ಚಿತ್ರದುರ್ಗ
ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಅಂಗವಾಗಿ ಈ ವರ್ಷದ `ಶರಣ ಸಂಸ್ಕೃತಿ ಉತ್ಸವ’ವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಶನಿವಾರ ಹೇಳಿದರು.
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಜಯದೇವ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಹಾಗು ಶರಣ ಸಂಸ್ಕೃತಿ-2024 ಉತ್ಸವದ ಅಂಗವಾಗಿ 5-10-2024 ರಿಂದ 13-10-2024ರವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳ ವಿವರವನ್ನು ನೀಡಿದರು.
ಪೂಜ್ಯರ ಜನ್ಮ ಶತಮಾನೋತ್ಸವವನ್ನು 1975ರಲ್ಲಿ ಚಿತ್ರದುರ್ಗ-ದಾವಣಗೆರೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಅಂದಿನ ಪ್ರಧಾನಮಂತ್ರಿಗಳಾದ ಶ್ರೀ ಮೊರಾರ್ಜಿ ದೇಸಾಯಿಯವರು ಭಾಗವಹಿಸಿದ್ದರು ಎಂದು ನೆನಪು ಮಾಡಿಕೊಂಡರು.

ಯೋಗ ಮತ್ತು ಶಿವಯೋಗ
ದಿ. 25-09-2024 ರಿಂದ 04-10-2024 ರವರೆಗೆ ಶರಣಸಂಸ್ಕೃತಿ ಉತ್ಸವ ಪೂರ್ವಭಾವಿಯಾಗಿ ಖ್ಯಾತ ಯೋಗ ಗುರು ಶ್ರೀ ಚೆನ್ನಬಸವಣ್ಣನವರು ಅವರಿಂದ ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಶಿವಯೋಗವನ್ನು ಏರ್ಪಡಿಸಲಾಗಿದೆ.
ಜಯದೇವ ಕಪ್ ಕ್ರೀಡಾಕೂಟ, ಬೈಕ್ ರ‍್ಯಾಲಿ
ಚಿತ್ರದುರ್ಗ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಹೊನಲು-ಬೆಳಕಿನ ಜಯದೇವ ಕಪ್ ಕ್ರೀಡಾಕೂಟಕ್ಕೆ ಅಕ್ಟೋಬರ್ 1ರಂದು ಮಂಗಳವಾರ ಮುಂಜಾನೆ ಶ್ರೀಮಠದಿಂದ ಬೈಕ್ ರ‍್ಯಾಲಿಯೊಂದಿಗೆ ವರ್ಣರಂಜಿತ ವಿದ್ಯುಕ್ತ ಚಾಲನೆ ನೀಡಲಾಗುವುದು.
ಜಾಥಾವು ಕನಕ ವೃತ್ತದಿಂದ ಪ್ರಾರಂಭವಾಗಿ ಬುರುಜನಹಟ್ಟಿ ವೃತ್ತ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಪ್ರಧಾನ ಅಂಚೆ ಕಛೇರಿ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾö್ಯಂಡ್, ಬಿ.ಡಿ. ರಸ್ತೆ, ಜೆ.ಎಂ.ಐ.ಟಿ. ವೃತ್ತದಿಂದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಕೊನೆಗೊಳ್ಳಲಿದೆ.
ಚಿತ್ರದುರ್ಗ ಜಿಲ್ಲೆಯ ಯುವಕ್ರೀಡಾ ಪ್ರತಿಭಾ ಶೋಧ ಹಾಗೂ ಜಿಲ್ಲೆಯ ಕ್ರೀಡಾಲೋಕವನ್ನು ವಿಸ್ತರಿಸುವ ಮತ್ತು ಉತ್ತೇಜಿಸುವ ಆಶಯದೊಂದಿಗೆ ನಡೆಯುವ ಈ ಕ್ರೀಡಾಕೂಟವು ಅಕ್ಟೋಬರ್ 1 ರಿಂದ 7 ರವರೆಗೆ ನಡೆಯಲಿದ್ದು, ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 17 ವರ್ಷದೊಳಗಿನ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ೆ ಕಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ಕ್ರಿಕೆಟ್, ವಾಲಿಬಾಲ್ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥ್ರೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳು ನಡೆಯಲಿವೆ.
