ದಾವಣಗೆರೆ
ಮಾನ್ಯ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿ ವಚನ ತೆಗೆದುಕೊಂಡಿರುವ ನಿಮಗೆ ಅತ್ಯಂತ ಪ್ರೀತಿಯ ಅಭಿನಂದನೆಗಳು.
ನೀವು ಮುಖ್ಯಮಂತ್ರಿ ಆಗುತ್ತಿರುವುದು ನಿಮ್ಮಲ್ಲಿ ಇರುವ ಪಕ್ಷ ನಿಷ್ಠೆ ಹೋರಾಟ ಮನೋಭಾವ ಮತ್ತು ನಿಮ್ಮ ಶ್ರಮದಿಂದಲೇ ವಿನಃ ಯಾವುದೇ ಜ್ಯೋತಿಷ್ಯಿಗಳ ಪ್ರಭಾವದಿಂದ ಅಲ್ಲ ಎಂದು ಅಂದುಕೊಂಡಿದ್ದೇನೆ.
ಆದರೆ ನಿಮ್ಮ ನಂಬಿಕೆ ನಿಮ್ಮದು ಅದರ ಬಗ್ಗೆ ನಮ್ಮ ತಕರಾರು ಏನೂ ಇಲ್ಲ.
ನಾವು ನಿಮಗೆ ಪತ್ರ ಬರೆಯುತ್ತಿರುವ ಮುಖ್ಯ ಉದ್ದೇಶ ಏನೆಂದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಲು ಲಿಂಗಾಯತ ಧರ್ಮದ ವಿಚಾರದಲ್ಲಿ ತಲೆ ಹಾಕಿದ್ದು ಎಂದು ನೀವು ತಿಳಿದು ಅದಕ್ಕಾಗಿ ಲಿಂಗಾಯತ ಧರ್ಮದ ವಿರೋಧಿಗಳಾದ ರಂಭಾಪುರಿ ಶ್ರೀಗಳ ಬಳಿ ಕ್ಷಮೆ ಕೇಳಿದ್ದೀರಿ.
ಒಂದು ರಾಜಕೀಯ ಪಕ್ಷದ ನಾಯಕನಾಗಿ ಎಲ್ಲಾ ಸಮುದಾಯಗಳ ಮತ ಬೇಕು ಎಂದು ಬಯಸುವುದು ತಪ್ಪಲ್ಲ.
ಆದರೆ ವಾಸ್ತವವಾಗಿ ಲಿಂಗಾಯತ ಧರ್ಮದ ವಿಷಯ ಕಾಂಗ್ರೆಸ್ ಸೋಲಿಗೆ ಕಾರಣ ಅಲ್ಲವೇ ಅಲ್ಲ.
ಬದಲಿಗೆ ಲಿಂಗಾಯತ ಧರ್ಮದ ವಿಷಯದಿಂದಲೇ ಬಹಳಷ್ಟು ಲಿಂಗಾಯತರು ಬಿಜೆಪಿ ಬಿಟ್ಟು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂಬ ಸತ್ಯ ನಿಮಗೆ ಗೊತ್ತಿರಲಿ.
ಅಪ್ಪಟ ಬಿಜೆಪಿ ಬೆಂಬಲಿಗನಾಗಿದ್ದ ನನ್ನಂಥಹ ಲಕ್ಷಾಂತರ ಜನ ಇದೇ ಕಾರಣಕ್ಕೆ ಕಾಂಗ್ರೆಸ್ಸಿಗೆ ಮತ ಹಾಕಿದ್ದ ಕಾರಣ ನಿಮಗೆ 136 ಸ್ಥಾನ ಪಡೆದಿದೆ.
ರಂಭಾಪುರಿ ಶ್ರೀಗಳ ಬೆಂಬಲಿಗರು ವೀರಶೈವ ಜನರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ನಿಮ್ಮ ಅರಿವಿಗೆ ಬಂದರೆ ಸಾಕು.
ಆದರೆ ಬಸವಣ್ಣನವರ ಕಟ್ಟಾ ಅನುಯಾಯಿಗಳು ಬಿಜೆಪಿಯ ಸೈದ್ಧಾಂತಿಕ ಹುಳುಕುಗಳನ್ನು ತಿಳಿದು ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಚೆನ್ನಾಗಿ ಬಿಜೆಪಿಯನ್ನು ತಾತ್ವಿಕವಾಗಿ ವಿರೋಧಿಸುವ ಶಕ್ತಿ ಹೊಂದಿದ್ದಾರೆ ಎನ್ನುವುದೂ ತಿಳಿದಿರಲಿ.
ಇಷ್ಟೆಲ್ಲಾ ವಿಷಯ ಏಕೆ ಹೇಳುವೆ ಎಂದರೆ ನೀವು ಬಸವಣ್ಣನವರ ವಿರೋಧಿ ರಂಭಾಪುರಿ ಶ್ರೀಗಳ ಶಿಷ್ಯ ಎಂದು ಹಲವರು ಬಾರಿ ಹೇಳಿಕೊಂಡಿದ್ದೀರಿ.
ನೀವು ಯಾರ ಶಿಷ್ಯ ಬೇಕಾದರೂ ಆಗಬಹುದು ಅದು ನಿಮ್ಮ ಸ್ವಾತಂತ್ರ್ಯ. ಆದರೆ ಬಸವಾದಿ ಶರಣರ ಅನುಯಾಯಿಗಳ ಹೋರಾಟವನ್ನು ಯಾವುದೇ ಕಾರಣಕ್ಕೂ ವಿರೋಧಿಸುವ ಕೆಲಸ ಮಾಡಬಾರದು.
