ಗುಳೇದಗುಡ್ಡ
ಸಂಶೋಧಕ ಎಂ.ಎಂ.ಕಲಬುರ್ಗಿಯವರು ಹುತಾತ್ಮರಾಗಿ 11 ವರ್ಷ ಕಳೆದಿದೆ. ಹುತಾತ್ಮವಾದ ದಿನವನ್ನು ನಾಡಿನಾದ್ಯಂತ ವಿದ್ವಾಂಸರು, ಸಾಹಿತಿಗಳು ಹಾಗೂ ಶಿಷ್ಯಂದಿರ ಬಳಗವು ಅವರ ವೈಚಾರಿಕ ವಿದ್ವತ್ತನ್ನು ಗೌರವಿಸುವ, ಸ್ಮರಿಸುವ ಕಾರ್ಯಕ್ರಮವನ್ನು ನಾಳೆ ಅ.29 ಸಾಯಂಕಾಲ 5 ಗಂಟೆಗೆ ತೊಗಲುಗೊಂಬೆಯ ವೇದಿಕೆ ಮತ್ತು ಬಸವ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.
ಅವರು ಗುರುವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ ಎಂ.ಎಂ.ಕಲಬುರ್ಗಿ ಅವರ ಸಾಧನೆ ಸಿದ್ಧಿಯು, ವೈಚಾರಿಕ ಶಿಖರವೆನಿಸಿದೆ. ಇಂತಹ ಸಂಶೋಧಕರ ಸ್ಮರಣಾರ್ಥ ದಿನವನ್ನು ಆಚರಿಸುವುದೆಂದರೆ, ನಾಡಿನಲ್ಲಿ ಬೌದ್ಧಿಕ ವಾರಸುದಾರಿಕೆಯನ್ನು ಬೆಳೆಸಿ, ಪೋಷಿಸಿದಂತೆ. ಈ ಕಾರ್ಯಕ್ರಮಕ್ಕೆ ಮೋಡಿ ಲಿಪಿ ತಜ್ಞ ಸಂಗಮೇಶ ಕಲ್ಯಾಣಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಬಸವ ಕೇಂದ್ರದ ಹಿರಿಯರಾದ ಪ್ರೊ ಸಿದ್ದಲಿಂಗಪ್ಪ ಬರಗುಂಡಿ ವಹಿಸುವರು.
ಸಾಹಿತಿ ಸಿ.ಎಂ.ಜೋಶಿ, ಕಾನಿಪ ಅಧ್ಯಕ್ಷ ಬಸವರಾಜ ಯಂಡಿಗೇರಿ, ಮಲ್ಲಿಕಾರ್ಜುನ ರಾಜನಾಳ, ಮುರುಗೇಶ ಶೇಖಾ, ರಾಚಣ್ಣ ಕೆರೂರ ಜಯಶ್ರೀ ಬರಗುಂಡಿ ಮತ್ತು ಬಸವ ಕೇಂದ್ರ ಬಳಗ ದವರು ಉಪಸ್ಥಿತರಿರುವರೆಂದು ತಿಳಿಸಿದ್ದಾರೆ.