ಸಹಜ ಶಿವಯೋಗ
ದಿನಾಂಕ 5-10-2024 ರಿಂದ 13-10-2024 ರವರೆಗೆ ಪ್ರತಿನಿತ್ಯ ಬೆಳಗ್ಗೆ ೭.೩೦ಕ್ಕೆ ಸಹಜ ಶಿವಯೋಗವನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 5,6 ಮತ್ತು 7ರಂದು ಬೆಳಗ್ಗೆ 10.30ಕ್ಕೆ ವಚನಕಮ್ಮಟ ಗೋಷ್ಠಿಗಳು ನಡೆಯಲಿದ್ದು, ನಾಡಿನ ವಿವಿಧ ಚಿಂತಕರುಗಳು ಭಾಗವಹಿಸುವರು.
ಪಲ್ಲಕ್ಕಿ ಉತ್ಸವ, ಪಥ ಸಂಚಲನ
ದಿನಾಂಕ 5-10-2024 ರಂದು ಅಪರಾಹ್ನ 4 ಗಂಟೆಗೆ ಶ್ರೀ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನವು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೀಲಕಂಠೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಿ.ಡಿ.ರಸ್ತೆ ಮೂಲಕ ಹಳೆಯ ಮಾಧ್ಯಮಿಕ ಶಾಲಾ ಆವರಣದವರೆಗೆ ನಡೆಯಲಿದೆ.
ಕೃಷಿ ಮತ್ತು ಕೈಗಾರಿಕೆ ಮೇಳ
ದಿ. 8-10-2024ರಂದು ಕೃಷಿ ಮತ್ತು ಕೈಗಾರಿಕೆ ಮೇಳ ಮತ್ತು ಪ್ರದರ್ಶನ ಇದ್ದು, ಸಚಿವರುಗಳಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಎನ್.ಚೆಲುವರಾಯಸ್ವಾಮಿ, ಶ್ರೀ ಶರಣಬಸಪ್ಪ ದರ್ಶನಾಪೂರ, ಶ್ರೀ ಹೆಚ್.ಕೆ. ಪಾಟೀಲ್, ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳು ಭಾಗವಹಿಸುವರು.
ವಿಚಾರ ಸಂಕಿರಣ
ದಿನಾಂಕ 8, 9, 10 ರಂದು ಪ್ರತಿದಿನ ಬೆಳಗ್ಗೆ 10.30 ಗಂಟೆಗೆ ಮತ್ತು ಸಂಜೆ 6.೦೦ ಗಂಟೆಗೆ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ನಿಮಿತ್ತ ವಿಚಾರ ಸಂಕಿರಣಗಳು ನಡೆಯಲಿದ್ದು, ತುಮಕೂರಿನ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ನಿಡಸೂಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು, ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ನಿಡುಮಾಮಿಡಿ ಮಠದ ಡಾ. ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ಜಗದೀಶ್ ಶೆಟ್ಟರ್, ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಮೊದಲಾದವರು ಪಾಲ್ಗೊಳ್ಳುವರು.
ಈ ಸಮಾರಂಭಗಳಲ್ಲಿ ಜಯದೇವ ಜಗದ್ಗುರುಗಳ ಜೀವನ ಮತ್ತು ಸಾಧನೆ, ಶೂನ್ಯಪೀಠ-ಮುರುಘಾ ಪರಂಪರೆಯಲ್ಲಿ ಜಯದೇವರು, ಜಯದೇವ ಜಗದ್ಗುರುಗಳವರ ಸಾಹಿತ್ಯ, ಸಂಸ್ಕೃತಿ ಪ್ರೀತಿ, ಜಯದೇವ ಜಗದ್ಗುರುಗಳ ಬಾಲ್ಯ ಮತ್ತು ಶಿಕ್ಷಣ, ಜಯದೇವ ಜಗದ್ಗುರುಗಳು – ಅರಮನೆ-ಗುರುಮನೆ, ಜಯದೇವ ಜಗದ್ಗುರುಗಳ ವಿದ್ವತ್ ಹಾಗೂ ಶಾಖಾಮಠಗಳು, ಜಯದೇವ ಜಗದ್ಗುರುಗಳು ಮತ್ತು ಅಡ್ಡಪಲ್ಲಕ್ಕಿ ಮತ್ತು ಜಯದೇವ ಜಗದ್ಗುರುಗಳು-ಸಮಕಾಲೀನರು ವಿಷಯ ಚಿಂತನೆಗಳು ನಡೆಯಲಿವೆ.
