ಧಾರವಾಡ
ಲಿಂಗಾಯತ ಧರ್ಮ ಮತ್ತು ಮಠಾಧೀಶರನ್ನು ಕೆಟ್ಟದಾಗಿ ನಿಂದಿಸಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯನ್ನು ಧಾರವಾಡ ಜಿಲ್ಲೆಗೆ ಬರದಂತೆ ತಡೆಯಲು ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲೆಯ ಬಸವಪರ ಸಂಘಟನೆಗಳು ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದವು.

ಕೋರ್ಟ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಘೊಷಣೆ ಕೂಗುತ್ತ ಬಸವಾಭಿಮಾನಿಗಳು ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಅಲ್ಲಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ರಾಷ್ಟ್ರೀಯ ಬಸವದಳ, ಲಿಂಗಾಯತ ಏಕತಾ ಸಮಿತಿ, ವಚನ ಜ್ಯೋತಿ ಪ್ರತಿಷ್ಠಾನ ಮತ್ತಿತರ ಸಂಘಟನೆಗಳ ಪ್ರಮುಖರು, ಸದಸ್ಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಪೂಜ್ಯ ಜ್ಞಾನೇಶ್ವರಿ ಮಾತಾಜಿ, ಎಂ.ವಿ. ಗೊಂಗಡಶೆಟ್ಟಿ, ಬಸವಂತಪ್ಪ ತೋಟದ, ಸಿದ್ದರಾಮ ನಡಕಟ್ಟಿ, ಶಿವಾನಂದ ಶೆಟ್ಟೆನ್ನವರ, ಶಂಕರ ಕೋಳಿವಾಡ, ಸಿ.ಜಿ. ಪಾಟೀಲ, ಸವಿತಾ ನಡಕಟ್ಟಿ, ದಾಕ್ಷಾಯಿಣಿ ಕೋಳಿವಾಡ, ಬಿ.ಎಲ್. ಲಿಂಗಶೆಟ್ರ, ಎಸ್.ವಿ. ಪಟ್ಟಣಶೆಟ್ಟಿ, ಅನಿಲ ಅಂಗಡಿ, ನಾಗರಾಜ ಪಟ್ಟಣಶೆಟ್ಟಿ, ಪ್ರೊ.ಎಸ್.ಎಸ್. ನರೇಗಲ್ಲ, ಬಸಯ್ಯ ಗಣಾಚಾರಿ, ಮನೋಹರ ಜಮಖಂಡಿ, ಬಸವರಾಜ ಹುಲ್ಲೋಳಿ, ಗೌರಮ್ಮ ಬಲೋಗಿ ಮತ್ತಿತರು ಹೋರಾಟದ ನೇತೃತ್ವ ವಹಿಸಿದ್ದರು.