ಬೆಳದವರು ನಾವೆಲ್ಲ. ಇದೆ 1 ತಿಂಗಳು ಹಿಂದೆ ಗಂಗಾವತಿಯ ನಮ್ಮ ಮನೆಗೆ ಬಂದು, ಎಂದೂ ಅಷ್ಟಾಗಿ ಮಾತಲಾಡದ ಅವರು ಅಂದು 3 ತಾಸು ಅಪ್ಪನ ಜೊತೆ ಮಾತಾಡಿ, ಹೋಳಿಗೆ ಊಟ ಮಾಡಿ ಹೋದರು. ಅಂದೆ ಅವರು ತುಂಬಾ ಅಸ್ವಸ್ಥರಂತೆ ಕಾಣುತ್ತಿದ್ದರು. ಬದುಕಿನ ವೈಯಕ್ತಿಕ ಜಂಜಾಟಗಳು ಇತ್ತ ತತ್ವವನ್ನು ಗಟ್ಟಿಯಾಗಿ ಬೆಳಸಬೇಕೆಂದ ಉತ್ಕಟವಾದ ಹಂಬಲ ಇವುಗಳ ಮಧ್ಯೆ ತಮ್ಮ ಆರೋಗ್ಯದ ಕಡೆ ಗಮನವೆ ಹರಿಸಲಿಲ್ಲವೇನು ಅಂತ ಅನಿಸುತ್ತಿದೆ. ಆರೋಗ್ಯದಲ್ಲಿ ಎಂತಹ ಹುಷಾರು ಇಲ್ಲಂದ್ರೂ ಬಸವಣ್ಣ ಕಾರ್ಯಕ್ರಮ ಅಂದ್ರೆ ಹೊರಟು ಬಿಡುತ್ತಿದ್ದರು. ಇಂತಹ ಅಪರೂಪದ ಜೀವ ಇಂದು ನಮ್ಮನ್ನು ಅಗಲಿದ್ದು ಮಾತ್ರ ತುಂಬಲಾರದಂತ ನೋವು.
” ಕಟ್ಟಬೇಕು ಮನವ ಮೆಟ್ಟಬೇಕು ಮದವ
ಸುಟ್ಟುರುಹಬೇಕು ಸಪ್ತ ವ್ಯಸನಗಳ
ಆ ತೊಟ್ಟಿಲ ಮುರಿದು ಕಣ್ಣಿಯ ಹರಿದು ಆ ಬಟ್ಟ ಬಯಲಲ್ಲಿ ನಿಲದೆ
ಬಸವ ಪ್ರೀಯ ಕೊಡಲಚೆನ್ನಬಸವಣ್ಣ ” . ಇಂದು ಸಮಾಜದಲ್ಲಿ ಮನ ಕಟ್ಟುವ , ಮದ ಮೆಟ್ಟುವ ಕೆಲಸದಲ್ಲಿ ನಿರತರಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸದೆ ಆ ತೊಟ್ಟಿಲ ಮುರಿದು ಕಣ್ಣಿಯ ಹರಿದು ಆ ಬಟ್ಟ ಬಯಲಲ್ಲಿ ಬಯಲಾಯಿತು ಆ ಚೇತನ. ಆವರ ಬದುಕನ್ನು ನೋಡಿದರೆ
” ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲಿಯಾಯಿಟ್ಟು
ವಿಚಾರವೆಂಬ ಹೊವಾಯಿಟ್ಟು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಕೈಹಿಡಿದು ಎತ್ತಿಕೊಂಡ ” ಎನ್ನುವ ವಚನ ಅವರ ಬದುಕಿನ್ನೆ ಅವಲೋಕಿಸಿದಂತಿದೆ. ” ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಅವರನ್ನು ಕೈಹಿಡಿದು ಇಂದು ಎತ್ತಿಕೊಂಡ ಎಂದು ಅನಿಸುತ್ತಿದೆ.
“ಸತ್ತ ಬಳಿಕ ಲಿಂಗದೊಳಗಾದಹೆನೆಂಬುದು ಎತ್ತಣವಾರ್ತೆ
ಅದು ಹುಸಿ ನೋಡಾ
ಸಾಯುವ ಮುನ್ನ ನಿಜವರಿದು ಸ್ವಯವಾಗಿ ನಡೆಯಬಲ್ಲಡೆ
ಗುಹೇಶ್ವರ ಲಿಂಗವನರಿದ ಶರಣರು ಒಲಿವರು ಕಾಣಾ
ಸಿದ್ದರಾಮಯ್ಯ ” ಎನ್ನುವಂತೆ ಸಾಯುವ ಮುನ್ನವೆ ನಡೆ ನುಡಿ ಒಂದಾಗಿ ಬದುಕಲು ತಮ್ಮನ್ನೆ ತಾವು ಆತ್ಮಾವಲೋಕನ ಮಾಡಿಕೊಳ್ಳುತ್ತಾ, ಲಿಂಗವನರಿಯುತ್ತಾ ನಿಜ ಶರಣರಂತೆ ಬದುಕಿದ ತಮ್ಮ ಬದುಕು ನಮಗೆಲ್ಲಾ ಮಾದರಿ. “ಬಯಲು ಜೀವನ ಬಯಲು ಭಾವನೆ ಬಯಲು ಬಯಲಾಗಿ ಬಯಲಾಯಿತ್ತಯ್ಯಾ” ಎನ್ನುವಂತೆ ಬಯಲೊಳು ಬಯಲಾದ ಚೇತನಕ್ಕೆ ಅನಂತ ಶರಣು ಶರಣಾರ್ಥಿಗಳು.
