ಕನ್ನೇರಿ ಸ್ವಾಮಿ ಪೀಠತ್ಯಾಗ ಮಾಡಲಿ: ಮುಂಡರಗಿ ಬಸವ ಭಕ್ತರ ಆಗ್ರಹ

ಕವಿ ಬಂಕಾಪುರ
ಕವಿ ಬಂಕಾಪುರ

ಮುಂಡರಗಿ

ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧಿಪತಿಗಳ ವಿರುದ್ಧ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ಆಶ್ಲೀಲವಾಗಿ ನಿಂದಿಸಿರುವುದನ್ನು ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಭಕ್ತರು ಹಾಗೂ ಮುಂಡರಗಿ ತಾಲೂಕು ಬಸವ ಸಂಸ್ಕೃತಿ ಅಭಿಯಾನ ವೇದಿಕೆ ಸಭೆ ಸೇರಿ ತೀವ್ರವಾಗಿ ಖಂಡಿಸಿದೆ.

ಸಭೆಯ ನಂತರ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮುಖಂಡ ಪಾಲಾಕ್ಷಿ ಗಣದಿನ್ನಿ
ಮಾತನಾಡುತ್ತಾ, ರಾಜ್ಯ ಸರ್ಕಾರವು ಕಳೆದ ವರ್ಷ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಅದರ ವರ್ಷಾಚರಣೆಯ ಪ್ರಯುಕ್ತ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವುದಕ್ಕಾಗಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳುವುದರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಸಂಖ್ಯಾತ ಬಸವಭಕ್ತರು ಭಾಗವಹಿಸಿ ಯಶಸ್ವಿಗೊಳಿಸಿದ್ದನ್ನು ಸಹಿಸದ ಸನಾತನವಾದಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಖಂಡನೀಯವಾಗಿದೆ.

12ನೇ ಶತಮಾನದ ಕಾಲಘಟ್ಟದಲ್ಲಿ ಸಾವಿರಾರು ಸೂಳೆಯರನ್ನು ಶರಣೆಯರನ್ನಾಗಿ ಪರಿವರ್ತನೆ ಮಾಡಿದ್ದು ಲಿಂಗಾಯತ (ಬಸವ) ಧರ್ಮ, ಹಾಗೇ ತೊಡೆಯ ಚರ್ಮ ತಗೆದು ಚಪ್ಪಲಿ ಮಾಡಿ ಅವುಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದು ಸಹ ಲಿಂಗಾಯತ (ಬಸವ) ಧರ್ಮ ಎಂಬ ಪರಿಕಲ್ಪನೆ ಇಲ್ಲದ ಸುಸಂಸ್ಕೃತ, ಸಂಸ್ಕಾರವಿಲ್ಲದವರ ಬಾಯಿಂದ ಇಂತಹ ಆಶ್ಲೀಲವಾದ ಮಾತುಗಳು ಬರುತ್ತವೆ.

ಆದ್ದರಿಂದ ಇಂತಹ ಆಶ್ಲೀಲವಾದ ಹೇಳಿಕೆ ನೀಡಿರುವಂತಹ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ಲಿಂಗಾಯತ ಮಠಾಧೀಶರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕೊಟ್ರೇಶ ಅಂಗಡಿ ಮಾತನಾಡಿ, ಸಮಾಜವನ್ನು ತಿದ್ದುವಂತಹ ಸ್ವಾಮಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಹಾಗೂ ಆಶ್ಲೀಲ ಮಾತುಗಳನ್ನು ಆಡುವದು ಅವರ ಘನತೆ ಗೌರವಕ್ಕೆ ಶೋಭೆ ತರುವುದಿಲ್ಲಾ.

ಆದ್ದರಿಂದ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ಪೀಠತ್ಯಾಗ ಮಾಡಬೇಕು ಹಾಗೂ ಲಿಂಗಾಯತ ಮಠಾಧೀಶರಲ್ಲಿ ಕ್ಷಮೆ ಕೇಳಬೇಕು ಹಾಗೇ ಮುಂದೆಯು ಇದೇ ರೀತಿ ಇಲ್ಲಸಲ್ಲದ ಹೇಳಿಕೆ ನೀಡಿದರೆ ಅವರ ವಿರುದ್ಧ ಬಸವ ಸಾಂಸ್ಕೃತಿಕ ವೇದಿಕೆಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.

ಶಿವಯೋಗಿ ಗಡ್ಡದ, ಕೊಟ್ರೇಶ್ ಅಂಗಡಿ, ದೇವು ಹಡಪದ ಮಾತಾಡಿ, ಅಭಿಯಾನದ ಯಶಸ್ಸು ಕಂಡು ಸಹಿಸದೆ ಬಸವಧರ್ಮಿಯರನ್ನು ನಿಂದಿಸಿದಕ್ಕೆ ಅವರ ಹೊಲಸು ಭಾಯಿಗೆ ತಕ್ಕ ಪಾಠ ಕಲಿಸಬೇಕು ಅಂದರು.

ಈ ಸಂಧರ್ಭದಲ್ಲಿ ಈಶಪ್ಪ ಬೆಟಗೇರಿ, ವಿರೂಪಾಕ್ಷ ಹರಗಿನಡೋಣೆ, ಉಮೇಶ ಹಿರೇಮಠ, ಶಂಭುಲಿಂಗಯ್ಯ ಸೊಪ್ಪಿನಮಠ, ಶಿವಯೋಗಿ ಕೊಪ್ಪಳ, ಶಿವು ಹಡಪದ, ಗಿರೀಶಗೌಡ ಪಾಟೀಲ, ಶಿವು ವಾಲಿಕಾರ, ಸದಾಶಿವಯ್ಯ ಕಬ್ಬೂರಮಠ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *