ಮುದ್ದೇಬಿಹಾಳ
ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧಿಪತಿಗಳ ವಿರುದ್ಧ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ಅಶ್ಲೀಲವಾಗಿ ನಿಂದಿಸಿರುವುದರನ್ನು ಖಂಡಿಸಿ ಬಸವಪರ ಸಂಘಟನೆಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಮೆರವಣಿಗೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ತಹಶೀಲ್ದಾರ ಕಾರ್ಯಾಲಯವನ್ನು ತಲುಪಿ, ಸ್ವಾಮಿ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲು ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.

ಬಸವಪರ ಸಂಘಟನೆಗಳ ಮುಖಂಡರಾದ ಬಸವರಾಜ ನಾಲತವಾಡ, ಬಸವರಾಜ ಕೋರಿ, ಎನ್. ಆರ್. ಮೊಕಾಶಿ, ಎಸ್. ಎ. ಬೇವಿನಗಿಡ, ಎಸ್. ಆರ್. ಗೌಡರ, ಅರವಿಂದ ಕೊಪ್ಪ, ರಾಜಶೇಖರ ಹತ್ತರಸಂಗ, ವೀರೇಶ ಇಲ್ಕಲ್ಲ, ಮಹಾದೇವಿ ನಾಲತ್ವಾಡ ಮೊದಲಾದವರು ಮಾತನಾಡಿ, ಸ್ವಾಮಿಯ ಹೇಳಿಕೆಯನ್ನು ಬಲವಾಗಿ ಖಂಡಿಸಿದರು.

ಕಾಡಸಿದ್ದೇಶ್ವರ ಸ್ವಾಮೀಜಿ ಕರ್ನಾಟಕದಲ್ಲಿ ಪ್ರವೇಶಿಸದಂತೆ ನಿರ್ಬಂಧ ಹೇರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮನವಿಪತ್ರ ಸ್ವೀಕರಿಸಿ ತಹಶೀಲ್ದಾರ್ ಕೀರ್ತಿ ಚಾಲಕ ಸೂಕ್ತಕ್ರಮಕ್ಕೆ ಸರ್ಕಾರಕ್ಕೆ ತಲುಪಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಬಸವ ಮಹಾಮನೆ ಸಮಿತಿ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು ಭಾಗವಹಿಸಿದ್ದರು.
ಲಿಂಗಾಯತ ಧರ್ಮದ ಮೇಲೆ ಅವರು ಮಾಡಿದ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದವರ ಮೇಲೆ ಮಾಡಿದ ಆರೋಪಗಳನ್ನು ಖಂಡಿಸಿ ಸರಕಾರದ ವಿರುದ್ಧವೂ ಮಾಡಿದ ಆರೋಪಗಳನ್ನು ಖಂಡಿಸಿ ಮನವಿ ಪತ್ರ ನೀಡಿದ್ದು ತುಂಬ ಸೂಕ್ತ. ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ.
ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ.