ಲಿಂಗಾಯತ ಸ್ವತಂತ್ರ ಧರ್ಮಕ್ಕೆ ತೀವ್ರ ಹೋರಾಟ ಅಗತ್ಯ: ಡಾ.ಬಸವಲಿಂಗ ಪಟ್ಟದ್ದೇವರು

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಸ್ವತಂತ್ರ ಧರ್ಮದ ಹೋರಾಟವನ್ನು ತೀವ್ರಗೊಳಿಸಲಾಗುವುದು ಅನುಭವ ಮಂಟಪದ ಅಧ್ಯಕ್ಷ ರಾದ ಡಾ.ಬಸವಲಿಂಗ ಪಟ್ಟದ್ದೇವರು ಒತ್ತಾಯಿಸಿದರು.

ಬಸವಕಲ್ಯಾಣದಲ್ಲಿ ಬಸವ ಧರ್ಮಪೀಠ ಹಮ್ಮಿಕೊಂಡಿರುವ 23ನೇ ಕಲ್ಯಾಣಪರ್ವದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಲಿಂಗಾಯತ ಸ್ವತಂತ್ರ ಧರ್ಮ ಎಂದು ಬ್ರಿಟೀಷರ ಕಾಲದಿಂದಲೂ ಅನೇಕ ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಸ್ವತಂತ್ರ ಧರ್ಮಕ್ಕಾಗಿ ಲಿಂಗಾಯತ ಸಮಾಜದ ಜನರು ಜಾಗೃತರಾಗಿ ತೀವ್ರ ಹೋರಾಟವನ್ನು ಮಾಡಬೇಕಾಗಿದೆ

ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಮಾಡಬೇಕೆಂಬುದು ಬಹುಜನರ ಬೇಡಿಕೆಯಾಗಿದ್ದು, ಈ ಕುರಿತು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಡಾ.ಗಂಗಾ ಮಾತಾಜಿ ಸಾನಿಧ್ಯ ವಹಿಸಿದ್ದರು. ಭಾಲ್ಕಿ ಹಿರೇಮಠದ ಗುರು ಬಸವಪಟ್ಟದೇವರು, ಗುರುದ್ವಾರ ಪ್ರಬಂಧಕ ಕಮಿಟಿಯ ವ್ಯವಸ್ಥಾಪಕ ಸರ್ದಾರ್ ದರ್ಬಾರಾ ಸಿಂಗ್, ಶಿವರಾಜ ನರಶೆಟ್ಟಿ, ಕುಶಾಲ ಪಾಟೀಲ್ ಗಾದಗಿ, ಮಡಿವಾಳಪ್ಪ ಮಂಗಲಗಿ, ರವಿ ಕೊಳಕುರ ಹಾಗೂ ರಾಜಶ್ರೀ ಖೂಬಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಸವ ತತ್ವಕ್ಕಾಗಿ ಸಮಾಜಕ್ಕಾಗಿ ವಿವಿಧ ರಂಗದಲ್ಲಿ ಶ್ರಮಿಸಿರುವ ವಚನ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಅಲ್ಲಮ ಪ್ರಭು ನಾವದಗೇರೆ ಹಾಗೂ ಬಸವ ತತ್ವ ಪ್ರಸಾರ ಸಂಸ್ಥೆಯ ಅಧ್ಯಕ್ಷ ಶಂಕ್ರಣ್ಣ ಕೊಳಕೂರ ದಂಪತಿಗಳನ್ನು ಸನ್ಮಾನಿಸಲಾಯಿತು. ನವಲಿಂಗ ಪಾಟೀಲ್ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *