ರಾಷ್ಟ್ರೀಯ ವೀರ ಗಣಾಚಾರ ಸಂಘದಿಂದ ಬಸವ ಕಾರ್ಯಕರ್ತರಿಗೆ ಯಶಸ್ವಿ ಶಿಬಿರ

ಸಂಘಟನೆ, ನಾಯಕತ್ವ ಹಾಗೂ ಹೋರಾಟದ ಬಗ್ಗೆ ಎರಡು ದಿನಗಳ ತರಬೇತಿ

ಧಾರವಾಡ

ನಗರದಲ್ಲಿ ರಾಷ್ಟ್ರೀಯ ವೀರ ಗಣಾಚಾರ ಸಂಘ (ಆರ್.ವಿ.ಎಸ್) ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಬಸವ ಕಾರ್ಯಕರ್ತರ ತರಬೇತಿ ಶಿಬಿರವು ಯಶಸ್ವಿಯಾಗಿ ಜರುಗಿತು.

ನಗರದ ಸಿದ್ಧರಾಮೇಶ್ವರ ಮಾರ್ಗದರ್ಶಿ ಬಿಎಡ್ ಕಾಲೇಜಲ್ಲಿ ನಡೆದ ಶಿಬಿರದಲ್ಲಿ ನಿರೀಕ್ಷಿಸಿದ್ದ 150 ಕಾರ್ಯಕರ್ತರ ಬದಲು 170 ಜನರು ಭಾಗವಹಿಸಿದರು.

ಆರ್.ವಿ.ಎಸ್ ಕರ್ನಾಟಕದ ವಿವಿಧ ಬಸವಪರ ಸಂಘಟನೆಗಳ ಕಾರ್ಯಕರ್ತರಿಗೆ ಸಂಘಟಿತ ರೀತಿಯಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಾರ್ಯಕರ್ತರಿಗೆ ಚಿಂತನೆ, ಸಂಘಟನೆ, ನಾಯಕತ್ವ ಹಾಗೂ ಹೋರಾಟದ ವಿವಿಧ ಆಯಾಮಗಳ ಕುರಿತು ಸಮಗ್ರ ತರಬೇತಿ ನೀಡಲಾಯಿತು.

ಪೂಜ್ಯ ಡಾ. ಸಿದ್ಧರಾಮ ಸ್ವಾಮೀಜಿ ಆಸಕ್ತ ವಿದ್ಯಾರ್ಥಿಯಂತೆ ಸಂಪೂರ್ಣ ಅವಧಿ ಕುಳಿತು ಆಲಿಸಿದ್ದು ವಿಶೇಷ ಆಕರ್ಷಣೆಯಾಯಿತು.

ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಪೂಜ್ಯ ಡಾ. ಸಿದ್ಧರಾಮ ಸ್ವಾಮೀಜಿ ಆಸಕ್ತ ವಿದ್ಯಾರ್ಥಿಯಂತೆ ಸಂಪೂರ್ಣ ಅವಧಿ ಕುಳಿತು ತರಬೇತಿ ಆಲಿಸಿದ್ದು ಶಿಬಿರದ ವಿಶೇಷ ಆಕರ್ಷಣೆಯಾಯಿತು.

ಒಬ್ಬ ಹಿರಿಯ ಮಠಾಧೀಶರು ಸಾಮಾನ್ಯ ಶಿಬಿರಾರ್ಥಿಯಂತೆ ಭಾಗವಹಿಸಿ ಕಲಿಕೆಯ ಮನೋಭಾವ ತೋರಿಸಿದ್ದು ಎಲ್ಲರಿಗೂ ಮತ್ತಷ್ಟು ಹುರುಪು ತಂದಿತು.

ಶಿಬಿರದ ನೇತ್ರತ್ವವನ್ನು ಆಳಂದದ ಪೂಜ್ಯ ಕೋರಣೇಶ್ವರ ಶ್ರೀಗಳು, ವಿರಕ್ತಮಠದ ಪೂಜ್ಯ ಸಂಗನಬಸವಾನಂದ ಸ್ವಾಮಿಗಳು ನಿಲಂಗಾ, ಪೂಜ್ಯ ಶಿವಾನಂದ ಸ್ವಾಮಿಗಳು ಸಂಚಾಲಕರು, ಅನುಭವ ಮಂಟಪ ಬಸವಕಲ್ಯಾಣ, ಶರಣತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ವಹಿಸಿದ್ದರು.

