ಕಲಬುರಗಿಯಲ್ಲಿ ಲಿಂಗಾಯತ ಧರ್ಮದ ಅನುಸಾರ ಸೀಮಂತ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ನಗರದ ಕರುಣೇಶ್ವರ ಕಾಲೊನಿಯ ಬಸವನಿಷ್ಠೆಯ ಕಲ್ಲಾ ಪರಿವಾರದವರ ಮನೆಯಲ್ಲಿ ಶರಣೆ ಶ್ರೀದೇವಿ ಶರಣಬಸವ ಕಲ್ಲಾರವರ ಮಗನಾದ ಡಾ. ನಾಗರಾಜ ಕಲ್ಲಾ ಹಾಗೂ ಸೊಸೆ ಡಾ. ನಂದಿನಿ ಕಲ್ಲಾ ಶರಣ ದಂಪತಿಗಳ ಸೀಮಂತ ಕಾರ್ಯಕ್ರಮವು ಲಿಂಗಾಯತ ಧರ್ಮ ನಿಜಾಚರಣೆಯಂತೆ ಮಂಗಳವಾರ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಶರಣ ದಂಪತಿಗಳು ಬಸವಧ್ವಜಾರೋಹಣ ಮಾಡಿದರು. ವಚನ ಪ್ರಾರ್ಥನೆಯನ್ನು ಕಲಬುರ್ಗಿ ಬಸವ ಕೇಂದ್ರದ ಸೋಮಣ್ಣ ನಡಕಟ್ಟಿ ಹಾಗೂ ಸದಸ್ಯರು ನಡೆಸಿಕೊಟ್ಟರು.

ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಮಾಡಿ, ದಂಪತಿಗಳಿಂದ ವಚನಗಳನ್ನು ಹೇಳಿಸಲಾಯಿತು. ಭಾವೋದಕ ಸಿದ್ಧತೆ ಮಾಡಿಕೊಂಡು ದಂಪತಿಗೆ ವಿಭೂತಿ ಧಾರಣೆ ಮಾಡಲಾಯಿತು. ನಂತರ ಶರಣೆ ನಂದಿನಿ ಅವರ ಗರ್ಭಕ್ಕೆ ಲಿಂಗಸಂಸ್ಕಾರಕ್ರಿಯೆ ಮಾಡಲಾಯಿತು.

ನಂತರ ದಂಪತಿಗಳನ್ನು ಕೂಡ್ರಿಸಿ ಎಲ್ಲರಿಂದ ಪುಷ್ಪವೃಷ್ಠಿ ಮಾಡಿಸಲಾಯಿತು. ಕಾರ್ಯಕ್ರಮಕ್ಕೆ ಬಂದವರೆಲ್ಲ ದಂಪತಿಗಳಿಗೆ ಶುಭಹಾರೈಸಿದರು.

ವಚನಮೂರ್ತಿಯಾಗಿ ಜೇವರ್ಗಿ ಬಸವ ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ರಾಜೇಶ್ವರಿ ಪಾಟೀಲ ಕಾರ್ಯ ನಿರ್ವಹಿಸಿದರು. ಕ್ರಿಯಾಮೂರ್ತಿಯಾಗಿ ಶರಣೆ ಅನುಸೂಯ ನಡುಕಟ್ಟಿ ಇದ್ದರು.

ಆರಂಭದಲ್ಲಿ ಸರ್ವರನ್ನು ಜೇವರ್ಗಿ ಬಸವ ಕೇಂದ್ರದ ಅಧ್ಯಕ್ಷ ಶರಣ ಶರಣಬಸವ ಕಲ್ಲಾ ಅವರು ಸ್ವಾಗತಿಸಿದರು. ರಾಜೇಶ್ವರಿ ಪಾಟೀಲ ಅವರು ಮಂಗಲಗೀತೆ ಹಾಡಿದರು.

ಕಲ್ಲಾ ಪರಿವಾರದವರು, ಬಸವಾಭಿಮಾನಿಗಳು, ಆಪ್ತಮಿತ್ರರು ಉಪಸ್ಥಿತರಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share This Article
2 Comments
  • ಬಸವ ಧರ್ಮನಿಷ್ಠ ಕಲ್ಲಾ ಕುಟುಂಬದವರು ತಮ್ಮ ಸೊಸೆಯಾದ ಶ್ರೀಮತಿ ಡಾ. ನಂದಿನಿ ನಾಗರಾಜ ಕಲ್ಲಾ ಅವರಿಗೆ ಶರಣ ಧರ್ಮದ ಅನುಸಾರ ವಚನಗಳ ಪಠಣದ ಮೂಲಕ ಸೀಮಂತ ಕಾರ್ಯಕ್ರಮ ನೆರವೇರಿಸಿರುವುದು ತುಂಬಾ ಶ್ಲಾಘನೀಯ ಮತ್ತು ಎಲ್ಲಾ ಬಸವ ಧರ್ಮೀಯರು ಅನುಕರಣೀಯವಾಗಿದೆ.
    ಶರಣ ಸಂತಾನದ ವೃದ್ಧಿ ಕಾಲದ ಕರೆಯಾಗಿದೆ. ಶರಣರ ಜನನಕ್ಕೆ ಸಂತೋಷದಿಂದ ಕಾಯೋಣ.

Leave a Reply

Your email address will not be published. Required fields are marked *