ಅಕ್ಟೋಬರ್ 16 ಬಸವನ ಬಾಗೇವಾಡಿಗೆ ಬರಲಿರುವ ಕನ್ನೇರಿ ಸ್ವಾಮಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬಸವನ ಬಾಗೇವಾಡಿ

ಅಕ್ಟೋಬರ್ 16, 17 ಇಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿ ಬರಲಿದ್ದಾರೆ ಎಂದು ತಿಳಿದು ಬಂದಿದೆ.

ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಪೂಜ್ಯರನ್ನು ನಿಂದಿಸಿ ರಾಜ್ಯಾದ್ಯಂತ ಬಸವ ಭಕ್ತರ ಆಕ್ರೋಶಕ್ಕೆ ಗುರಿಯಾಗಿರುವ ಕನ್ನೇರಿ ಸ್ವಾಮಿ ವಿವಾದ ಭುಗಿಲೆದ್ದ ನಂತರ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಟ್ಟಣದ ಮಹಾರಾಜ ಮಠದ ಸಿದ್ದರಾಮೇಶ್ವರ ಮಹಾರಾಜ ಸ್ವಾಮಿಗಳ 88ನೇ ಸಪ್ತಾಹ ಕಾರ್ಯಕ್ರಮ ಅಕ್ಟೋಬರ್ 16ರ ಸಂಜೆ ಆರಂಭಗೊಂಡು, 17ರ ಸಂಜೆಯವರೆಗೆ ನಡೆಯಲಿದೆ.

ಈ ಸಪ್ತಾಹ ಕಾರ್ಯಕ್ರಮದ ಸಾನಿಧ್ಯವನ್ನು ಕನ್ನೇರಿ ಸ್ವಾಮಿವಹಿಸಲಿದ್ದಾರೆಂದು ಮಠದ ಮುಖ್ಯಸ್ಥರು ಬಸವ ಮೀಡಿಯಾಗೆ ತಿಳಿಸಿದರು.

ಸಿದ್ಧರಾಮೇಶ್ವರ ಸ್ವಾಮೀಜಿ ಗದ್ದುಗೆ ಇರುವ ಈ ಮಠದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು, ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

“ಸಪ್ತಾಹದಲ್ಲಿ ಭಜನೆ, ಭಕ್ತರಿಂದ ಮೇಣಬತ್ತಿ ಮೆರವಣಿಗೆ ನಡೆಯುತ್ತದೆ. ಮಹಾರಾಷ್ಟ್ರದ ಭಕ್ತರು ಹೆಚ್ಚು ಸೇರುತ್ತಾರೆ. ನಾಲ್ಕೈದು ವರ್ಷಗಳ ಈಚೆಗೆ ಕನ್ನೇರಿ ಸ್ವಾಮಿಯ ನಂಟು ಈ ಮಠದೊಂದಿಗೆ ಬೆಳೆದಿದೆ,” ಎಂದು ಮಠದ ಭಕ್ತರೊಬ್ಬರು ಹೇಳಿದರು.

ಕನ್ನೇರಿ ಸ್ವಾಮಿಯ ವಿರುದ್ಧ ಇಲ್ಲಿಯವರೆಗೆ ದಾವಣಗೆರೆ, ಮುದ್ದೇಬಿಹಾಳ, ಬಸವ ಕಲ್ಯಾಣ, ಸಿಂಧನೂರಿನಲ್ಲಿ ಪ್ರತಿಭಟನೆ ನಡೆದಿದೆ.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
6 Comments
  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ says:

    RSS ಸಂಘಟನೆಯರಿಗೆ ನಾಚಿಕೆ ಆಗಬೇಕು ದೇಶ ಪ್ರೇಮ ಮೆರೆವ ಯೋಗ್ಯತೆ ಇಲ್ಲ ಕಾರಣ ದೇಶದ ಸಂವಿಧಾನಕ್ಕೆ ಅವಮಾನ ಆದರೂ ಶತಮಾನದ ಸಂಭ್ರಮದಲ್ಲಿ ಇದೆ ಸ್ಪಷ್ಟ ವಾಗಿ ಕಾಣುತ್ತದೆ ಮೂರ್ಖರು ಎಷ್ಟರ ಮಟ್ಟಿಗೆ ದೇಶಪ್ರೇಮ ಬೆಳೆಸುತ್ತಿದ್ದಾರೆ ಎಂದು 😡

  • ಬಸವಣ್ಣ ಆಗಲಿ ಉಳಿದ ಶರಣರಲ್ಲಿ ಒಬ್ಬರಾದರೂ ನಮ್ಮ ಧರ್ಮ ಹಿಂದೂ ಧರ್ಮ ಅಂತ ಎಲ್ಲಿಯಾದರೂ ಹೇಳಿ ಕೊಂಡಿದ್ದಾರೆ ಏನು?
    ಮಬ್ಬು ಹಾಡಸಿ.
    ಏ ಕಸಬರಿಗೆ , ಬಸವಣ್ಣ ಆಗಲಿ ಉಳಿದ ಶರಣರಲ್ಲಿ ಒಬ್ಬರಾದರೂ ನಮ್ಮ ಧರ್ಮ ವೀರಶೈವ ಧರ್ಮ ಅಂತ ಎಲ್ಲಿಯಾದರೂ ಹೇಳಿ ಕೊಂಡಿದ್ದಾರೆ ಏನು?

    • ಹಿಂದೂದ ವರ್ಣ ಸಿದ್ಧಾಂತ.
      ಬ್ರಾಹ್ಮಣರು :
      ಕ್ಷತ್ರಿಯರು :
      ವೈಶ್ಯರು :
      ಶೂದ್ರರು :
      (ಶೂದ್ರ ಅಂದರೆ ಸೂ.ಮಕ್ಕಳು)

      ನಾನು ಹಿಂದೂ ಎನ್ನುವವರೆ
      ಈ ನಾಲ್ಕರಲ್ಲಿ ನಿಮ್ಮಸ್ಥಾನ ಯಾವುದು ?

    • ಆ ಕತ್ತೆನ ಬಸವನ ಬಾಗೇವಾಡಿಗೆ ಬಂದಾಗ ಮೆಟ್ಟಿಲೇ ಹೊಡಿರಿ

  • 16 ನೇ ತಾರೀಖು ಬಾಗೇವಾಡಿ ಚಲೋ , ಮೆಟ್ಟಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳೋಣ. ಚರ್ಚೆಗೆ ಸಿದ್ದರಾಗೋಣ

Leave a Reply

Your email address will not be published. Required fields are marked *