ಸಹೋದರ ರಾಜಶೇಖರ,
ಜೀವನದ ವಾಸ್ತವ ಸಂದರ್ಭಗಳ ಸಹಿತ ಅಣ್ಣನ ಒಳಹೊರಗುಗಳನ್ನು ತರೆದಿಟ್ಟಿರುವಿ. ಅಣ್ಣನವರು ಬರೀ ಅಣ್ಣನಲ್ಲಾ, ಅವರು ಬಸವಣ್ಣ. ಮನಮುಟ್ಟಿ ಹೃದಯ ತಟ್ಟಿದ ನುಡಿಗಳು. ಶರಣು ಶರಣಾರ್ಥಿಗಳು
🙏🙏💐💐
ನಿಜವಾದ ಬಸವಾನುಯಾಯಿ… ಅಪರಿಮಿತ ಬಸವತತ್ಪ ಪರಿ ಪಾಲಕರು… ಅದ್ಭುತ ಬಸವ ಭೋಧೆ ಪ್ರಚಾರಕರು… ಮರೆಯದ ಮಾಣಿಕ್ಯ. ಬಸವಾದಿ ಶರಣರು ಶ್ರೀಯುತರ ಪವಿತ್ರ ಆತ್ಮಕ್ಕೆ ಪರಮಶಾಂತಿಯನ್ನೀಯಲಿ. ಭಕ್ತಿಪೂರ್ವಕ ಶ್ರದ್ಧಾಂಜಲಿಗಳು. ಶೇಖಣ್ಣ ಕಳಸಾಪೂರಶೆಟ್ರ. ಪರಿವಾರ ಗದಗ.
ಬಸವ ತತ್ವ ಪ್ರಚಾರವಲ್ಲದೆ ಸರಳ ವಿವಾಹಗಳನ್ನು ಸಾಕಷ್ಟು ನೆಡೆಸಿ ಕೊಟ್ಟು ನಮ್ಮ ಸ್ನೇಹಿತರ ಪುತ್ರನ ವಿವಾಹದಲ್ಲಿ ಅದು ಮೈಸೂರುನಗರದಲ್ಲಿ ಪಾಲ್ಗೊಂಡು ಅವರ ಜೊತೆ ನಿರೂಪಣೆ ಮಾಡಿದ್ದು ನಮ್ಮ ಪುಣ್ಯ. ಅಣ್ಣನವರಿಗೆ ಬಸವಾದಿ ಶರಣರು ಅವರ ಆತ್ಮಕ್ಕೆ ಭಕ್ತಿ ಪೂರ್ವಕ ಶ್ರದ್ದಾಂಜಲಿ ಅರ್ಪಣೆ ದೊರೆಯಲಿ ಎಂದು ಬಸವ ಭಕ್ತರೆಲ್ಲರು ಬಯಸುತ್ತೇವೆ. 🙏🙏🙏ಶ್ರೀ ಗುರು ಬಸವ ರಕ್ಷಿಸು ಬಸವ ಶರಣು ಶರಣಾರ್ಥಿಗಳು.
ಶರಣ ವೀರಭದ್ರಪ್ರ ಕುರಕುಂದ ಅಣ್ಣವರ ಲಿಂಗಪ್ರಾಣವು ಪ್ರಾಣಲಿಂಗಗೊಂಡು ಮಹಾಲಿಂಗದೊಳು ಐಕ್ಯಗೊಳ್ಳಲಿ ಎಂದು ಪ್ರಾರ್ಥಿಸಿದ್ದೆವೆ, ಶರಣಾರ್ಥಿ.
ಸಿ.ಹೆಚ್.ನಾರಿನಾಳ ಸರ್ ಅವರ ಜೊತೆಗಿನ ಒಡನಾಟ ಹಾಗೆಯೇ ಬಸವತತ್ವದ ಪರ ಜನಪರ ಕಾಳಜಿಯನ್ನು ಸ್ಮರಿಸಿದ್ದು …ವೀರಭದ್ರಪ್ಪ ಅಣ್ಣನವರ ಕಾರ್ಯ ಯಾವ ಮಠಾಧೀಶರಿಗೂ ಕಡಿಮೆಯಿಲ್ಲದಂತೆ ಬಸವ ತತ್ವದ ಪ್ರಸಾರ ಮಾಡಿದ್ದು ಅವರ ನಮ್ಮ ಒಡನಾಟ ಇನ್ನೂ ನೆನಪು ಮಾತ್ರ ಇಂಥವರು ಇನ್ನೂ ಸಮಗೆ ದೊರಕುವದು ದುರ್ಲಭ