ಒಂದು ಸಾರಿಯಲ್ಲ, ನೂರು ಸಾರಿ ಬಸವ ತಾಲಿಬಾನ್ ಅನ್ನುತ್ತೇನೆ: ಕನ್ನೇರಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಭಕ್ತರು ಸಂಯಮ ಕಾಯ್ದುಕೊಂಡರೂ ಕನ್ನೇರಿ ಶ್ರೀ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿ ಏಕವಚನವನ್ನೂ ಬಳಸಿದರು.

ಮಸ್ಕಿ

ಬಸವ ತಾಲಿಬಾನ್, ಹುಚ್ಚು ನಾಯಿಗಳು ಎಂದೆಲ್ಲಾ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿ ವಿವಾದ ಹುಟ್ಟಿಸಿರುವ ಕನ್ನೇರಿ ಶ್ರೀಗಳಿಂದ ಸ್ಪಷ್ಟನೆ ಪಡೆಯಲು ಸುಮಾರು 50 ಬಸವ ಅನುಯಾಯಿಗಳು ಅವರನ್ನು ಶುಕ್ರವಾರ ಭೇಟಿ ಮಾಡಿದರು.

ಮಾತುಕತೆಯಲ್ಲಿ ತಾವು ಸುವರ್ಣ ಟಿವಿಯಲ್ಲಿ ನೀಡಿದ ಹೇಳಿಕೆಗಳನ್ನು ಶ್ರೀಗಳು ಸಮರ್ಥಿಸಿಕೊಂಡಿದ್ದಲ್ಲದೆ ಒಂದು ಸಾರಿಯಲ್ಲ, ನೂರು ಸಾರಿ ಬಸವ ತಾಲಿಬಾನ್ ಎಂದು ಹೇಳುತ್ತೇನೆ ಎಂದು ಹೇಳಿದರು.

ಬಸವ ಭಕ್ತರು ಸಂಯಮ ಕಾಯ್ದುಕೊಂಡರೂ ಕನ್ನೇರಿ ಶ್ರೀ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿ ಏಕವಚನವನ್ನೂ ಬಳಸಿದರು. ಅದಕ್ಕೆ ಸ್ವಲ್ಪ ತೀಕ್ಷ್ಣ ಪ್ರತಿಕ್ರಿಯೆ ಬರುವ ಸೂಚನೆ ಕಾಣುತ್ತಿದ್ದಂತೆಯೇ ಚರ್ಚೆ ಮೊಟಕುಗಳಿಸಿ ಹೊರ ನಡೆದರು ಎಂದು ಸಭೆಯಲ್ಲಿ ಭಾಗವಹಿಸಿದ ಕೆಲವರು ಬಸವ ಮೀಡಿಯಾಗೆ ಹೇಳಿದ್ದಾರೆ.

ಇರಕಲ್ ಕಾರ್ಯಕ್ರಮ

ಮಸ್ಕಿ ತಾಲೂಕಿನ ಇರಕಲ್ಲಿನ ಕಾರ್ಯಕ್ರಮವೊಂದಕ್ಕೆ ಕನ್ನೇರಿ ಶ್ರೀ ಶುಕ್ರವಾರ ಬರುತ್ತಿದ್ದಾರೆಂದು ತಿಳಿದು ಅವರನ್ನು ಸಂಪರ್ಕಿಸಲು ಸಿಂಧನೂರಿನ ಬಸವಪರ ಸಂಘಟನೆಗಳ ಪ್ರಮುಖರು ಪ್ರಯತ್ನಿಸಿದರು.

ಎರಡು ಮೂರು ದಿನ ಕಾದರೂ ಕನ್ನೇರಿ ಶ್ರೀ ಭೇಟಿಯಾಗಲು ಒಪ್ಪಲಿಲ್ಲ. ಆಗ ಅವರಿಗೆ ಆಪ್ತರಾಗಿರುವ ಮತ್ತೊಬ್ಬ ಸ್ವಾಮೀಜಿಯವರ ಮೂಲಕ ಸಂಪರ್ಕಿಸಲಾಯಿತು. ಬಸವ ಸಂಘಟನೆಗಳು ಧಿಕ್ಕಾರ ಕೂಗುವುದಿಲ್ಲ, ಸಂಘರ್ಷ ಮಾಡಿಕೊಳ್ಳುವುದಿಲ್ಲ, ಸೌಮ್ಯ, ಗೌರವದಿಂದಲೇ ವರ್ತಿಸುತ್ತೇವೆ ಎಂದು ಮಾತು ಕೊಟ್ಟಾಗ ಕನ್ನೇರಿ ಶ್ರೀ ಭೇಟಿಯಾಗಲು ಒಪ್ಪಿದರು.

