ಕಲಬುರಗಿ
ಎಸ್.ಆರ್.ಪಾಟೀಲ್ ಫೌಂಡೇಷನ್ ಹಾಗೂ ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್ ನೀಡುವ ‘ಕರ್ಮಯೋಗಿ’ ಪ್ರಶಸ್ತಿಗೆ ಬೀದರ್ ಜಿಲ್ಲೆ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಆಯ್ಕೆಯಾಗಿದ್ದಾರೆ.
ಉದ್ಯಮಿ ಎಸ್.ಎಸ್.ಪಾಟೀಲರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ನೀಡುತ್ತಿರುವ ಪ್ರಶಸ್ತಿಗೆ ಶ್ರೀಗಳು ಸೇರಿದಂತೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಬಸವಲಿಂಗ ಪಟ್ಟದ್ದೇವರು (ಶಿಕ್ಷಣ) ಉದ್ಯಮಿ ಎನ್.ಕೆ.ಮಾಲು (ವಾಣಿಜ್ಯ) ಚಿತ್ರಕಲಾವಿದ ವಿ.ಜಿ.ಅಂದಾನಿ (ಕಲಾಕ್ಷೇತ್ರ) ಸಾಹಿತಿ ಅಲ್ಲಮಪ್ರಭು ಬೆಟದೂರ (ಸಾಹಿತ್ಯ) ಹಾಗೂ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ (ಸಮಾಜ ಸೇವೆ) ಅವರು ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ಶುಕ್ರವಾರ ಕಲಬುರಗಿಯ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ತಲಾ ₹ 51 ಸಾವಿರ, ಫಲಕ ಒಳಗೊಂಡಿರುತ್ತದೆ.