ಶರಣ ವಿಜಯೋತ್ಸವ: ರಾಷ್ಟ್ರಕ್ಕೆ ಸೈನಿಕರ ಸೇವೆಯ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಹುತಾತ್ಮ ದಿನಾಚರಣೆಯ 2ನೇ ದಿನ.

ಬಸವಕಲ್ಯಾಣ :

೧೨ನೇ ಶತಮಾನದಲ್ಲಿ ಬಸವಾದಿ ಶರಣ ಮಡಿವಾಳ ಮಾಚಿದೇವ ಮಲ್ಲಿಬೊಮ್ಮನವರು ವಚನ ಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ್ದಾರೆ.

ಸೈನಿಕರು ನಮ್ಮ ದೇಶದ ಹೆಮ್ಮೆಯ ಪ್ರತೀಕ ಅವರು ತಮ್ಮ ಜೀವದ ಅಮೂಲ್ಯ ವರ್ಷಗಳನ್ನು ದೇಶದ ರಕ್ಷಣೆಗಾಗಿ ಸಮರ್ಪಿಸಿದ್ದಾರೆ. ಅವರ ಅನುಭವ ಯುವ ಜನತೆಗೆ ಸ್ಪೂರ್ತಿಯಾಗಬೇಕು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಹೇಳಿದರು.

ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಎರಡನೇ ದಿನ ಮಾಚಿದೇವ ಮಲ್ಲಿಬೊಮ್ಮ ವೀರಸೈನಿಕರ ವೇದಿಕೆ ಶರಣ ದರ್ಶನ ರಾಷ್ಟ್ರೀಯತ್ವದ ಮೂಲ ಚಿಂತನಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು.

ಸೇನೆಯಲ್ಲಿ ಅವರು ಕಲಿತ ಶಿಸ್ತು, ಸಮಯ ಪಾಲನೆ, ದೇಶಪ್ರೇಮ ಮತ್ತು ಕರ್ತವ್ಯ ನಿಷ್ಠೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸೈನಿಕರನ್ನು ಗೌರವಿಸುವುದು ಎಂದರೆ ದೇಶದ ಸೇವೆಯನ್ನು ಗೌರವಿಸಿದಂತೆ ವಿಶ್ವದಲ್ಲಿರುವ ಎಲ್ಲರು ನಮ್ಮವರೆಂದು ವಿಶ್ವ ಕುಟುಂಬಿಯಾಗಿ ಬಾಳಬೇಕು ಎಂದು ಅಕ್ಕ ನುಡಿದರು.

ಬಸವಕಲ್ಯಾಣ ಕ್ಷೇತ್ರ ಸಮಿತಿಯ ಸಂಯೋಜಕ ಡಾ. ಬಸವರಾಜ ಸೇಡಂ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ದೇಶದ ಪ್ರಶ್ನೆ ಬಂದಾಗ ನಾವೆಲ್ಲರೂ ಒಂದಾಗಿರಬೇಕು. ದೇಶದಲ್ಲಿ ಲಾಲಬಹಾದ್ದೂರ್ ಶಾಸ್ತ್ರೀ ಚೀನಾ ವಿರುದ್ಧ ಯುದ್ಧ ಗೆದ್ದರು, ಇಂದಿರಾಗಾಂಧಿ ಪಾಕಿಸ್ತಾನ ಒಡೆದು ಎರಡು ಭಾಗ ಮಾಡಿದರು, ವಾಜಪೇಯಿ ಕಾರ್ಗಿಲ್ ಯುದ್ಧ ಗೆದ್ದರು. ಆತ್ಮವಿಶ್ವಾಸದಿಂದ ಕೂಡಿದ ದೇಶಭಕ್ತರನ್ನು ದೇಶದ ಗಡಿ ರಕ್ಷಣೆ ಮಾಡುವಂಥವರನ್ನು ತಯಾರು ಮಾಡಬೇಕು ಎಂದರು. ಸತ್ಯಕ್ಕಾಗಿ ಬದುಕಿದ ಶರಣರ ತತ್ವಗಳನ್ನು ನಾವೆಲ್ಲ ರೂಢಿಸಿಕೊಳ್ಳಬೇಕು ಎಂದರು.