ಶುಕ್ರವಾರ ಮಧ್ಯಾಹ್ನ ಸಿರವಾರ ತಾಲೂಕಿನ ಪಾಮನಕೆಲ್ಲೂರಿನ ಖಾಸಗಿ ತೋಟವೊಂದರಲ್ಲಿ ರಾಯಚೂರು, ಸಿಂಧನೂರು, ಮಾನ್ವಿಗಳಿಂದ ಹೋಗಿದ್ದ ಸುಮಾರು 50 ಬಸವ ಭಕ್ತರು ಶ್ರೀಗಳನ್ನು ಭೇಟಿ ಮಾಡಿದರು.

ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದ ಬಸವಣ್ಣನವರ ಅನುಯಾಯಿಗಳನ್ನು ಬಸವ ತಾಲಿಬಾನ್ ಎಂದು ಕರೆದಿದ್ದು ಸರಿಯಲ್ಲ ಎಂದು ಪಿ. ರುದ್ರಪ್ಪ ಶ್ರೀಗಳಿಗೆ ಹೇಳಿದರು.

ಒರಟು ಮಾತು

ಅದಕ್ಕೆ ಶ್ರೀಗಳು ಯಾವುದೇ ಸ್ಪಷ್ಟನೆ ಕೊಡದೆ ತಾವು ಟಿವಿಯಲ್ಲಿ ಹೇಳಿದ್ದನ್ನೇ ಮುಂದುವರೆಸಿದರು.

  • > ತಾವು ಹೇಳಿದ್ದು ಕೆಲವರಿಗೆ ಅನ್ವಯಿಸುತ್ತೆ, ಅವರೇ ಸುಮ್ಮನಿರುವಾಗ ನೀವೇಕೆ ಬಂದಿದ್ದೀರಿ.
  • > ನಮ್ಮದು ಬಸವ ತತ್ವದ ಮಠ, ಆದರೆ ಬಸವಣ್ಣ ಸನಾತನ ಧರ್ಮವನ್ನು ತಿರಸ್ಕರಿಸಲಿಲ್ಲ. ಅಲ್ಲೊಂದು ಇಲ್ಲೊಂದು ವಚನಗಳು ಮಾತ್ರ ಸಾಂದರ್ಭಿಕವಾಗಿ ವೈದಿಕ ಧರ್ಮವನ್ನು, ವೇದಗಳನ್ನು ಖಂಡಿಸುತ್ತವೆ.
  • > ಕುಂಕುಮ ಹಾಕಬಾರದೆಂದು ಯಾವ ವಚನವೂ ಹೇಳಿಲ್ಲ
  • > ಚರ್ಚೆ ಇಲ್ಲಿ ಬೇಡ ನಮ್ಮ ಮಠಕ್ಕೆ ಬನ್ನಿ, ಬೇಕಾದರೆ ಅಜಿತ್ ಹನುಮಕ್ಕನವರಿಗೆ ಹೇಳಿ ಮತ್ತೆ ಟಿವಿಯಲ್ಲಿ ಚರ್ಚೆ ಏರ್ಪಡಿಸುತ್ತೇನೆ.

ಶ್ರೀಗಳು ಯಾರ ಪ್ರಶ್ನೆಯನ್ನು ಕೇಳುವ ತಾಳ್ಮೆ, ಉತ್ತರಿಸುವ ಸೌಜನ್ಯ ತೋರಿಸಲಿಲ್ಲ. ಬಹಳ ಸಿಟ್ಟಿನಲ್ಲಿದ್ದರು, ಯಾವುದೋ ಒತ್ತಡದಲ್ಲಿ ಇದ್ದಂತೆ ವರ್ತಿಸುತ್ತಿದ್ದರು, ಎಂದು ವೀರಭದ್ರಗೌಡ ಅಮರಾಪುರ ಹೇಳಿದರು.

