‘ಕುಂಕುಮ ಆದ್ರೂ ಹಾಕೊಳ್ಳಿ, ಬಟ್ಟೆ ಬಿಚ್ಚಿಯಾದ್ರು ಅಡ್ಡಾಡ್ರಿ…ಇನ್ನೊಬ್ರಗ್ ಯಾಕೆ ಬೈತಿಯೋ’‘
ಇಳಕಲ್ಲ
ಲಿಂಗಾಯತ ಪೂಜ್ಯರನ್ನು ಬಸವ ತಾಲಿಬಾನಿಗಳು ಎಂದು ನಿಂದಿಸಿರುವ ಕನ್ನೇರಿ ಸ್ವಾಮಿಯನ್ನು ಶಾಸಕ ವಿಜಯಾನಂದ ಏಕವಚನದಲ್ಲಿಯೇ ತರಾಟೆ ತೆಗೆದುಕೊಂಡಿದ್ದಾರೆ .
ಬಾಗಲಕೋಟೆಯಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಉಚ್ಚಾಟಿತ ಬಿಜೆಪಿ ಮುಖಂಡ ಈಶ್ವರಪ್ಪ ಕನ್ನೇರಿ ಸ್ವಾಮಿಯ ಪದಬಳಕೆಯನ್ನು ಸಮರ್ಥಿಸಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಇಳಕಲ್ಲ ಪಟ್ಟಣದಲ್ಲಿ ಮಾತನಾಡಿದ ಕಾಶಪ್ಪನವರ “ಕನ್ನೇರಿ ಸ್ವಾಮಿ ಒಂದಿನ ಬಡಿಸಿಕೊಳ್ತಾರೆ ಅಷ್ಟೇ. ಒಂದು ಧರ್ಮದ ಬಗ್ಗೆ, ಯಾರ ಬಗ್ಗೆಯಾದ್ರೂ ಕೀಳಾಗಿ ಮಾತಾಡಿದ್ರೆ ಜನ ಬಿಡ್ತಾರಾ, ಬಡಿಯೋರು ಇದ್ದಾರೆ,” ಎಂದು ವಾಗ್ಧಾಳಿ ನಡೆಸಿದರು.
“ಇವನೇನ್ರಿ ಬಾಯಿಗೆ ಬಂದಂಗ ಮಾತಾಡೋದು, ಕಾವಿ ಹಾಕಿದ ಇವರ ಬಾಯಾಗ ಬರುವ ಮಾತೇನ್ರಿ ಅವು. ಕಾವಿ ಬಿಚ್ಚಿ ಖಾದಿ ಹಾಕೊಂಡು ಬರೋಕೆ ಹೇಳಿ ಅವನಿಗೆ ಮಾತಾಡ್ತಿವಿ ಆವಾಗ,” ಎಂದು ಎಚ್ಚರಿಕೆ ನೀಡಿದರು.
ಕನ್ನೇರಿ ಸ್ವಾಮಿಯನ್ನು ನೇರವಾಗಿ ಉದ್ದೇಶಿಸಿ ಮಾತನಾಡುತ್ತ “ಜನರ ಹಾದಿ ತಪ್ಪಿಸುತ್ತಿಲ್ವಾ ನೀನು? ರಾಷ್ಟ್ರದಲ್ಲಿ ಬೆಂಕಿ ಹಚ್ಚುವ ಕೆಲಸಾ ಮಾಡ್ತಿಲ್ವಾ ನೀನು? ತಪ್ಪಲ್ವಾ ಇದು.
…ಕುಂಕುಮ ಆದ್ರೂ ಹಾಕೊಳ್ಳಿ, ನಾಮ ಆದ್ರೂ ಹಾಕೊಳ್ಳಿ, ತಲೆ ಆದ್ರೂ ಬೋಳಿಸ್ಕೊಳ್ಳಿ, ಬಟ್ಟೆ ಬಿಚ್ಚಿಯಾದ್ರು ಅಡ್ಡಾಡ್ರಿ, ನಿಮಗ್ಯಾರ ಬ್ಯಾಡ ಅಂತಾರ ಇನ್ನೊಬ್ರಗ್ ಯಾಕೆ ಬೈತಿಯೋ,” ಎಂದು ಕೇಳಿದರು.
