ಅಕ್ಕ ಮಹಾದೇವಿಯವರ ಮೇಲೆ ಮಾತನಾಡಿರುವ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರ ಸಂದರ್ಶನದ ತುಣುಕು ವೈರಲ್ ಆಗಿದೆ. ಅಕ್ಕನವರನ್ನು ಪರಿಚಯ ಮಾಡಿಕೊಡುವ ಭರದಲ್ಲಿ ಅವರ ಕಾಲವನ್ನು 17ನೇ ಶತಮಾನಕ್ಕೆ ಬದಲಿಸಿದ್ದಾರೆ.
ಕಂಗನಾ ಅವರಿಗೆ ಅಕ್ಕನವರ ಬಗ್ಗೆ ಸ್ಪಷ್ಟವಾದ ಅರಿವು ಇರುವ ಹಾಗೆ ಕಾಣುವುದಿಲ್ಲ. ಆದರೂ ಅಕ್ಕನವರ ಬಗ್ಗೆ ಆಗಾಗ್ಗೆ ಮಾತನಾಡುವ ಅಭ್ಯಾಸವಿದೆ.