ಮಧ್ಯವರ್ತಿಯಾಗಿ ಬಂದಿದ್ದ ಸ್ವಾಮೀಜಿಗೆ ಕೊಟ್ಟಿದ್ದ ಮಾತಿನಂತೆ ಬಸವ ಅನುಯಾಯಿಗಳು ಉದ್ವೇಗಕ್ಕೆ ಒಳಗಾಗದೆ ಸೌಜನ್ಯದಿಂದಲೇ ವರ್ತಿಸಿದರು. ಆದರೂ ಚರ್ಚೆ ಕಾವೇರಿತು.

ಅಹಂ, ಆಕ್ರೋಶ, ಅಹಂಕಾರ

ಶ್ರೀಗಳು ಕುಂಕುಮ ನಿರಾಕರಿಸುವ ಯಾವುದೇ ವಚನವಿಲ್ಲಾ ಎಂದರು. ಅದಕ್ಕೆ ಎಪ್ಪತೈದು ವರ್ಷದ ಹಿರಿಯರಾದ ವೀರಭದ್ರಗೌಡ ಅಮರಾಪುರ ಕುಂಕುಮ ಖಂಡಿಸುವ ಮಡಿವಾಳ ಮಾಚಿದೇವರ ವಚನವನ್ನು ಹೇಳಲು ಪ್ರಯತ್ನಿಸಿದರೂ ಶ್ರೀಗಳು ಅವಕಾಶ ಕೊಡಲಿಲ್ಲ. ಬದಲಾಗಿ ಅವರನ್ನು ಏಕವಚನದಲ್ಲಿ ಮಾತನಾಡಿಸಿದಾಗ ಎಲ್ಲಾ ಬಸವ ಭಕ್ತರು ಶ್ರೀಗಳ ಮೇಲೆ ಹರಿಹಾಯ್ದರು.

ಬಸವಭಕ್ತರು ತಾಲಿಬಾನಿಗಳು, ಹುಚ್ಚುನಾಯಿಗಳು ಹೇಳಿಕೆಯನ್ನು ಬಸವಲಿಂಗಪ್ಪ ಬಾದರ್ಲಿ ಉಗ್ರವಾಗಿ ಖಂಡಿಸಿದರು. ನೀವು ಬಳಸಿದ ಶಬ್ದ ನಿಮಗೆ ಶೋಭೆ ತರುವಂತಹದ್ದಲ್ಲ ಎಂದಾಗ ಶ್ರೀಗಳು ಅದೇ ಪದವನ್ನು ನೂರು ಬಾರಿ ಬಳಸುತ್ತೇನೆ ಎಂದಾಗ ನೆರೆದ ಬಸವ ಭಕ್ತರು ರೊಚ್ಚಿಗೆದ್ದರು.

ನೀವು ಬಳಸಿದಂತೆ ನಾವು ಪದ ಪ್ರಯೋಗ ಮಾಡಲು ಬರುತ್ತದೆ ಸ್ವಾಮಿಗಳು ಕಾಲಿಗೆ ಬುದ್ದಿ ಹೇಳಿದರು.

ಶ್ರೀಗಳಲ್ಲಿ ನಾವು ನೋಡಿದ್ದು ಸಿಟ್ಟು. ಇವರು ಬಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರಲ್ಲ ಎನ್ನುವ ಆಕ್ರೋಶ. ಅವರಲ್ಲಿ ಅಹಂ, ಅಹಂಕಾರ ತುಂಬಿಕೊಂಡಿದೆ. ಅವರು ಅಜ್ಞಾನದಿಂದ ಯಾವುದೊ ಬೇರೆ ಉದ್ದೇಶದಿಂದಲೇ ಮಾತನಾಡುತ್ತಿದ್ದುದು ಕಂಡು ಬಂತು, ಎಂದು ಸಭೆಯಲ್ಲಿ ಇದ್ದ ಒಬ್ಬರು ಹೇಳಿದರು.