ಕಾವಿ ಹಾಕ್ಕೊಂಡು ಬಾಯಿಗೆ ಬಂದಂಗ ಮಾತಾಡಿದ್ರೆ ಯಾರೂ ಕೇಳಂಗಿಲ್ವಾ ಈ ಕನ್ನೇರಿ ಸ್ವಾಮಿಯನ್ನ… ಅವನಿಗೆ ನಾನೇ ಶ್ರೇಷ್ಠ, ನಾನೇ ದೇವ್ರು ಅನ್ನುವ ಮದ ಏರಿದೆ…ಕನ್ನೇರಿ ಸ್ವಾಮಿ ಆಕಾಶದಿಂದ ಉದುರಿ ಬಂದಿದ್ದಾನಾ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶ ಬೇಡ ಅಂದ್ರೆ ಬೇರೆ ದೇಶ ಕಟ್ಟಿಕೊಂಡು ಹೋಗಿ…ಸನಾತನ ಧರ್ಮಕ್ಕ ಹೋಗ್ರಿ, ಮನುಸ್ಮೃತಿಗಾದ್ರೂ ಹೋಗ್ರಿ ಇಲ್ಲಾ ಯಾವುದರ ಧರ್ಮ ಕಟ್ಕೊಂಡ ಹೋಗಿ, ಪ್ರತ್ಯೇಕ ಮಾಡಿಕೊಳ್ಳಿ, ಎಂದು ಕಾಶಪ್ಪನವರ ಹೇಳಿದರು.

ಶರಣು,
ಶಾಸಕರು ಸರಿಯಾಗಿ ಹೇಳಿದ್ದಾರೆ, ಯಾರಿಗೂ ನಿಂದನೆ ಮಾಡಬಾರದು..
ಮಾನ್ಯ ಶಾಸಕರು ಸರಿಯಾಗಿ ಉಗಿದ್ದಿದ್ದಾರೆ .ಹೀಗೆ ಎಲ್ಲಾ ಬಸವಪರ ರಾಜಕೀಯ ನಾಯಕರು, ಸ್ವಾಮಿಗಳಿಗೆ ಹೀಗೆ ಝಾಡಿಸುತ್ತಾ ಇರಬೇಕು.
ಒಂದು ಸಾರಿ ಇಲಕಲಗೆ ಬಂದು ಈ ರೀತಿ ಭಾಷಣ ಮಾಡಲಿ
ಆವಾಗ ಗೊತ್ತಾಗುತೈತೆ, ಕನೇರಿಗೆ.
ಬಸವತತ್ವ ಸಿದ್ದಾಂತದ ಲಾಭ ಮತ್ತು ಹಾನಿಬಗ್ಗೆ. ಬಸವಧರ್ಮ ಎಲ್ಲರಿಗೂ ಲೆಸನ್ನೆಬಯಸುವ, ಲೋಕದ ಜನರೆಲ್ಲಾ ಆ ಪರಮಾತ್ಮನ ಮಕ್ಕಳೆಂಬ ಅರಿವಿರಲಿ ಎಂಬುದು ಆಶಯ. ಧರ್ಮದ ಅನುಕೂಲ ಮತ್ತು ಅನುನುಕೂಲದ ಬಗ್ಗೆ ಏನಾದ್ರೂ ಹೇಳಿದ್ದಾರೆ ಉತ್ತಮ. ಆದರೆ ವೈಕ್ತಿಕವಾಗಿ ಟೀಕೆ ಟಿಪ್ಪಣಿಗಳನ್ನು ಮಾಡುವದು ಅದೂ ಸಭೆಗಳಲ್ಲಿ, ಬಹಳ ವಿಷಾದನೀಯ. ಒಬ್ಬ ತ್ಯಾಗಿ, ಸನ್ಯಾಸಿಗಳು ಯಾವದೇ ಕಾರಣಕ್ಕೂ ಕೂಡ ಬಸವ ತತ್ವ ದ ಅನುಯಾಯಿಗಳ ಬಗ್ಗೆ, ಅವಹೇಳನ ಸಲ್ಲದು.
ಶರಣು ಶರಣಾರ್ಥಿ, ಎಲ್ಲರಿಗೂ ಶುಭವಾಗಲಿ.
ಎಲ್ಲಾ ಲಿಂಗಾಯತ ಶಾಸಕರು ಕನ್ನೇರಿಯ ಅಸಂವಿಧಾನಿಕ ಮಾತುಗಳನ್ನು ಖಂಡಿಸಬೇಕು ಈ ನಿಟ್ಟಿನಲ್ಲಿ ಶಾಸಕರಾದ ಕಾಶಪ್ಪನವರು ಕನ್ನೇರಿಯ ಹೇಳಿಕೆ ಖಂಡಿಸಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.