ರಾಷ್ಟ್ರೀಯ ಸ್ವಾಭಿಮಾನಿ ಸಂಘದ ಅಧ್ಯಕ್ಷರಾದ ಡಿ. ಆರ್. ಓಹೋಳ ಅವರು ಕಾರ್ಯಕರ್ತರಿಗೆ ಸಂಘಟನಾ ಕೌಶಲ್ಯ, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.

ತರಬೇತಿ ಶಿಬಿರವು ಕಾರ್ಯಕರ್ತರಲ್ಲಿ ಹೊಸ ಚೈತನ್ಯ, ಆತ್ಮವಿಶ್ವಾಸ ಮತ್ತು ಸಂಘಟನಾ ಸಾಮರ್ಥ್ಯವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು ಎಂದು ಹಲವಾರು ಶಿಬಿರಾರ್ಥಿಗಳು ಅಭಿಪ್ರಾಯ ಪಟ್ಟರು.

ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕುಗಳಲ್ಲಿ ಇಂತಹ ಇನ್ನಷ್ಟು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪದೊಂದಿಗೆ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರದ ಯಶಸ್ಸಿಗೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಗದುಗಿನ ಪೂಜ್ಯರು ಹಾಗೂ ನಾಗನೂರು ಸ್ವಾಮೀಜಿ ಅತ್ಯಂತ ಕಾಳಜಿಯಿಂದ ಆಯೋಜಿಸಿದ್ದರು. ಅವರ ಸಹಕಾರಕ್ಕೆ ಆರ್.ವಿ.ಎಸ್ ವತಿಯಿಂದ ಅನಂತ ಶರಣು-ಶರಣಾರ್ಥಿಗಳನ್ನು ಸಲ್ಲಿಸಲಾಯಿತು.

ಧಾರವಾಡ, ಹುಬ್ಬಳ್ಳಿ, ಚಾಮರಾಜನಗರ, ಮೈಸೂರು, ಬೆಂಗಳೂರು, ಬಸವ ಕಲ್ಯಾಣ, ಕೊಲ್ಹಾಪುರ, ಸೊಲ್ಲಾಪುರ, ದಾವಣಗೆರೆ, ರಾಯಚೂರು, ಕಲಬುರ್ಗಿ, ತುಮಕೂರು, ಕೊಪ್ಪಳ, ಹೊಸಪೇಟೆ, ದೇವದುರ್ಗ, ಯಾದಗೀರ, ಕಲ್ಯಾಣ ಮಹಾರಾಷ್ಟ್ರ, ಹೈದರಾಬಾದ, ಲಾತೂರ, ಅಲೂರು, ಸಂಡೂರು, ಪುಣೆ, ಸಾಂಗ್ಲಿ, ಗಂಗಾವತಿ ಹೀಗೆ 25 ಸ್ಥಳಗಳಿಂದ ಕಾರ್ಯಕರ್ತರು ಆಗಮಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
2 Comments
  • ಸ್ವಾಮೀಜಿಗಳು ಶಿಬಿರದಲ್ಲಿ ಮಕ್ಕಳಂತೆ ಕುಳಿತು ತರಬೇತಿಯಲ್ಲಿ ಭಾಗಿಗಳಾಗಿದ್ದು ತುಂಬಾ ಸಂತೋಷ

  • ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿದ ಸಕಲರಿಗೂ ಧನ್ಯವಾದಗಳು. ಇಂತಹ ಶಿಬಿರಗಳನ್ನು ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಯೋಜಿಸಿದರೆ ಗಣಾಚಾರಿ ಆಚಾರ ಬಲಗೊಳ್ಳುತ್ತದೆ.

Leave a Reply

Your email address will not be published. Required fields are marked *