ಬಸವ ಭಕ್ತರು ಯಾವುದೇ ಪಕ್ಷಕ್ಕೆ ಅಂಟಿಕೊಂಡವರಲ್ಲ. ಬಸವ ಭಕ್ತರು ತಿರುಗಿ ಬಿದ್ದರೆ 2018 ರ ಫಲಿತಾಂಶ ಮರುಕಳಿಸಬಹುದು ಎಂಬುದು ಗಮನದಲ್ಲಿರಲಿ.
ಸಿದ್ದರಾಮಯ್ಯ ಅವರಂತೆಯೇ ನೀವೂ ಸಹ ಬಸವ ಭಕ್ತರಿಗೆ ಸಹಕಾರ ಮುಂದುವರೆದರೆ ಬಸವ ಭಕ್ತರ ಸಹಕಾರ ನಿಮ್ಮ ಪಕ್ಷಕ್ಕೆ ಮುಂದುವರೆಯುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಮುಖ್ಯಮಂತ್ರಿ ಆಗಿ ನಿಮ್ಮಿಂದ ಉತ್ತಮ ಕಾರ್ಯಗಳು ನಡೆಯಲಿ ಎಂದು ಆಶಿಸುತ್ತಾ,
ಶರಣು ಶರಣಾರ್ಥಿಗಳೊಂದಿಗೆ
ವಿಶ್ವೇಶ್ವರಯ್ಯ ಬಿಎಂ
ಹೆಮ್ಮನಬೇತೂರು,
ದಾವಣಗೆರೆ ತಾಲ್ಲೂಕು

ನಿಮ್ಮ ಅಭಿಪ್ರಾಯವನ್ನು ನಾವು ಬೆಂಬಲಿಸುತ್ತೇನೆ ಶರಣು ಶರಣಾರ್ಥಿ
His Holiness Shree Swamiji very nice letter you have submitted, it is totally true. Every Govt respected Lord Basava principles.It is only Lingayat caste respects all the castes and religions.
Thank you so much Swamiji.
With best regards.
Sincerely,
If the wants win next time elections he has to take into confidence the followers of vishwa Guru Basavanna. It is left to him.
ಅತಿಯಾದ ನಂಬಿಕೆ ಮತ್ತು ಭರವಸೆಗಳು ಯಶಸ್ಸಿನ ಹೆಜ್ಜೆಗೆ ತೊಡಕು ಎಂಬುದನ್ನು ಶರಣರಾದ ವಿಶ್ವೇಶ್ವರಯ್ಯನವರು ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ.
ನಿಮ್ಮ ಅಭಿಪ್ರಾಯಕ್ಕೆ ನಮ್ಮ ಸಹಮತ ಇದೆ 🙏
ಪತ್ರ ಚೆನ್ನಾಗಿ ಬರೆದಿದ್ದೀರಿ. ಅವರು ಮುಖ್ಯ ಮಂತ್ರಿ ಆಗಲು ಲಿಂಗಾಯತರ ಮತಗಳು ಕಾರಣ , ಚೆನ್ನಾಗಿ ಅರ್ಥ ಮಾಡಿಕೊಳ್ಳಲಿ.
ಇದು ಸರಿಯಾಗಿ ಹೇಳಿದ್ದಿರಿ. ಮಾತುಗಳು dkc ಮುಂದೆ ಹೇಳಿ ತಿಳಿಸುವ ಕಾರ್ಯ ನಮ್ಮದಾಗಬೇಕು ಧನ್ಯವಾದಗಳು 💐🙏🏻ಶರಣು 👏🏻👏🏻
This message should reach loud and clear to the CM. Basavanna has given us the identity, dignity and laid the path of social harmony.
ನಿಮ್ಮ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಶರಣರೇ
I support your statement sharanare.
ನೀವು ಹೇಳಿರುವದು ಅಕ್ಷರಶಹ ಸರಿಯಾಗಿದೆ ಮುಖ್ಯ ಮಂತ್ರಿಗಳು ತಮ್ಮ ವೈಯಕ್ತಿಕ ನಂಬಿಕೆ ಏನೇ ಇರಲಿ ಲಿಂಗಾಯತರನ್ನು ಮತ್ತು ಲಿಂಗಾಯತ ಹೋರಾಟವನ್ನು ವಿರೋಧಿಸಿದರೆ,2018 ರ ಫಲಿತಾಂಶ ಮರುಕಳಿಸುವದು. ಶರಣರೆ ನಿಮ್ಮ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ.
ನಿಮಗೇ ನಮ್ಮ ಬೆಂಬಲ ಇರುವುದು.
ಶರಣ ಮನಸ್ಸುಗಳಿಗೆ ಸ್ಪಂದಿಸುವ ಪ್ರತಿ ರಾಜಕಾರಣಿಗಳನ್ನು ಲಿಂಗಾಯತ ಸಮಾಜ ಬೆಂಬಲಿಸುತ್ತದೆ ಎಂಬ ತಮ್ಮ ಅಭಿಪ್ರಾಯ ಸೂಕ್ತವಾಗಿದೆ ಶರಣು ಶರಣಾರ್ಥಿ