ಶ್ರೀಗಳ ವರ್ತನೆಯಿಂದ ವಾತಾವರಣ ವಿಷಮಗೊಂಡಿತ್ತು. ಅವರು ಹೋದ ಮೇಲೆ ಪ್ರಾರ್ಥನೆ ಮಾಡಿದೆವು. ತೋಟದವರು ಕೊಟ್ಟ ಹಣ್ಣು ತಿಂದು ಬಂದೆವು, ಎಂದು ರುದ್ರಪ್ಪ ಹೇಳಿದರು.

ಶ್ರೀಗಳ ಕಡೆಯವರು ಮಾತುಕತೆಯ ಫೋಟೋ, ವಿಡಿಯೋಗಳನ್ನು ತೆಗೆಯಲೂ ಆಕ್ಷೇಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
13 Comments
  • ಶ್ರೀಗಳು ಶ್ರೀಗಳಂತೆ ವರ್ತಿಸಬೇಕು. ಕಾವಿ ತೊಟ್ಟು ಸ್ವಾಮಿತ್ವ ಪಡೆದೆನೆಂಬ ಅಹಂಕಾರ ಬೇಡ. ಜಂಗಮ ತಂಗಾಳಿಯಂತೆ ಸೂಸಬೇಕು. ಭಕ್ತರು ಬಸವಣ್ಣನ ಭಕ್ತರೆ ಹೊರತು ನಿಮ್ಮ ಭಕ್ತರಲ್ಲ…. ಅಜಿತ ಹನ್ಮಕ್ಕ ಬೇಡ ಗುರುಗಳೆ ಬಸವ ಬಸವ ಭಕ್ತರೆ ವೇದಿಕೆ ರಡಿ ಮಾಡತ್ತೇವೆ….. ದಿನ, ಸ್ಥಳ ನಿಗದಿಪಡಿಸಿ

  • ಕನ್ನೇರಿ ಶ್ರೀ ಗಳನ್ನು ನಾವೇ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ. ಎಲ್ಲಾ ಭಕ್ತರು ನಿರ್ಲಕ್ಷಿಸಿದ್ದರೆ ತಾವೆ
    ದಾರಿಗೆ ಬರುವರು

  • ತಾಲಿಬಾನಿ ಆಗಿದ್ದರೆ ಸ್ವಾಮಿ ಇವತ್ತು ಕನ್ನೇರಿ ಮಠದಲ್ಲೆ ಇರುತ್ತಿರಲಿಲ್ಲ ಬೀದಿ ಬದಿ ಹೆಣವಾಗಿರುತ್ತಿದ್ದ

  • ಬಸವ ತಾಲಿಬಾನ್ ಎಂದಿರುವ ಇವರ ಮೇಲೆ ರಾಜ್ಯದ ಎಲ್ಲಾ ತಾಲೋಕು ಕೇಂದ್ರಗಳಲ್ಲಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸುವುದಲ್ವದೆ ತಾಲೋಕು ತಹಸೀಲ್ದಾರರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಬೇಕು

  • ಈ ಸ್ವಾಮಿಯ ಹೇಳಿಕೆ ನಂತರ ಬಸವ ಭಕ್ತರು ಸೊಸಿಯಲ್ ಮಿಡಿಯಾದಲ್ಲಿ ಕಾಮೆಂಟಗಳು ನೋಡಿದ ನಂತರ ಈ ಸ್ವಾಮಿ ಹುಚ್ಚ ಆಗಿದ್ದಾನೆ ಅಷ್ಟೇ

  • ಇಂಥಾ ನೀಚರಿಗೆಲ್ಲಾ ಶ್ರೀಗಳು ಎಂಬ ಒಕ್ಕಣೆ ಏಕೆ? ಈತ ಅದಕ್ಕೆ ಅರ್ಹನೆ?

  • ವರ್ಣಶ್ರಮಿಗಳಿಗೆ ಬಕೆಟ್ ಹಿಡಿಯುತ್ತಿರುವ ನೀಚ ಸ್ವಾಮಿ 🤔, ಇವನನ್ನು ಕರ್ನಾಟಕದ ಎಲ್ಲರೂ ಬಹಿಷ್ಕರಿಸಬೇಕು

  • ಆ ಸ್ವಾಮಿ ಸಾವಯವ ಹೆಸರಿನಲ್ಲಿ ದೊಡ್ಡ ಉದ್ದಿಮೆ ಮಾಡಿ ಅದೆ ಘಮಿಂಡಿಯಲ್ಲಿ ಮಾತನಾಡುತ್ತಿದ್ದಾನೆ. ಬಸವ ಭಕ್ತರು ಅವನ ಎಲ್ಲಾ ಕಾರ್ಯಕ್ರಮಕ್ಕೆ ಘೆರಾವ ಹಾಕಬೇಕು.

  • ಸನಾತನಿಯ ಜೊತೆ ಯಾವದೇ ಚರ್ಚೆ ಮಾಡಿದರೂ ಕೂಡಾ ವ್ಯರ್ಥ ಪ್ರಯತ್ನ, ಆದ್ರೆ ಈ ಸ್ವಾಮಿ ಯಾವದೇ ಕಾರ್ಯಕ್ರಮಕ್ಕೆ ಬರದೇ ಹಾಗೆ ವಿರೋಧ ಮಾಡಬೇಕು

  • ಬಸವ ಭಕ್ತರು ಸಂಯಮದಿಂದ ಪ್ರಶ್ರೀಸುವಾಗ ಆ ಸ್ವಾಮಿ ಸಂಯಮ ಕಳೆದುಕೊಂಡು ಮಾತನಾಡಿದ್ದಾನೆಂದರೆ ,ಆ ಸ್ವಾಮಿಗೆ ಸೈದ್ಧಾಂತಿಕವಾಗಿ ಚಚಿ೯ಸಲು ,ವಿಷಯಗಳಿಲ್ಲವೆಂದೇ ಅಥ೯.

  • ಸ್ವಾಮಿಗೆ ರೇಣುಕಾ ಚೌುರಿ ಯ ಭೂತಬಡಿದು ಕೊಂಡಂತೆ ಕಾಣುತ್ತದೆ. ಆ ದ್ದೇವ್ವ ಬಿಡಿಸಬೇಕು , ಆಗ ಬಸವಣ್ಣ ನೆನಪಾಗುತ್ತಾನೆ ಅಷ್ಟೇ?.ನಿಜವಾದ ಲಿಂಗಾಯತ ಧರ್ಮದ ಆದ್ಯಾತ್ಮ ಕಲಿತಾಗ ಲಿಂಗಾಯತ ಧರ್ಮದ ಅರಿವು ಮೂಡುತ್ತದೆ.ವಿಭೂತಿಯ ಬಗ್ಗೆ ಅರಿತಾಗ, ಮಾತ್ರ ನಿನಗೇ ಕುಂಕುಮದ ಬಗ್ಗೆ ವಚನ ಅರ್ಥ ಮಾಡಿಕೊಳ್ಳಲು ಹೊಸದಾಗಿ ಅಧ್ಯಯನ ಶುರೂ ಮಾಡು,

  • ಕನ್ನೆರಿ ಸ್ವಾಮಿ ಕಾವಿಯನ್ನು ಕಳಚಿ ಆರ್ ಎಸ್ ಎಸ್ ನ ಏಜೆಂಟಾಗಿ ಕೆಲಸ ಮಾಡಲು ಯೋಗ್ಯನಾಗಿದ್ದಾನೆ

  • *ವೈದಿಕರೇ ನಡೆಸುತ್ತಿರುವ ಕೆಲ ಮೀಡಿಯಾಗಳು*

    ಬಸವಣ್ಣನ ಹೆಸರು ಹೇಳಿ ಮಠ ಕಟ್ಟಿಕೊಂಡು ವೈದಿಕ ಆಚರಣೆಯನ್ನು ಮಾಡುತ್ತ ಬದುಕುತ್ತಿದ್ದ ಕೆಲ ಕವಿಧಾರಿಗಳನ್ನು ಕರೆಸಿ ಈ ತರಹದ ಹೇಳಿಕೆ ಕೊಡಿಸುತ್ತಿದ್ದಾರೆ ಎಚ್ಚರ!

Leave a Reply

Your email address will not be published. Required fields are marked *