ನಾಗಪಂಚಮಿಯ ಸಂದರ್ಭದಲ್ಲಿ ಹಾವಿಗೆ ಅಥವಾ ಕಲ್ಲು-ಮಣ್ಣಿನ ನಾಗರಗಳಿಗೆ ಹಾಲೆರೆಯುವುದು ಅಂಧಶ್ರದ್ಧೆ ಎನಿಸುತ್ತದೆ. ಹಾಲು ಹಾವಿನ ಆಹಾರವಲ್ಲ. ಹಾವಿನ ಮೂರ್ತಿಗಳಿಗೆ ಹಾಲೆರೆಯುವುದೂ ನಿರರ್ಥಕ.
ಧರ್ಮಗುರು ಬಸವಣ್ಣನವರು “ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ” ಎಂಬ ವಚನದಲ್ಲಿ ಈ ಅರ್ಥಹೀನ ಆಚರಣೆಯನ್ನು ಖಂಡಿಸಿದ್ದಾರೆ.
ಬಸವಾನುಯಾಯಿಗಳು ಇಂತಹ ಅಂಧಶ್ರದ್ಧೆಯನ್ನು ಅನುಸರಿಸದೆ ಹಾಲನ್ನು ಮಕ್ಕಳಿಗೆ, ಆವಶ್ಯಕತೆ ಇರುವವರಿಗೆ ಕುಡಿಸಬೇಕು. ಹಾಲೆರೆಯುವ ಹಬ್ಬವನ್ನು ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸುವುದು ವೈಚಾರಿಕತೆ.
ಬಸವಾನುಯಾಯಿಗಳೆಲ್ಲರೂ ವೈಚಾರಿಕತೆಯನ್ನು ರೂಡಿಸಿಕೊಂಡು ನಾಗರಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ, ಹಾಲೆರೆಯುವ ಹಬ್ಬವನ್ನು ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸಬೇಕು.
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