ಚಿನ್ಮೂಲಾದ್ರಿ ಚಿದ್ರೂಪಿ ಸಂಪುಟ ಲೋಕಾರ್ಪಣೆ
ದಿ. 8-10-2024 ರಂದು ಸಂಜೆ 6.೦೦ ಗಂಟೆಗೆ ನಡೆಯುವ ಸಮಾರಂಭದಲ್ಲಿಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಶ್ರೀ ಜಯದೇವ ಜಗದ್ಗುರುಗಳವರ ಸಂಂಸ್ಮರಣ ಗ್ರಂಥ ಚಿನ್ಮೂಲಾದ್ರಿ ಚಿದ್ರೂಪಿ ಸಂಪುಟವನ್ನು ಲೋಕಾರ್ಪಣೆ ಗೊಳಿಸುವರು. ದಿನಾಂಕ 11-10-2024ರಂದು ಬಸವಕೇಂದ್ರ ಪದಾಧಿಕಾರಿಗಳ ಸಮಾವೇಶ, ಮಹಿಳಾ ಸಮಾವೇಶಗಳು ನಡೆಯಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಶ್ರೀಮತಿ ಶಶಿಕಲಾ ಜೊಲ್ಲೆ ಅವರುಗಳು ಭಾಗವಹಿಸುವರು.
ಜಾನಪದ ಕಲಾಮೇಳ
ದಿನಾಂಕ 12 ರಂದು ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳವು ನಡೆಯಲಿದ್ದು, ಕಲಾಮೇಳವು ಶ್ರೀಮಠದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 4, ಬಿ.ಡಿ. ರಸ್ತೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಮೇಲುದುರ್ಗಕ್ಕೆ ಆಗಮಿಸುವುದು. ಮೆರವಣಿಗೆಯಲ್ಲಿ ಧಾರ್ಮಿಕ, ಐತಿಹಾಸಿಕ, ಸಾಮಾಜಿಕ ಪುಣ್ಯಪುರುಷರ ಸ್ತಬ್ಧ ದೃಶ್ಯಗಳು ಹಾಗೂ ವಿವಿಧ ಜನಪದ ಕಲಾತಂಡಗಳು ಭಾಗವಹಿಸುವುವು. ಸಂಜೆ ೬.೩೦ ಗಂಟೆಗೆ ಮಕ್ಕಳ ಸಂಭ್ರಮ ಕಾರ್ಯಕ್ರಮವಿರುತ್ತದೆ.
ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ, ಜಂಗೀ ಕುಸ್ತಿ
ದಿನಾಂಕ 13 ರಂದು ಬೆಳಗ್ಗೆ ಶ್ರೀ ಮುರಿಗೆ ಶಾಂತವೀರ ಸ್ವಾಮಿಗಳವರ ಭಾವಚಿತ್ರ ಶೂನ್ಯ ಪೀಠಾರೋಹಣ, ಧರ್ಮಗುರು ಬಸವಣ್ಣನವರ ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಮತ್ತು ಶ್ರೀ ಜಯದೇವ ಜಂಗೀಕುಸ್ತಿ ಹಾಗೂ ಸಂಜೆ 6.೦೦ ಗಂಟೆಗೆ ಸಮಾರೋಪ ಮತ್ತು ಸಂಗೀತ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ. ಬಸವಪ್ರಭು ಸ್ವಾಮಿಗಳು, ಕೆ.ಎಂ.ವೀರೇಶ್, ಟಿ.ಎಸ್.ಎನ್. ಜಯಣ್ಣ, ಕಲ್ಲೇಶಯ್ಯ, ಸುರೇಶ್‌ಬಾಬು, ಡಿ.ಎಸ್. ಮಲ್ಲಿಕಾರ್ಜುನ್, ಮಹಡಿ ಶಿವಮೂರ್ತಿ, ಹೆಚ್.ಸಿ. ನಿರಂಜನಮೂರ್ತಿ, ಶ್ರೀಮತಿ ರುದ್ರಾಣಿ ಗಂಗಾಧರ್, ಶ್ರೀಮತಿ ದೇವಿಕುಮಾರಿ ವಿಶ್ವನಾಥ್, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ಶ್ರೀಮತಿ ಲತಾ ಉಮೇಶ್, ರುದ್ರಪ್ಪ, ಸಿದ್ದೇಶ್ , ಕೃಷ್ಣಪ್ಪ, ಶ್ರೀನಿವಾಸ್, ಉಮೇಶ್, ಬಸವರಾಜ ಕಟ್ಟಿ, ಎನ್. ತಿಪ್ಪಣ್ಣ, ಪಿ.ವೀರೇಂದ್ರಕುಮಾರ್, ಶಶಿಧರ ಬಾಬು, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ವಿವಿಧ ಸಮಾಜದ ಮುಖಂಡರುಗಳು ಇದ್ದರು.