ಹೈದ್ರಬಾದನ ನಿವೃತ್ತ ಎಸಿಪಿ ಕಮಾಂಡೋ ವಿನೋದಕುಮಾರ ಭಗವಂತರಾವ ಮಾತನಾಡಿ, ಸೈನಿಕರು ತಮ್ಮ ಸೇವಾವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಕುಟುಂಬದಿಂದ ದೂರವಿದ್ದು ದೇಶಕ್ಕಾಗಿ ದುಡಿಯುವುದು ಅವರ ಜೀವನದ ಭಾಗವಾಗಿದೆ. ಕೆಟ್ಟದಕ್ಕೆ ಯಾರು ಪ್ರೋತ್ಸಾಹಿಸಬಾರದು. ಆಂತರಿಕ ವಿರೋಧಿಗಳಿಂದ ಜಾಗೃತರಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಶಿಸ್ತು, ದೇಶಭಕ್ತಿ, ತ್ಯಾಗ, ಧೈರ್ಯ ಮತ್ತು ಕರ್ತವ್ಯ ನಿಷ್ಠೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಲಬುರಗಿಯ ಮಾಜಿಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ, ಮಾಜಿ ಸೈನಿಕ ರವೀಂದ್ರಕುಮಾರ ಗುತ್ತೆದಾರ ಹಾಗೂ ಮಾಜಿ ಸೈನಿಕರ ಸಂಘದ ಬೀದರ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.

ಭಾಲ್ಕಿಯ ಉದ್ಯಮಿ ಚನ್ನಬಸವಣ್ಣ ಬಳತೆ ಬಸವಕಲ್ಯಾಣ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಸೂರ್ಯಕಾಂತ ಅಧ್ಯಕ್ಷ ಮಲ್ಲಪ್ಪ ಭಾಗ್ಯವಾಡಿ, ಹುಮನಾಬಾದ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ವೆಂಕಟರಾವ ತೆಲಂಗ, ಅಧ್ಯಕ್ಷ ಅಮೃತರಾವ ರಾಜೇಶ್ವರ, ಭಾಲ್ಕಿ ಮಾಜಿ ಸೈನಿಕರ ಗೌರವಾಧ್ಯಕ್ಷ ಶಿವಲಿಂಗಯ್ಯಸ್ವಾಮಿ, ಅಧ್ಯಕ್ಷ ಜಗನ್ನಾಥ ಡಿಗ್ಗಿ ಮಾಜಿ ಸೈನಿಕರಾದ ಅನಿಲಕುಮಾರ ರಾಜಕಾರಣೆ, ಸುರೇಶ ಮಾಶೆಟ್ಟಿ ಇತರರಿದ್ದರು.

ಸಿದ್ದಣ್ಣಾ ಮರಪಳ್ಳೆ, ಲಿಂಗರಾಜ ಶಾಶೆಟ್ಟಿ, ಸುಜಾತಾ ರಾಯವಾಡೆ ಉಪಸ್ಥಿತರಿದ್ದರು. ರಾಧಾ ಯವಳೆ ಹಾಗೂ ವಿವೇಕ ವಸ್ತ್ರದ ಅವರಿಂದ ದೇಶಭಕ್ತಿ ಗೀತೆಗಳು ಮೂಡಿ ಬಂದವು. ಸಂತೋಷ ಮಡಿವಾಳ ಸ್ವಾಗತಿಸಿದರೆ, ಸಂಗಮೇಶ ತೋಗರಖೇಡೆ ನಿರೂಪಿಸಿದರು. ಮುಕ್ತಾಯಕ್ಕ ಮಹಾಶಕ್ತಿ ಕೂಟದವರು ಗುರುಪೂಜೆ ನೇರವೇರಿಸಿದರು.

ಮುಂಜಾನೆ ೮ ಗಂಟೆಗೆ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ೧೧ ಗಂಟೆಗೆ ಗಣ ನಾಯಕ, ನಾಯಕಿಯರ ಸಮಾವೇಶ ನಡೆಯಿತು.

೧೪ ರಂದು ಮುಂಜಾನೆ ೧೧ ಗಂಟೆಗೆ ಯುವ ವೈಜ್ಞಾನಿಕ ಸಮಾವೇಶ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಸಾನಿಧ್ಯ, ಪಶುವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ ಡಾ. ಸಿ. ವೀರಣ್ಣಾ ಉದ್ಘಾಟಿಸುವರು. ಇಸ್ರೋದ ಡಾ. ರಾಮನಗೌಡ  ನಾಡಗೌಡ ಹಾಗೂ ಡಿಆರ್‌ಡಿಓ ವಿಜ್ಞಾನಿ ಡಾ.ತೇಜಸ್ವಿ ಕೆ. ಅನುಭಾವ ನೀಡಿ ಸಂವಾದ ನಡೆಸುವವರು. ಇದೇ ಸಂದರ್ಭದಲ್ಲಿ ಇವರಿಗೆ ಶರಣ ವಿಜ್ಞಾನಿ ಪುರಸ್ಕಾರ ಪ್ರದಾನ ಮಾಡಲಾಗುವುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *