ಕನ್ನೇರಿ ಸ್ವಾಮಿಯ ವಿರುದ್ಧ ಪ್ರತಿಯೊಬ್ಬ ಬಸವಭಕ್ತರು ಧ್ವನಿಯೆತ್ತಲಿ

ಬಸವ ಕಲ್ಯಾಣ

ಬಸವಣ್ಣನವರನ್ನೇ ತಾಲಿಬಾನಿ ಸಂಸ್ಕೃತಿಗೆ ಹೋಲಿಸಿರುವ ಕನ್ನೇರಿ ಸ್ವಾಮಿಯ ವಿರುದ್ಧ ಪ್ರತಿಯೊಬ್ಬ ಬಸವಭಕ್ತರು ಮತ್ತು ಲಿಂಗಾಯತ ಮಠಾಧೀಶರು ಧ್ವನಿ ಎತ್ತಬೇಕು. ಅವರ ನಡೆಯನ್ನು ಖಂಡಿಸಬೇಕು, ಎಲ್ಲಿಯೂ ವೇದಿಕೆ ಹಂಚಕೊಳ್ಳಬಾರದು.

ಸುಪ್ರೀಂಕೋರ್ಟ್ ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿದ್ದರೂ ಕನ್ನೇರಿ ಸ್ವಾಮಿ ಉದ್ಧೇಶಪೂರ್ವಕವಾಗಿಯೇ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವುದರ ಹಿಂದೆ ಬಹುದೊಡ್ಡ ಹುನ್ನಾರವಿದೆ.

ಬಸವಾನುಯಾಯಿಗಳನ್ನು ಬೆದರಿಸಿ ಬಸವತತ್ವದ ಪ್ರಚಾರದ ಕೆಲಸ ನಡೆಯದಂತೆ ನೋಡಿಕೊಳ್ಳುವುದು ಇವರ ಉದ್ದೇಶ.

ಬಸವತತ್ವವನ್ನು ಮತ್ತು ಬಸವತತ್ವದವರನ್ನು ತಾಲಿಬಾನಿಗಳಿಗೆ ಹೋಲಿಸಿರುವುದು ಅಕ್ಷಮ್ಯವಾಗಿದೆ. ಸಮಾಜದಲ್ಲಿ ಗೊಂದಲ ಮೂಡಿಸಿ ಶಾಂತಿ ಕದಡುವರು ತಾಲಿಬಾನಿಗಳು. ಪದೇ ಪದೇ ಇಂತಹ ಹೇಳಿಕೆ ನೀಡಿ ಸಮಾಜದಲ್ಲಿ ಕ್ಷೋಭೆಯನ್ನುಂಟು ಮಾಡುತ್ತಿರುವ ಕನ್ನೇರಿ ಸ್ವಾಮಿಯೇ ಉಗ್ರ ತಾಲಿಬಾನಿ.

ಕೋಮು ಗಲಭೆ ಪ್ರಚೋದಿಸುತ್ತಿರುವ ಇವರನ್ನು ತಕ್ಷಣ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು.

ಕನ್ನೇರಿ ಸ್ವಾಮಿ ಬಸವ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ತಮ್ಮ ಮಠದಲ್ಲಿ ಸನಾತನಿ ಧರ್ಮದ ಮೂಸಿಯಂ ಮಾಡಿ, ಭಕ್ತರಿಂದ ಟಿಕೆಟ್ ಪಡೆದು ಕೊಟ್ಯಾಂತರ ರೂಪಾಯಿ ಸಂಗ್ರಹಿಸಿ ಮಠವನ್ನು ವ್ಯಾಪಾರಿಕರಣ ಮಾಡಿರುವುದು ಯಾವ ಸಂಸ್ಕೃತಿ?

ಬಸವತತ್ವದ ಮಠವನ್ನು ವೈದಿಕರಣಗೊಳಿಸಿ, ಬಸವತತ್ವ ಪಾಲಕರನ್ನು ನಿಂದಿಸುತ್ತಾ ತಿರುಗುವ, ಬಸವಾದಿ ಶರಣರ ಒಂದು ಭಾವಚಿತ್ರವೂ ಹಾಕದಿರುವುದು ಯಾವ ಸಂಸ್ಕೃತಿ?

ಕಾಲು ಕೆದರಿ ಜಗಳಕ್ಕೆ ಕಾಯುತ್ತಿರುವ ಕನ್ನೇರಿ ಸ್ವಾಮಿ ಎಚ್ಚರಿಕೆಯಿಂದಿರಬೇಕು. ಬಸವತತ್ವದವರು ಬೀದಿಗೆ ಬಂದು ಪಾಠ ಕಲಿಸುವ ಸಮಯ ಬಂದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
8 Comments
  • ಆತನ ಸಂಸ್ಕೃತಿ ಹಾಗಿದೆ. ಆತನಿಗೆ ಇದೇ ಸಮಯದಲ್ಲಿ ಅದೇ ಸಂಸ್ಕೃತಿಯಿಂದ ಪಾಠ ಕಲಿಸಬೇಕು

    • ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ,ಕಾವಿಗೆ ಕಳಂಕ ತೋರುತ್ತಿದ್ದಾನೆ.ಸ್ವಾಮಿ ಎಂದು ಕರೆಯಿಸಿಕೊಳ್ಳಲು ಲಾಯ್ಕ ಇಲ್ಲದ ,ಕಾಡು ಪ್ರಾಣಿಗಳ ಗುಂಪಿಗೆ ಸೇರುವ ಭಂಡತನವ ಹೊಂಬನಿಗೆ ಗಣಾಚಾರಿ ಗಣದಿಂದಲೇ ಮಡಿವಾಳ ಮಾಚಿದೇವರ ಶೈಲಿಯಲ್ಲಿ ಉತ್ತರಿಸಬೇಕಾದ ಅವಶ್ಯಕತೆ ಇದೆ.ಬಸವಣನವರನ್ನೇ ತಾಲಿಬಾನಿಗಳಿಗೆ ಹೋಲಿಸುತ್ತಿರುವ ಇವನ ವಿರುದ್ಧ ಬಸವ ಅನುಯಾಯಿಗಳು ಹೋರಾಟ ಮಾಡುವುದು ಅನಿವಾರ್ಯ,

  • * ಎನಿಸು ಕಾಲ ಕಲ್ಲು ನೀರೊಳಗಿದ್ದರೇನು ನೆನೆದು ಮೃದುವಾಗಬಲ್ಲುದೆ..
    * ಹಂದನವಣೆರಿದ ಸೊಣಗ..
    * ಕಲ್ಲ ಹೊಯ್ದು ಕಿಡಿಯ ಕೊಂಬಂತೆ..

  • This person and people making him speak this way are trying to provoke communities… These repeated attempts to provoke looks like planned decision to keep attacking basava followers and swamijis

  • ಸನಾತನಿಗಳ ಗುಲಾಮನಾದ ಆತ ಇನ್ನೇನು ತಾನೆ ಮಾಡಿಯಾನು.
    ವೈದಿಕ ಅಸಹ್ಯಗಳನ್ನ ಧಿಕ್ಕರಿಸಿ ಶುರುವಾದ ಬಸವಣ್ಣನವರ ಲಿಂಗಾಯತ ಧರ್ಮವನ್ನ ಈ ಸೂಳಿಮಗ ಲೇವಡಿ ಮಾಡ್ತಾನೆ ಎಂದರೆ ಇವ ಎಂತಹ ಅವಿವೇಕಿ ಎಂದು ಸುಲಭವಾಗಿ ನಿರ್ಧರಿಸಬಹುದು.

  • ಸಾಮಾನ್ಯವಾಗಿ.. ಸಂಘಟನೆಯ ಅಧಿಕಾರಗಳು ಮತ್ತು ರಾಜಕಾರಣಿಗಳು ಮತ್ತು ಮಠಾಧಿಪತಿಗಳು
    ಬೀದಿಗೆ ಇಳಿದರೆ ಮಾತ್ರ ಆ ಸ್ವಾಮೀಜಿಗೆ ಪಾಠ ಕಲಿಸಬಹುದು.

  • ಬಸವಣ್ಣ ಇನ್ನು ಸ್ವಲ್ಪ ದಿನದಲ್ಲಿ ಕಣ್ಣೆರಿ ಸ್ವಾಮಿಗೆ ತಲೆ ಕೆಡುವಂತೆ ಮಾಡುತ್ತಾನೆ

  • ಈ ಮೂಢನಿಗೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮ್ಮೆ ಹೂಡಿ ದಂಡಕಟ್ಟುವಂತೆ ಮಾಡಿದಾಗ ಬಾಯಿಗೆ ತಾನೇ ಬೀಗಹಾಕಿಕೊಳ್ಳುತ್ತಾನೆ.

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.